Asianet Suvarna News Asianet Suvarna News

ಹೈ ಹೀಲ್ಸ್ ನಿಮ್ಮ ಮೂಳೆಗಳ ಆರೋಗ್ಯ ಕಸಿಯುತ್ತೆ ಜೋಪಾನ...!

ಮ್ಯಾಕ್ಸ್ ಹೆಲ್ತ್ ಕೇರ್ ನಡೆಸಿದ ಸರ್ವೆ ವರದಿಯಂತೆ, ಹೈ ಹೀಲ್ಸ್ ಧರಿಸುವುದರಿಂದ ಬೆನ್ನಮೂಳೆ ಮೇಲೆ ವಿಪರೀತ ಒತ್ತಡ ಬೀಳುವುದರಿಂದ ಮೂಳೆಗಳ ವಿನ್ಯಾಸ ಹಾಳಾಗುವುದಷ್ಟೇ ಅಲ್ಲ, ಆರೋಗ್ಯಕ್ಕೆ ಕೂಡಾ ಅಪಾಯಕಾರಿ ಎಂದಿದೆ. 

Wearing High Heels May Affect Womens Bone Health
Author
Bangalore, First Published Mar 12, 2020, 12:38 PM IST

ಹೈ ಹೀಲ್ಸ್ ಧರಿಸುವುದು ಅಭ್ಯಾಸವೇ? ಹೀಲ್ಸ್ ಧರಿಸಿದ ಕೂಡಲೇ ಅದೊಂತರಾ ಸ್ಟೈಲಿಶ್ ಭಾವನೆ ಬರುತ್ತದಲ್ಲ? ನಿಮ್ಮ ಸಂಗಾತಿಯ ಹೈಟ್‌ಗೆ ಮ್ಯಾಚ್ ಮಾಡೋಕೆ ಹೀಲ್ಸ್ ಬೇಕೇ ಬೇಕು ಎನ್ನುವವರು ನೀವಾಗಿದ್ದರೆ, ನಿಮ್ಮ ಆರೋಗ್ಯದತ್ತಲೂ ಸ್ವಲ್ಪ ಗಮನ ಹರಿಸಬೇಕಾದ ಅಗತ್ಯವನ್ನು ಈಗ ಕಂಡುಕೊಳ್ಳಬೇಕಿದೆ. ಹೌದು, ನಿರಂತರವಾಗಿ ಸ್ವಲ್ಪ ಸಮಯದವರೆಗೆ ಹೈ ಹೀಲ್ಸ್ ಧರಿಸುವುದರಿಂದ ಮಹಿಳೆಯರು ಅವಧಿಪೂರ್ವ ಆಸ್ಟಿಯೋಪೋರೋಸಿಸ್ ಹಾಗೂ ಶಾಸ್ವತ ಬೆನ್ನುನೋವುನ ಸಮಸ್ಯೆಯಿಂದ ಬಳಲುತ್ತಾರೆ ಎಂದು ಸರ್ವೆಯೊಂದು ಹೇಳಿದೆ.

ಮ್ಯಾಕ್ಸ್ ಹೆಲ್ತ್‌ಕೇರ್ ನಡೆಸಿದ ಈ ಸರ್ವೆಯಲ್ಲಿ 20ರಿಂದ 45 ವಯಸ್ಸಿನ ಸುಮಾರು 500 ಮಹಿಳೆಯರು ಭಾಗವಹಿಸಿದ್ದರು. ಇದರಲ್ಲಿ ಅರ್ಧದಷ್ಟು ಮಂದಿ ವೃತ್ತಿನಿರತರಾಗಿದ್ದರೆ, ಉಳಿದ ಮಹಿಳೆಯರು ಹೋಂ ಮೇಕರ್ಸ್. 

