ಮುಖದ ಹೊಳಪನ್ನು ಹೆಚ್ಚಿಸಲು ಸಕ್ಕರೆಯನ್ನು ಸ್ಕ್ರಬ್ ಅಥವಾ ಫೇಸ್ ಪ್ಯಾಕ್ ಆಗಿ ಬಳಸಬಹುದು. ಸಕ್ಕರೆಯನ್ನು ಜೇನುತುಪ್ಪ, ಸೌತೆಕಾಯಿ ಅಥವಾ ಟೊಮೆಟೊ ಜೊತೆ ಬೆರೆಸಿ ಮುಖಕ್ಕೆ ಹಚ್ಚಿ ಸ್ಕ್ರಬ್ ಮಾಡುವುದರಿಂದ ಚರ್ಮದ ಹೊಳಪು ಹೆಚ್ಚುತ್ತದೆ.
ಎಲ್ಲಾ ಹೆಣ್ಣು ಮಕ್ಕಳಿಗೂ ತಾವೂ ಚೆನ್ನಾಗಿ ಕಾಣಬೇಕೆಂಬ ಹಂಬಲ ಇದ್ದೇ ಇರುತ್ತದೆ. ತಮ್ಮ ಮುಖ ಎಲ್ಲರಂತೆ ಹೊಳಪನ್ನ ಹೊಂದಿದ್ದು, ಯಾವುದೇ ಕಲೆಗಳು ಮುಖದ ಮೇಲೆ ಇರಬಾರದು ಎಂದು ಬಯಸುವುದು ಸಹಜ. ಕೆಲವರು ಮುಖಕ್ಕೆ ಹೊಳಪನ್ನ ತರುವುದಕ್ಕೆ ಮನೆಯಲ್ಲಿಯೇ ಪ್ರಯತ್ನ ಮಾಡುತ್ತಾರೆ. ಇನ್ನು ಕೆಲವರು ಬೂಟಿ ಪಾರ್ಲರ್‌ಗಳಿಗೆ ಹೋಗಿ ಫೇಸ್ ಪ್ಯಾಕ್ ಮಾಡಿಸಿಕೊಂಡು ಸಾವಿರ ಸಾವಿರ ಹಣ ಹಾಕುತ್ತಿರುತ್ತಾರೆ. ಆದರೆ ನಮ್ಮ ಅಡುಗೆ ಮನೆಯಲ್ಲಿಯೇ ನಮ್ಮ ಮುಖಕ್ಕೆ ಹೊಳಪನ್ನ ನೀಡುವಂತಹ ಸಾಮಾಗ್ರಿಗಳು ಇವೆ. ನೀವೂ ಕೂಡಾ ನಿಮ್ಮ ಅಡುಗೆ ಮನೆಯಲ್ಲಿರುವ ವಸ್ತುಗಳನ್ನ ಬಳಸಿ ಸುಲಭವಾಗಿ ಖರ್ಚಿಲ್ಲದೆ ನಿಮ್ಮ ಮುಖವನ್ನು ಸುಂದರವಾಗಿಸಲು ಇಲ್ಲಿದೆ ನಿಮಗೊಂದು ಒಂದು ಟಿಪ್ಸ್.
