ಅನೇಕ ವಸ್ತುಗಳ ಬೆಲೆ ಭಾರತೀಯರಿಗೇ ತಿಳಿದಿಲ್ಲ. ಇಲ್ಲಿ ಮನೆ ಮೂಲೆಯಲ್ಲಿ ಜಾಗ ಪಡೆದಿರುವ ಅದೆಷ್ಟೋ ವಸ್ತುಗಳು ವಿದೇಶದಲ್ಲಿ ದುಬಾರಿ ಬೆಲೆಗೆ ಮಾರಾಟ ಆಗ್ತಿವೆ. ಅದ್ರಲ್ಲಿ ಈ ಬ್ಯಾಗ್ ಕೂಡ ಈಗ ಜಾಗ ಪಡೆದಿದೆ.

ಭಾರತೀಯ ಹಳ್ಳಿಗಳಲ್ಲಿ ವಿಮಲ್ ಬ್ಯಾಗ್ (Vimal bag) ಪ್ರಸಿದ್ಧಿ ಪಡೆದಿದೆ. ಎಷ್ಟೇ ಭಾರ ಹಾಕಿದ್ರೂ ಹರಿಯೋದಿಲ್ಲ, ಒಂದ್ಕಡೆಯಿಂದ ಇನ್ನೊಂದ್ಕಡೆ ವಸ್ತುಗಳನ್ನು ಅದ್ರಲ್ಲಿ ತುಂಬಿ ಸಾಗಿಸೋದು ಸುಲಭ ಎನ್ನುವ ಕಾರಣಕ್ಕೆ ಜನರು ವಿಮಲ್ ಬ್ಯಾಗ್ ಖರೀದಿ ಮಾಡ್ತಾರೆ. ಅದ್ರ ಬೆಲೆ 50 ರಿಂದ 100 ರೂಪಾಯಿ ಇದೆ. ವಿಲನ್ ನಂತೆ ಜಿಪ್ ಇರುವ ಬಟ್ಟೆ ಬ್ಯಾಗಿಗೆ ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಬೇಡಿಕೆ ಇದೆ. ಆದ್ರೆ ಈ ಬ್ಯಾಗ್ ಬೆಲೆ ಮಾತ್ರ ತಲೆ ತಿರುಗುವಷ್ಟಿದೆ. ಅಮೆರಿಕಾದಲ್ಲಿ ಬಟ್ಟೆಯ ಬ್ಯಾಗ್ ಒಂದು 4100 ರೂಪಾಯಿಗೆ ಮಾರಾಟವಾಗ್ತಿದೆ ಅಂದ್ರೆ ನೀವು ನಂಬ್ಲೇಬೇಕು. ವೆಬ್ ಸೈಟ್ ನಲ್ಲಿ ಬ್ಯಾಗ್ ಬೆಲೆ ವೈರಲ್ ಅಗಿದ್ದು, ಭಾರತೀಯರು ಮೋಜಿನ ಕಮೆಂಟ್ ಮಾಡಿದ್ದಾರೆ.

