ಯುವಕನೋರ್ವ ತುಟಿಗೆ ಲಿಪ್‌ಸ್ಟಿಕ್ ಹಚ್ಚಿಕೊಂಡು ಹಣೆಗೆ ವಿವಾಹಿತ ಹೆಣ್ಣು ಮಕ್ಕಳು ಇಡುವಂತೆ ದೊಡ್ಡದಾದ ಕುಂಕುಮ ಇರಿಸಿಕೊಂಡು ಹೊಟ್ಟೆ, ಹೊಕ್ಕಳು ತೋರಿಸುತ್ತಾ ದೆಹಲಿ ಮೆಟ್ರೋದ ಪ್ಲಾಟ್‌ಫಾರ್ಮ್ ಮೇಲೆ ಓಡಾಡಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. 

ದೆಹಲಿ ಮೆಟ್ರೋ ಸ್ಟೇಷನ್ ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುತ್ತದೆ. ಬಹುತೇಕ ಸೋಶಿಯಲ್ ಮೀಡಿಯಾ ಇನ್ಸ್‌ಫ್ಲುಯೆನ್ಸ್‌ಗಳು ವಿವಿಧ ಅವಾತರಗಳ ಕಾರಣಕ್ಕೆ ದೆಹಲಿ ಮೆಟ್ರೋ ಸದಾ ಸುದ್ದಿಯಲ್ಲಿರುತ್ತದೆ. ಅದೇ ರೀತಿ ಈ ಬಾರಿಯೂ ಕೂಡ ದೆಹಲಿ ಮೆಟ್ರೋ ಸ್ಟೇಷನ್ ಯುವಕನೋರ್ವನ ವಿಲಕ್ಷಣವಾದ ವೇಷಭೂಷಣಕ್ಕೆ ಸುದ್ದಿಯಾಯ್ತು, ಯುವಕನೋರ್ವ ತುಟಿಗೆ ಲಿಪ್‌ಸ್ಟಿಕ್ ಹಚ್ಚಿಕೊಂಡು ಹಣೆಗೆ ವಿವಾಹಿತ ಹೆಣ್ಣು ಮಕ್ಕಳು ಇಡುವಂತೆ ದೊಡ್ಡದಾದ ಕುಂಕುಮ ಇರಿಸಿಕೊಂಡು ಹೊಟ್ಟೆ, ಹೊಕ್ಕಳು ತೋರಿಸುತ್ತಾ ದೆಹಲಿ ಮೆಟ್ರೋದ ಪ್ಲಾಟ್‌ಫಾರ್ಮ್ ಮೇಲೆ ಓಡಾಡಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. 

Add Asianetnews Kannada as a Preferred SourcegooglePreferred

ವೀಡಿಯೋದಲ್ಲಿ ಕಾಣಿಸುವಂತೆ ಕಪ್ಪು ಬಣ್ಣದ ಫಾರ್ಮಲ್ ಪ್ಯಾಂಟ್ ಹಾಗೂ ಮಹಿಳೆಯರು ಸೀರೆಗೆ ಧರಿಸುವಂತಹ ಕಪ್ಪು ಬಣ್ಣದ ಡೀಪ್ ನೆಕ್‌ ಇರುವ ಹಾಗೂ ಹಿಂಭಾಗವೂ ಬಹಳ ಡೀಪ್ ಆಗಿರುವ ಬ್ಲೌಸ್ ಧರಿಸಿದ ಯುವಕನೋರ್ವ ಮೆಟ್ರೋ ನಿಲ್ದಾಣದಲ್ಲಿ ಓಡಾಡಿದ್ದಾನೆ. ಆದರೆ ಆತ ಸಾರಿ ಧರಿಸಿಲ್ಲ, ಈತನ ಈ ವಿಚಿತ್ರ ಡ್ರೆಸ್ಸಿಂಗ್ ಸ್ಟೈಲ್‌ನಿಂದ ಆತ ಲಂಗ ಹಾಗೂ ಬ್ಲೌಸ್ ಧರಿಸಿ ಸಾರಿ ಹಾಕಲು ಮರೆತವನಂತೆ ಕಾಣುತ್ತಿದ್ದಾನೆ. ಈ ವೀಡಿಯೋ ಈಗ ಇಂಟರ್‌ನೆಟ್‌ನಲ್ಲಿ ಸಖತ್ ವೈರಲ್ ಆಗಿದೆ. 