ಹೈ ಹೀಲ್ಸ್ ಬಹಳ ಕಾಮನ್
'ಸರ್ವೆ ವರದಿಯ ಪ್ರಕಾರ, ಶೇ.48.5ರಷ್ಟು ಮಹಿಳೆಯರು ಪ್ರತಿ ದಿನ ಇಲ್ಲವೇ ವಾರಾಂತ್ಯದ ಕಾರ್ಯಕ್ರಮಗಳಿಗೆ ಹೈ ಹೀಲ್ಸ್ ಧರಿಸಿಯೇ ಹೋಗುತ್ತಾರೆ. ಹೈ ಹೀಲ್ಸನ್ನು ದಿನೇ ದಿನೆ ಬಳಸುವುದರಿಂದ ಬೆನ್ನು, ಕಾಲ್ಬೆರಳುಗಳು, ಕಾಲುಗಂಟುಗಳ ಮೇಲೆ ದುಷ್ಪರಿಣಾಮ ಬೀರುತ್ತದೆ' ಎನ್ನುತ್ತಾರೆ ಗುರುಗ್ರಾಮದ ಮ್ಯಾಕ್ಸ್ ಆಸ್ಪತ್ರೆಯ ಚೇರ್ಮನ್ ಹಾಗೂ ಮುಖ್ಯ ಶಸ್ತ್ರಚಿಕಿತ್ಸಕ ಡಾ. ಎಸ್.ಕೆ. ಎಸ್. ಮರ್ಯ. 

ನಟಿ ಸಮೀರಾ ರೆಡ್ಡಿಯನ್ನೂ ಕಾಡಿತ್ತಂತೆ ಈ ಪ್ರಾಬ್ಲಂ...

ಹೈ ಹೀಲ್ಸನ್ನು ಧರಿಸಿ ನಡೆವುದರಿಂದ ಕಾಲುಗಳ ನಡೆವ ವಿನ್ಯಾಸ ಬದಲಾಗುತ್ತದೆ, ಅವು ಬ್ಯಾಲೆನ್ಸ್ ಮಾಡಲು ಒದ್ದಾಡುತ್ತವೆ. ಇದರಿಂದ ಬೆನ್ನುಹುರಿಯ ಮೇಲೆ ವಿಪರೀತ ಒತ್ತಡ ಬಿದ್ದು, ಕೆಲ ವರ್ಷಗಳ ಬಳಿಕ ಮೂಳೆಗಳ ವಿನ್ಯಾಸವೇ ಏರುಪೇರಾಗಬಹುದು. ಇದರಿಂದ ಮಹಿಳೆಯ ಬೆನ್ನಿನ ಭಂಗಿ ಬಾಗಿದಂತಾಗುತ್ತದೆ. ಅಷ್ಟೇ ಅಲ್ಲ, ಈ ಹೀಲ್ಸ್‌ಗಳು ಪಾದವನ್ನು ಏರುಪೇರಾಗಿ ಇಟ್ಟುಕೊಳ್ಳುವಂತೆ ಮಾಡುವುದರಿಂದ ಕಾಲ್ಬೆರಳುಗಳಿಗೆ ಸರಿಯಾಗಿ ರಕ್ತ ಪರಿಚಲನೆ ಸಾಧ್ಯವಾಗುವುದಿಲ್ಲ. 

ಬಹಳಷ್ಟು ಕೇಸ್‌ಗಳಲ್ಲಿ ಕಾಲಿನ ಹೆಬ್ಬೆರಳು ರೂಪ ಕಳೆದುಕೊಂಡು ಹ್ಯಾಲಕ್ಸ್ ವಾಲ್ಗಸ್ ಎಂಬ ಸಮಸ್ಯೆ ಉಂಟಾಗುತ್ತದೆ. ಹೀಗಾದಾಗ ಅದನ್ನು ಸರಿಪಡಿಸಲು ಶಸ್ತ್ರಚಿಕಿತ್ಸೆಯೇ ಬೇಕಾಗುತ್ತದೆ. ನಿಂರಂತರವಾಗಿ ಹೈ ಹೀಲ್ಸ್ ಧರಿಸುವ ಅಭ್ಯಾಸ ಇದ್ದರೆ, ಇದರಿಂದ ಬಹಳ ಸಣ್ಣ ವಯಸ್ಸಿನಲ್ಲೇ ಆಸ್ಟಿಯೋಪೋರೋಸಿಸ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಜೊತೆಗೆ ಬೆನ್ನುನೋವು ಶಾಶ್ವತ ಸಂಗಾತಿಯಾಗುತ್ತದೆ. ಹೀಲ್ಸ್ ಹೊರತಾಗಿಯೂ ಶೇ.50ರಷ್ಟು ಮಹಿಳೆಯರು ತಮ್ಮ ದೇಹಭಂಗಿಯ ಬಗ್ಗೆ ಹೆಚ್ಚು ಗಮನ ಕೊಡದೆ ಬೆನ್ನು ಬಾಗಿಸಿ ಕೂರುವುದು, ವ್ಯಾಯಾಮ ಇಲ್ಲದಿರುವುದು ಮುಂತಾದ ಕಾರಣಗಳಿಗಾಗಿ ಮೂಳೆಗಳ ಆರೋಗ್ಯ ಹಾಳು ಮಾಡಿಕೊಳ್ಳುತ್ತಾರೆ ಎಂದೂ ಸರ್ವೆ ಹೇಳಿದೆ. 

