Bryan Johnson: ಸದಾ ಯಂಗ್ ಆಗಿರೋಕೆ ಪ್ರತಿ ದಿನ 111 ಮಾತ್ರೆ ಸೇವನೆ ಮಾಡ್ತಾನೆ ಈತ!
ಯಂಗ್ ಆಗಿರಬೇಕು ಎಂಬುದು ಎಲ್ಲರ ಬಯಕೆ. ಆದ್ರೆ ನಿಸರ್ಗಕ್ಕೆ ವಿರುದ್ಧವಾಗಿ ನಡೆಯಲು ಸಾಧ್ಯವಿಲ್ಲ. ಹುಟ್ಟಿದ್ಮೇಲೆ ವಯಸ್ಸಾಗ್ಲೇಬೇಕು, ಸಾಯಲೇಬೇಕು. ಈ ವಾಸ್ತವ ಒಪ್ಪಿಕೊಳ್ಳಲು ಈತ ಸಿದ್ಧನಿಲ್ಲ. ವಯಸ್ಸಾಗದಂತೆ ನೋಡಿಕೊಳ್ಳಲು ಈತ ಮಾಡ್ತಿರೋದೇನು ಗೊತ್ತಾ?
ಪ್ರತಿ ಬಾರಿ ಹುಟ್ಟು ಹಬ್ಬ ಬಂದಾಗ್ಲೂ ಸಂತೋಷಪಡುವ ಬದಲು ಬಹುತೇಕರಿಗೆ ಬೇಸರ, ಚಿಂತೆ ಕಾಡುತ್ತದೆ. ಇದಕ್ಕೆ ಕಾರಣ ವಯಸ್ಸು ಹೆಚ್ಚಾಗೋದು. 18 ರಿಂದ 25 ವರ್ಷದವರೆಗಿನ ಜೀವನವನ್ನು ಸಂಪೂರ್ಣ ಎಂಜಾಯ್ ಮಾಡುವ ಜನರು ವರ್ಷ 30ಕ್ಕೆ ಬರ್ತಿದ್ದಂತೆ ಚಿಂತೆಗೊಳಗಾಗ್ತಾರೆ. ವಯಸ್ಸಾಗ್ತಿದೆ ಎಂಬ ಆತಂಕ ನಿಧಾನವಾಗಿ ಕಾಡಲು ಶುರುವಾಗುತ್ತದೆ. 40 – 50 ವರ್ಷ ಆಗ್ತಿದ್ದಂತೆ ತಮ್ಮ ವಯಸ್ಸನ್ನು ಮುಚ್ಚಿಟ್ಟುಕೊಳ್ಳಲು ಜನರು ಮುಖಕ್ಕೆ, ಕೂದಲಿಗೆ ಬಣ್ಣ ಬಳಿದುಕೊಳ್ಳಲು ಶುರು ಮಾಡ್ತಾರೆ. ಮೇಕಪ್ ನಿಮ್ಮ ಸುಕ್ಕನ್ನು ಮುಚ್ಚಬಹುದು. ಆದ್ರೆ ನಿಮ್ಮ ದೇಹ ಕಳೆದುಕೊಂಡ ಶಕ್ತಿಯನ್ನು ಮರಳಿಪಡೆಯೋದು ಕಷ್ಟ. 40ರ ಪುರುಷ 18ರಂತೆ ಕೆಲಸ ಮಾಡ್ತಾನೆ ಎಂದು ನಾವು ಬಾಯಿ ಮಾತಿಗೆ ಹೇಳ್ತೇವೆ ಅಷ್ಟೆ. 18ರ ಯುವಕನಂತೆ 40ರ ಪುರುಷ ಕೆಲಸ ಏನೋ ಮಾಡ್ಬಹುದು ಆದ್ರೆ 18ರ ಯುವಕನಂತೆ ಸುಲಭವಾಗಿ ಮಾಡಲು ಸಾಧ್ಯವಾಗೋದಿಲ್ಲ. ಶುಗರ್, ಬಿಪಿ, ದೇಹದ ನೋವು ಆ ವಯಸ್ಸಿನಲ್ಲಿ ಕಾಟಕೊಡಲು ಶುರುಮಾಡಿರುತ್ತದೆ. ಇಲ್ಲೊಬ್ಬ ವ್ಯಕ್ತಿ ತನ್ನ ವಯಸ್ಸು ಮುಚ್ಚಿಡುವ ಬದಲು ವಯಸ್ಸನ್ನು ಹತ್ತಿಕ್ಕಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾನೆ. ದಿನಕ್ಕೆ 111 ಮಾತ್ರೆ ಸೇವನೆ ಮಾಡುವ ವ್ಯಕ್ತಿ ಇದಕ್ಕಾಗಿ ವರ್ಷಕ್ಕೆ ಖರ್ಚು ಮಾಡೋದು ಎಷ್ಟು ಗೊತ್ತಾ?