ವಿದೇಶದಲ್ಲಿ ವಾಸಿಸುವ ಅದ್ರಲ್ಲೂ ಅಮೆರಿಕ (America)ದಲ್ಲಿ ವಾಸಿಸುವ ಜನರು ಭಾರತೀಯ ಜೀವನಶೈಲಿಗೆ ಸಂಬಂಧಿಸಿದ ಗ್ರಾಮೀಣ ವಿಷಯಗಳನ್ನು ಇಷ್ಟಪಡುತ್ತಾರೆ. ದೇಸಿ ಮಂಚಗಳಿಂದ ಹಿಡಿದು ಬೇವಿನ ಟೂತ್ಪಿಕ್ಗಳವರೆಗೆ ಎಲ್ಲವನ್ನೂ ಸಾವಿರಾರು ರೂಪಾಯಿಗಳಿಗೆ ಅಲ್ಲಿ ಮಾರಾಟ ಆಗ್ತಿವೆ. ಈಗ ಭಾರತೀಯ ಹಳ್ಳಿಗಳಲ್ಲಿ ಬಳಸುವ ಚೀಲ ಅಮೆರಿಕನ್ನರಲ್ಲಿಯೂ ಬಹಳ ಜನಪ್ರಿಯವಾಗುತ್ತಿದೆ. ಭಾರತೀಯರು ಇದನ್ನು ಸಾರ್ವಜನಿಕ ಪ್ರದೇಶದಲ್ಲಿ, ಸಮಾರಂಭಗಳಲ್ಲಿ ಬಳಸಲು ಮುಜುಗರಪಟ್ಟುಕೊಳ್ತಾರೆ. ಇದು ಸಂಪೂರ್ಣ ಫ್ಯಾಷನ್ ಗೆ ವಿರುದ್ಧವಾಗಿದೆ. ಹಾಗಾಗಿಯೇ ಭಾರತೀಯರು ಮನೆಗಳಲ್ಲಿ ಸಾಮಾನುಗಳನ್ನು ತುಂಬಿಡಲು ಇಂಥ ಬ್ಯಾಗ್ ಬಳಸ್ತಾರೆ. ಮೊದಲೇ ಹೇಳಿದಂತೆ ಈ ಬ್ಯಾಗ್ ಭಾರತದಲ್ಲಿ 100 ರೂಪಾಯಿಗೆ ಹೆಚ್ಚೆಂದೆ 200 ರೂಪಾಯಿಗೆ ಲಭ್ಯವಿದೆ. ಆದ್ರೆ ಅಮೆರಿಕಾದಲ್ಲಿ 48 ಡಾಲರ್ ಅಂದ್ರೆ ಸುಮಾರು 4,228 ರೂಪಾಯಿಗೆ ಇದನ್ನು ಮಾರಾಟ ಮಾಡಲಾಗ್ತಿದೆ. ಈ ಚೀಲವನ್ನು ಯಾವುದೇ ಸಾಮಾನ್ಯ ವ್ಯಕ್ತಿ ಮಾರಾಟ ಮಾಡ್ತಿಲ್ಲ. ಅಮೆರಿಕದ ಅತ್ಯಂತ ಪ್ರಸಿದ್ಧ ಐಷಾರಾಮಿ ಅಂಗಡಿಗಳಲ್ಲಿ ಒಂದಾದ ನಾರ್ಡ್ಸ್ಟ್ರೋಮ್ ಮಾರಾಟ ಮಾಡ್ತಿದೆ. ಬ್ಯಾಗ್ನ ಬೆಲೆ ನೋಡಿ ಇಂಟರ್ನೆಟ್ ಬಳಕೆದಾರರು ಆಘಾತಕ್ಕೊಳಗಾಗಿದ್ದಾರೆ.