ಸಂತಾನದ ಕನಸು ನನಸಾಗಿಸಲು ವೈದ್ಯಕೀಯ ಹೊಸ ವಿಧಾನ!...

ಶೇ.85 ಯುವತಿಯರಿಗೆ ಹೀಲ್ಸ್ ಇಷ್ಟ
ಸರ್ವೆ ಬಹಿರಂಗಪಡಿಸಿದ ಮಾಹಿತಿಯಂತೆ 30ರಿಂದ 45 ವಯಸ್ಸಿನವರಲ್ಲಿ ಶೇ.37.5ರಷ್ಟು ಮಹಿಳೆಯರು ದಿನಂಪ್ರತಿಯಂತೆ ಹೈ ಹೀಲ್ಸ್ ಧರಿಸಿದರೆ, 20ರಿಂದ 30 ವಯೋಮಾನದ ಯುವತಿಯರಲ್ಲಿ ಶೇ.85.4ರಷ್ಟು ಯುವತಿಯರಿಗೆ ಹೈ ಹೀಲ್ಸ್ ದಿನದ ಔಟಿಂಗ್ ಜೊತೆ. ಡೇಟಾದಂತೆ, ಶೇ.43.7ರಷ್ಟು ವರ್ಕಿಂಗ್ ವಿಮೆನ್ ಹೈ ಹೀಲ್ಸ್‌ನ್ನು ದೈನಂದಿನವಾಗಿ ಬಳಸುತ್ತಾರೆ. 20ರಿಂದ 30 ವರ್ಷದ ಯುವತಿಯರಲ್ಲಿ ಕೇವಲ ಶೇ.14.6ರಷ್ಟು ಯುವತಿಯರು ಮಾತ್ರ ತಮಗೆ ಹೈ ಹೀಲ್ಸ್ ಇಷ್ಟವೇ ಇಲ್ಲ, ಇಲ್ಲವೇ ಬಹಳ ಅಪರೂಪಕ್ಕೆ ಬಳಸುತ್ತಾರೆ. ಹಾಗೂ 45 ವರ್ಷ ಮೇಲ್ಪಟ್ಟವರಲ್ಲಿ ಶೇ.83ರಷ್ಟು ಮಹಿಳೆಯರು ಹೈ ಹೀಲ್ಸ್‌ನಿಂದ ದೂರವಿರಲು ಬಯಸುತ್ತಾರೆ. 

ಫ್ಲಾಟ್ಸ್, ಲೋಫರ್ಸ್ ಉತ್ತಮ
ಹೈ ಹೀಲ್ಸ್‌ನ ಅಡ್ಡ ಪರಿಣಾಮಗಳು ಅಸಂಖ್ಯವಾಗಿದ್ದು, ಮಹಿಳೆಯರು ತೀರಾ ಅಪರೂಪಕ್ಕೊಮ್ಮೆ ಇದನ್ನು ಬಳಸಲಡ್ಡಿಯಿಲ್ಲ. ಉಳಿದಂತೆ ಫ್ಲ್ಯಾಟ್ಸ್, ಲೋಫರ್ಸ್, ಸ್ಲಿಪ್ ಆನ್ಸ್, ಬ್ಯಾಲೆರಿನ್ಸ್‌ಗಳನ್ನು ದಿನಬಳಕೆ ಮಾಡುವುದು ಬೆಸ್ಟ್. 

Follow Us:
Download App:
  • android
  • ios