ಆತನ ಹೆಸರು ಬ್ರಿಯಾನ್ ಜಾನ್ಸನ್ (Brian Johnson). ಆತನಿಗೆ 48 ವರ್ಷ ವಯಸ್ಸು. ಆತ ಶ್ರೀಮಂತ ಉದ್ಯಮಿ (Businessman). ತನ್ನ ಯೌವನವನ್ನು ಕಾಪಾಡಿಕೊಳ್ಳಲು ಆತ ಪ್ರತಿ ವರ್ಷ 16 ಕೋಟಿ ರೂಪಾಯಿ ಖರ್ಚು ಮಾಡ್ತಾನೆ. ಸಂದರ್ಶನವೊಂದರಲ್ಲಿ ಮಾತನಾಡಿದ ಬ್ರಿಯಾನ್ ಜಾನ್ಸನ್, ಇದಕ್ಕಾಗಿ ತನ್ನ ಮಗನ ರಕ್ತ (Blood) ಪಡೆದಿದ್ದೇನೆ ಎಂದಿದ್ದಾರೆ.
ಹೊಸ ಫೋಟೋ ಶೂಟ್ ಮೂಲಕ ಇಂಟರ್ನೆಟ್‌ಗೆ ಬೆಂಕಿ ಹಚ್ಚಿದ ಅಗ್ನಿಸಾಕ್ಷಿ ನಟಿ
ಬ್ರಿಯಾನ್ ಜಾನ್ಸನ್ ಗೆ ತನ್ನ ವಯಸ್ಸು ಹೆಚ್ಚಾಗೋದು ಇಷ್ಟವಿಲ್ಲ. ಅದಕ್ಕೆ ಭಯವ್ಯಕ್ತಪಡಿಸುತ್ತಾನೆ. ಆರೋಗ್ಯ ಮತ್ತು ವಯಸ್ಸುವಿರೋಧಿ ಪ್ರಕ್ರಿಯೆಯನ್ನು ಪತ್ತೆಹಚ್ಚುವ ಅನೇಕ ಸಾಧನಗಳನ್ನು ಬಳಸುತ್ತಾನೆ. ಜೀವಿತಾವಧಿಯನ್ನು ಹೆಚ್ಚಿಸುವ ಬ್ಲೂಪ್ರಿಂಟ್ ರಚಿಸುವ ನಿಟ್ಟಿನಲ್ಲಿ ಆತ ಕೆಲಸ ಮಾಡ್ತಿದ್ದಾನೆ. ಇದರಲ್ಲಿ ಅವರ ದೇಹಕ್ಕೆ ಸಂಬಂಧಿಸಿದ ಪ್ರತಿಯೊಂದು ಮಾಹಿತಿಯನ್ನು ವೈದ್ಯರಿಗೆ ನೀಡಲಾಗುತ್ತದೆ. ವೈದ್ಯರು ದತ್ತಾಂಶದ ಆಧಾರದ ಮೇಲೆ ವಿವಿಧ ವಿಷಯಗಳನ್ನು ಸೂಚಿಸುತ್ತಾರೆ. ಬ್ರಿಯಾನ್ ಜಾನ್ಸನ್ ಅವುಗಳನ್ನು ಪಾಲನೆ ಮಾಡುತ್ತಾನೆ. ಇದರಿಂದ ವ್ಯಕ್ತಿಯ ಜೈವಿಕ ವಯಸ್ಸು ಕಡಿಮೆಯಾಗುತ್ತದೆ ಎನ್ನುತ್ತಾನೆ ಬ್ರಿಯಾನ್ ಜಾನ್ಸನ್.