ಬುರ್ಕಾ ಧರಿಸಿ ಆಸ್ಪತ್ರೆಯಲ್ಲಿ ಗಂಡಸರಿಗೆ ಸ್ಪೆಷಲ್ ಟ್ರೀಟ್ ನೀಡ್ತಿದ್ದ 'ಲೇಡಿ ಡಾಕ್ಟರ್' ಅಂದರ್

ಹೀಗೆ ದೆಹಲಿ ಮೆಟ್ರೋ ನಿಲ್ದಾಣದಲ್ಲಿ ವಿಚಿತ್ರವಾಗಿ ಓಡಾಡಿದವನನ್ನು ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಅಭಿಷೇಕ್ ಎಂದು ಗುರುತಿಸಲಾಗಿದೆ. ಈತನ ಈ ಕ್ರಾಸ್ ಡ್ರೆಸ್ಸಿಂಗ್‌ನ ವೀಡಿಯೋ ಸಾಕಷ್ಟು ವೈರಲ್ ಆಗಿದ್ದು, 9 ಲಕ್ಷಕ್ಕೂ ಅಧಿಕ ಜನ ಈ ವೀಡಿಯೋವನ್ನು ವೀಕ್ಷಿಸಿದ್ದಾರೆ. 

ಈತ ಜನರಿಗೆ ಮನೋರಂಜನೆ ನೀಡುವುದಕ್ಕಾಗಿ ಹೀಗೆ ಕ್ರಾಸ್ ಡ್ರೆಸ್ಸಿಂಗ್ ಸ್ಟೈಲ್‌ನಲ್ಲಿ ಇನ್ಸ್ಟಾಗ್ರಾಮ್ ರೀಲ್ಸ್ ಮಾಡಿದ್ದಾನೆ ಎಂದು ವರದಿ ಆಗಿದೆ. ಆತ ಈ ವಿಚಿತ್ರ ಅವತಾರದಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಓಡಾಡುತಿದ್ದಾನೆ. ಆದರೆ ಈ ವೀಡಿಯೋ ನೋಡಿದ ಜನ ಮಾತ್ರ ಸಖತ್ ಕಾಮೆಂಟ್ ಮಾಡಲು ಶುರು ಮಾಡಿದ್ದಾರೆ. 

ಅರೆರೆ..ಇವರು ಹುಡುಗರಾ..ಥೇಟ್‌ ಮಹಿಳೆಯರಂತೆ ಡ್ರೆಸ್ ಮಾಡಿ ಸಖತ್‌ ಮಿಂಚಿದ್ರು ಪುರುಷರು!

ಈ ರೀತಿ ಬಟ್ಟೆ ಧರಿಸಿ ಓಡಾಡುವುದಕ್ಕೆ ನಿಮಗೆ ಹೇಗೆ ಕಾನ್ಫಿಡೆನ್ಸ್ ಬರುತ್ತದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ನಗುವ ಇಮೋಜಿಯ ಕಾಮೆಂಟ್ ಮಾಡಿದ್ದಾರೆ. ಇದು ತಮಾಷೆಯ ವಿಚಾರವಲ್ಲ, ಹೆಣ್ಣು ಮಕ್ಕಳು ಬರು ಬರುತ್ತಾ ಗಂಡಸರಾಗುತ್ತಿದ್ದಾರೆ, ಗಂಡು ಮಕ್ಕಳು ಬರುಬರುತ್ತಾ ಹೆಂಗಸರಂತಾಗುತ್ತಿದ್ದಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗುವುದಕ್ಕೆ ಜನ ಯಾವ ಹಂತಕ್ಕೆ ಬೇಕಾದರೂ ಇಳಿಯುತ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಈ ವ್ಯಕ್ತಿ ಇಚ್ಚಧಾರಿ ಮಂಗಳಮುಖಿ ಎಂದು ಮತ್ತೊಬ್ಬರು ತಮಾಷೆಯಾಗಿ ಕಾಮೆಂಟ್ ಮಾಡಿದ್ದರೆ, ಮತ್ತೆ ಕೆಲವರು ಈ ಮೂಲಕ ಮಂಗಳಮುಖಿ ಸಮುದಾಯಕ್ಕೆ ಅವಮಾನ ಮಾಡದಂತೆ ಮನವಿ ಮಾಡಿದ್ದಾರೆ.

ಹೀಗೆ ಈತನ ಸೋಶಿಯಲ್ ಮೀಡಿಯಾದಲ್ಲಿ ಪೂರ್ತಿ ಇದೇ ರೀತಿಯ ವೀಡಿಯೋಗಳೇ ಹೆಚ್ಚಾಗಿ ಕಾಣಿಸುತ್ತಿವೆ. 

View post on Instagram