ಭಾರತೀಯ ದೇಸಿ ಬ್ಯಾಗನ್ನು ಜಪಾನಿನ ಕಂಪನಿ ಪ್ಯೂಬ್ಕೊ ನಾರ್ಡ್ಸ್ಟ್ರೋಮ್ನ ಆನ್ಲೈನ್ ವೆಬ್ಸೈಟ್ನಲ್ಲಿ ಮಾರಾಟಕ್ಕೆ ಅಪ್ಲೋಡ್ ಮಾಡಿದೆ. ಇದನ್ನು ಇಂಡಿಯನ್ ಸ್ಮರಣಿಕೆ ಚೀಲ ಎಂದು ಬ್ರಾಂಡ್ ಮಾಡುತ್ತಿದೆ. ಕಂಪನಿಯು ಇದನ್ನು ಅಮೇರಿಕನ್ ಗ್ರಾಹಕರಿಗೆ ದುಬಾರಿ ವಸ್ತುವಾಗಿ ಮಾರಾಟ ಮಾಡುತ್ತಿದೆ. ನಾರ್ಡ್ವಿಶಿಷ್ಟ ವಿನ್ಯಾಸಗಳಿಂದ ಅಲಂಕರಿಸಲ್ಪಟ್ಟ ಒಂದು ಸೊಗಸಾದ ಬ್ಯಾಗ್, ಇದು ನಿಮ್ಮ ಅಗತ್ಯ ವಸ್ತುಗಳನ್ನು ಸಾಗಿಸಲು ಪರಿಪೂರ್ಣ ಆಯ್ಕೆಯಾಗಿದೆ. ಇದು ದೇಶದ ಮೇಲಿನ ನಿಮ್ಮ ಪ್ರೀತಿಯನ್ನು ಪ್ರದರ್ಶಿಸುತ್ತದೆ ಎಂದು ಸ್ಟ್ರೋಮ್ನಲ್ಲಿ ಮಾರಾಟವಾಗುತ್ತಿರುವ ಬ್ಯಾಗ್ ಬಗ್ಗೆ ವಿವರ ನೀಡಲಾಗಿದೆ. ಅಷ್ಟೇ ಅಲ್ಲ, ಚೀಲವನ್ನು ಯಾವುದೇ ಪ್ರಯಾಣಿಕರು ಅಥವಾ ಭಾರತೀಯ ಸಂಸ್ಕೃತಿಯ ಪ್ರೇಮಿಗಳು ಹೊಂದಿರಲೇಬೇಕು ಅಂತ ವೆಬ್ ಸೈಟ್ ನಲ್ಲಿ ಬರೆಯಲಾಗಿದೆ. ಈ ಬ್ಯಾಗ್, ಭಾರತದ ನೆನಪನ್ನು ನಿಮ್ಮೊಂದಿಗೆ ಕೊಂಡೊಯ್ಯಲು ಸಹಾಯ ಮಾಡುತ್ತದೆ ಎಂದು ವೆಬ್ಸೈಟ್ ಹೇಳಲಾಗಿದೆ. ಈ ಚೀಲಗಳ ಮೇಲೆ ಹಿಂದಿಯಲ್ಲಿ ರಮೇಶ್ ಸ್ಪೆಷಲ್ ನಾಮ್ಕೀನ್ ಮತ್ತು ಚೇತಕ್ ಸ್ವೀಟ್ಸ್ ಮುಂತಾದ ಲೇಬಲ್ಗಳನ್ನು ಮುದ್ರಿಸಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಈ ನ್ಯೂಸ್ ವೈರಲ್ ಆಗಿದ್ದು, ಅನೇಕರು ಕಮೆಂಟ್ ಮಾಡಿದ್ದಾರೆ. ವಿಮಲ್ ತಂಬಾಕಿನ ಚೀಲ ಮಾತ್ರವಲ್ಲ ಈ ಸ್ವೀಟ್ ಚೀಲ ಕೂಡ ವಿದೇಶದಲ್ಲಿ ಪ್ರಸಿದ್ಧಿ ಪಡೆದಿವೆ ಎಂದು ಕಮೆಂಟ್ ಮಾಡಿದ್ದಾರೆ. ಭಾರತೀಯ ಲುಂಗಿಗಳನ್ನು ಮಾರಾಟ ಮಾಡಿ ಅದನ್ನು ಸ್ಕಾಟಿಷ್ ಡ್ರೇಪ್ ಎಂದು ಕರೆಯುತ್ತಾರೆ ಅಂತ ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಕೆಲ ದಿನಗಳ ಹಿಂದೆ ಇಂಥದ್ದೇ ಬ್ಯಾಗ್ ಹಿಡಿದು ಶಾಪಿಂಗ್ ಗೆ ಬಂದಿದ್ದ ವಿದೇಶಿ ಮಹಿಳೆಯೊಬ್ಬಳ ಫೋಟೋ ವೈರಲ್ ಆಗಿತ್ತು.

View post on Instagram