WORLD HEART DAY: ನಿದ್ದೆಯಲ್ಲೇ ಹಾರ್ಟ್‌ಅಟ್ಯಾಕ್ ಆಗೋದ್ಯಾಕೆ..ಹೀಗಾಗದಿರಲು ಏನ್ಮಾಡ್ಬೇಕು?
ಬ್ರಿಯಾನ್ ಪ್ರತಿದಿನ ಒಟ್ಟು 111 ವಿವಿಧ ರೀತಿಯ ಮಾತ್ರೆಗಳನ್ನು ಸೇವನೆ ಮಾಡ್ತಾರೆ. ತಲೆಗೆ ಬೇಸ್‌ಬಾಲ್ ಕ್ಯಾಪ್ ಧರಿಸ್ತಾರೆ. ತಮ್ಮ ಮಲದ ಮಾದರಿಯನ್ನು ಸಂಗ್ರಹಿಸುತ್ತಾರೆ. ರಾತ್ರಿ ಖಾಸಗಿ ಅಂಗಕ್ಕೆ ಸಣ್ಣ ಜೆಟ್ ಪ್ಯಾಕ್ ಜೋಡಿಸಿ ಮಲಗುತ್ತಾರೆ. ಇಷ್ಟೇ ಅಲ್ಲ ಪ್ರತಿ ದಿನ 8 ಗಂಟೆ ನಿದ್ರೆ ಮಾಡುವ ಅವರು, 8 ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡುವುದು ಮತ್ತು ತಪ್ಪಾಗಿ ಆಹಾರ ಸೇವನೆ ಮಾಡೋದನ್ನು ಹಿಂಸಾಚಾರ ಎಂದು ಕರೆಯುತ್ತಾರೆ.
46 ನೇ ವಯಸ್ಸಿನಲ್ಲಿ ತನ್ನ ದೇಹದ ಭಾಗಗಳು 18 ವರ್ಷದ ಹುಡುಗನಂತೆಯೇ ಉಳಿಯಬೇಕು ಮತ್ತು ಅದೇ ರೀತಿಯಲ್ಲಿ ಕೆಲಸ ಮಾಡಬೇಕು ಎಂಬುದು ಬ್ರಿಯಾನ್ ಗುರಿಯಾಗಿದೆ. ವೈದ್ಯರು ನೀಡಿದ ಡೇಟಾ ಪ್ರಕಾರ, ಬ್ರಿಯಾನ್ ದೇಹದ ಮೂಳೆಗಳಿಗೆ 30 ವರ್ಷ ಆಗಿದೆಯಂತೆ. ಅವರ ಹೃದಯಕ್ಕೆ 37 ವರ್ಷ ಆಗಿದೆ. ಬ್ರಿಯಾನ್ ಇಲೆಕ್ಟ್ರಿಕ್ ಆಡಿ ಹೊಂದಿದ್ದು, ಅದನ್ನು ನಿಧಾನವಾಗಿ ಚಲಾಯಿಸುತ್ತಾರೆ. ವೇಗವಾಗಿ ಗಾಡಿ ಚಲಾಯಿಸೋದು ತುಂಬಾ ಅಪಾಯಕಾರಿ ಎಂದು ಬ್ರಿಯಾನ್ ನಂಬಿದ್ದಾರೆ. ಅಷ್ಟೇ ಅಲ್ಲ, ರಕ್ತ ಪರಿಚಲನೆ ಸುಧಾರಿಸುತ್ತದೆ ಎಂದು ವೈದ್ಯರು ಹೇಳಿದ್ದ ಕಾರಣ, ಬ್ರಿಯಾನ್ ತನ್ನ ಮಗನ ರಕ್ತವನ್ನು ತಾವು ಪಡೆದಿದ್ದಾರೆ.