ಸಾಮಾನ್ಯವಾಗಿ ಸಕ್ಕರೆಯನ್ನ ಸೇವಿಸುವುದರಿಂದ ಆರೋಗ್ಯಕ್ಕೆ(Health) ಹಾನಿ ಎಂದು ಹೇಳಲಾಗುತ್ತೆ. ಆದರೆ ಸಕ್ಕರೆಯನ್ನು(Sugar) ನೀವು ನಿಮ್ಮ ಚರ್ಮಕ್ಕೆ ಬಳಸಬಹುದು ಅದರಿಂದ ಯಾವುದೇ ಹಾನಿಯಾಗುವುದಿಲ್ಲ. ಸಕ್ಕರೆಯನ್ನು ಸೇವಿಸುವುದರಿಂದ ಚರ್ಮಕ್ಕೆ ಹಾನಿಯಾಗುತ್ತದೆ ಆದರೆ ನೀವು ಅದೇ ಸಕ್ಕರೆಯನ್ನು ನಿಮ್ಮ ಚರ್ಮದ ಮೇಲೆ ಬಳಸಿದರೆ ಯಾವುದೇ ಪರಿಣಾಮ ಬೀರುವುದಿಲ್ಲ. ಸಕ್ಕರೆಯನ್ನ ಸ್ಕ್ರಬ್ ಅಥವಾ ಫೇಸ್ ಪ್ಯಾಕ್ (face pack) ಆಗಿ ಹಚ್ಚಿದರೆ, ಅದರಿಂದ ಸಾಕಷ್ಟು ಉಪಯೋಗಗಳಿವೆ. ಆದರೆ ಸಕ್ಕರೆಯನ್ನು ಹೇಗೆ ಬಳಸಬೇಕು ಎಂಬುದು ತಿಳಿಯುವುದು ಮುಖ್ಯ. ಸಕ್ಕರೆ ಮುಖಕ್ಕೆ ಹೋಳಪನ್ನ ನೀಡುತ್ತದೆ. ಜೊತೆಗೆ ಚರ್ಮ ತೇವಾಂಶ ಭರಿತವಾಗಿ ಇಡಲು ಸಹಾಯ ಮಾಡುತ್ತದೆ. ಇದು ಮುಖದ ಚರ್ಮದ ಡೆಡ್ ಸ್ಕಿನ್‌ಗಳನ್ನು ತೆಗೆದುಹಾಕಲು ಸಹಕಾರಿಯಾಗಿದೆ.
ಸಕ್ಕರೆಯನ್ನ ಮುಖಕ್ಕೆ ಹಚ್ಚುವುದರಿಂದ ಮುಖದ ಚರ್ಮದ ಡೆಡ್ ಸ್ಕಿನ್‌ಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಸಕ್ಕರೆ ಮುಖದ ಮೇಲೆ ನೈಸರ್ಗಿಕ ಸ್ಕ್ರಬ್ ಆಗಿ ಕಾರ್ಯನಿರ್ವಹಿಸುತ್ತದೆ. ಮುಖದಲ್ಲಿರುವಂತಹ ಸುಕ್ಕು ಚರ್ಮಗಳನ್ನ ಹೊಗಲಾಡಿಸಲು ಸಹಾಯ ಮಾಡುತ್ತದೆ. ಹಾಗೇ ಸಕ್ಕರೆ ದೀರ್ಘಕಾಲದವರೆಗೆ ಚರ್ಮವನ್ನು ತೇವಾಂಶದಿಂದ ಇಟ್ಟು ಮುಖದ ಕಾಂತಿಯನ್ನ ಹೆಚ್ಚಿಸುತ್ತದೆ. ಮುಖಕ್ಕೆ ಸಕ್ಕರೆಯನ್ನ ಸ್ಕ್ರಬ್ ಆಗಿ ಅಥವಾ ಫೇಸ್ ಪ್ಯಾಕ್ ಆಗಿ ಉಪಯೋಗಿಸಬಹುದು.
ಸಕ್ಕರೆಯನ್ನ ಸಣ್ಣದಾಗಿ ಪುಡಿ ಮಾಡಿ, ಪುಡಿ ಮಾಡಿದಂತಹ ಸಕ್ಕರೆಗೆ ಜೇನುತುಪ್ಪ ಬೆರೆಸಿ ಅದನ್ನು ಬೆರಳುಗಳಿಂದ ಮುಖದ ಮೇಲೆ ಹಚ್ಚಿ ಮತ್ತು ನಂತರ ನಿಧಾನವಾಗಿ ಮಸಾಜ್ ಮಾಡಿ. ನೀವು ಅದನ್ನು ಫೇಸ್ ಪ್ಯಾಕ್(face pack) ಆಗಿ ಬಳಸುತ್ತಿದ್ದರೆ, ಹಚ್ಚಿದ 15 ನಿಮಿಷಗಳ ನಂತರ ನಿಮ್ಮ ಮುಖವನ್ನು ಶುದ್ಧ ನೀರಿನಿಂದ ತೊಳೆಯಿರಿ. ತೊಳೆಯುವಾಗ ಯಾವುದೆ ಫೇಶ್‌ವಾಶ್‌ಗಳನ್ನ ಬಳಸಬೇಡಿ. 15 ನಿಮಿಷಗಳ ವರೆಗೆ ಇಟ್ಟುಕೊಳ್ಳಬಹುದು, ಇಲ್ಲವಾದರೆ ಹತ್ತು ನಿಮಿಷಗಳ ಕಾಲ ಸ್ಕ್ರಬ್ ಮಾಡಿ ಮುಖವನ್ನ ತೊಳೆಯಬಹುದು. ಸೌತೆಕಾಯಿಯ ಜೊತೆಗೆ ಸಹ ಸಕ್ಕರೆಯನ್ನ ಬಳಸಬಹುದು. ಸೌತೆಕಾಯಿಯನ್ನ ತೆಳುವಾಗಿ ಹೆಚ್ಚಿಕೊಂಡು ಸಕ್ಕರೆಯನ್ನ ಅದಕ್ಕೆ ಹಚ್ಚಿಕೊಂಡು ಮುಖಕ್ಕೆ ಹತ್ತರಿಂದ, ಹದಿನೈದು ನಿಮಿಷಗಳ ಕಾಲ ಸ್ಕ್ರಬ್ ಮಾಡಿ ನಂತರ ಫೇಶ್‌ವಾಶ್ ಮಾಡಿಕೊಳ್ಳುವುದರಿಂದ ಮುಖಕ್ಕೆ ಹೆಚ್ಚಿನ ಹೊಳಪು ಸಿಗುತ್ತದೆ. ಹಾಗೇ ಟೋಮ್ಯಾಟೋ ಜೊತೆಗೂ ಸಹ ಬಳಸಬಹುದು. ಟೋಮ್ಯಾಟೋವನ್ ಹೆಚ್ಚಿಕೊಂಡು ಸಕ್ಕರೆಗೆ ಅದ್ದಿ ಸ್ಕ್ರಬ್ ಮಾಡಿಕೊಳ್ಳಬಹುದು. ಸೌತೆಕಾಯಿ ಹಾಗೂ ಟೊಮ್ಯಾಟೋದೊಂದಿಗೆ ಸ್ಕ್ರಬ್ ಮಾಡಿಕೊಳ್ಳುವಾಗ ಸಕ್ಕರೆಯನ್ನ ಪುಡಿಮಾಡಿಕೊಳ್ಳಬೇಕೆಂದಿಲ್ಲ.
ಆದರೆ ಒಂದು ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಷಯಗಳೆಂದರೆ ಕೆಲವರ ಚರ್ಮವು ಸೂಕ್ಷ್ಮವಾಗಿದ್ದರೆ, ಮುಖದ ಮೇಲೆ ಮೊಡವೆಗಳು ಆಗಿದ್ದರೆ, ಅಥವಾ ನಿಮಗೆ ಯಾವುದೇ ಚರ್ಮಕ್ಕೆ ಸಂಬಂಧಿಸಿದ ಅಲರ್ಜಿಗಳಿದ್ದರೆ ಇದನ್ನು ಸ್ವಲ್ಪ ಗಮನ ವಹಿಸಿ ಬಳಸುವುದು ಉತ್ತಮ, ಕೆಲಮೊಮ್ಮೆ ಸೂಕ್ಷ್ಮ ಚರ್ಮ ಹೊಂದಿರುವವರು ಈ ರೀತಿಯ ಫೇಸ್ ಫ್ಯಾಕ್‌ಗಳನ್ನ ಉಪಯೋಗಿಸುವುದರಿಂದ ಹಾನಿಯಾಗಬಹುದು.
