Laundry Mistakes : ಬಟ್ಟೆ ತೊಳೆಯುವಾಗ ಮಾಡ್ಬೇಡಿ ಈ ಮಿಸ್ಟೇಕ್ಸ್
ದುಬಾರಿ ಬೆಲೆ ಕೊಟ್ಟು ಖರೀದಿ ಮಾಡಿದ ಬಟ್ಟೆ ನಾಲ್ಕು ದಿನ ಬಂದಿಲ್ಲ ಎನ್ನುವವರಿದ್ದಾರೆ. ಬಟ್ಟೆಯನ್ನು ಯರ್ರಾಬಿರ್ರಿ ವಾಶ್ ಮಾಡಿದ್ರೆ ಹಾಳಾಗದೆ ಹೋಗುತ್ತಾ? ಬಟ್ಟೆ ಕ್ಲೀನ್ ಮಾಡುವುದು ಒಂದು ಕಲೆ. ಬಟ್ಟೆ ಸ್ವಚ್ಛಗೊಳಿಸುವ ಮುನ್ನ ಅನೇಕ ವಿಷ್ಯಗಳನ್ನು ತಿಳಿದಿರಬೇಕು.
ಬಟ್ಟೆ (Clothes )ತೊಳೆ (Wash)ಯೋದು ದೊಡ್ಡ ಕೆಲಸವೆಂದ್ರೆ ತಪ್ಪಾಗಲಾರದು. ಕೆಲವರು ಬಟ್ಟೆಯನ್ನು ಕೈನಲ್ಲಿಯೇ ಸ್ವಚ್ಛಮಾಡ್ತಾರೆ. ಮತ್ತೆ ಕೆಲವರು ವಾಷಿಂಗ್ ಮೆಷಿನ್ (Washing Machine )ಮೂಲಕ ಕ್ಲೀನ್ (Clean) ಮಾಡ್ತಾರೆ. ವಿಧಾನ ಯಾವುದೇ ಇರಲಿ. ಬಟ್ಟೆ ತೊಳೆಯುವ ವಿಷ್ಯ ಬಂದಾಗ ಇಬ್ಬರೂ ಬೋರ್ ಆಗೋದು ನಿಜ. ಕೈನಲ್ಲಿ ಬಟ್ಟೆ ಸ್ವಚ್ಛಗೊಳಿಸುವವರ ಸಮಸ್ಯೆ ಒಂದು ರೀತಿಯಾದ್ರೆ ವಾಷಿಂಗ್ ಮೆಷಿನ್ ನಲ್ಲಿ ಕ್ಲೀನ್ ಮಾಡುವವರ ಸಮಸ್ಯೆ ಮತ್ತೊಂದು ರೀತಿಯಲ್ಲಿರುತ್ತದೆ. ಬಟ್ಟೆ ಕ್ಲೀನ್ ಮಾಡುವ ಮೊದಲು ಕೆಲವೊಂದು ಟಿಪ್ಸ್ ಪಾಲನೆ ಮಾಡಿದ್ರೆ ಎಂದೂ ಇದು ಬೋರ್ ಎನ್ನಿಸುವುದಿಲ್ಲ. ಹಾಗೆಯೇ ಬಟ್ಟೆಗಳು ಬೇಗ ಸ್ವಚ್ಛಗೊಳ್ಳುತ್ತವೆ. ಬಟ್ಟೆ ತೊಳೆಯುವಾಗ ಯಾವ ತಪ್ಪು ಮಾಡಬಾರದು ಎಂಬುದನ್ನು ನಾವಿಂದು ಹೇಳ್ತೆವೆ.
ಒಂದೇ ದಿನ ಬಟ್ಟೆ ರಾಶಿ : ಬಹುತೇಕರು ಬಟ್ಟೆ ಸ್ವಚ್ಛಗೊಳಿಸುವ ವೇಳೆ ಮಾಡುವ ತಪ್ಪಿದು. ವಾರದ ಎಲ್ಲ ದಿನಗಳ ಬಟ್ಟೆಯನ್ನು ಒಂದೇ ದಿನ ರಾಶಿ ಹಾಕ್ತಾರೆ. ಭಾನುವಾರವನ್ನು ಇದಕ್ಕೆಂದೇ ಮೀಸಲಿಡುವವರಿದ್ದಾರೆ. ಒತ್ತಡದ ಜೀವನದಲ್ಲಿ ಇದು ಸಹಜ. ಆದ್ರೆ ರಜೆ ಮಜವೆಲ್ಲ ಬಟ್ಟೆ ತೊಳೆಯುವುದ್ರಲ್ಲಿ ಹೋದ್ರೆ ಏನು ಪ್ರಯೋಜನ. ಹಾಗಾಗಿ ಒಂದೇ ದಿನಕ್ಕೆ ರಾಶಿ ರಾಶಿ ಬಟ್ಟೆ ತೊಳೆಯಬೇಡಿ. ಸಾಧ್ಯವಾದ್ರೆ ಪ್ರತಿ ದಿನ ಇಲ್ಲವೆ ವಾರಕ್ಕೆ ಎರಡು ಬಾರಿಯಾದ್ರೂ ಬಟ್ಟೆ ಸ್ವಚ್ಛಗೊಳಿಸುವು ಅಭ್ಯಾಸ ಮಾಡಿಕೊಳ್ಳಿ.
ವಾಷಿಂಗ್ ಮೆಷಿನ್ ಗೆ ತುಂಬುವುದು : ವಾಷಿಂಗ್ ಮೆಷಿನ್ ನಲ್ಲಿ ಬಟ್ಟೆ ಕ್ಲೀನ್ ಮಾಡುವವರು ಕೂಡ, ಮೆಷಿನ್ ಗೆ ಬಟ್ಟೆ ತುರುಕುತ್ತಾರೆ. ಒಂದು ವಾರದ ಬಟ್ಟೆ ಮೆಷಿನ್ ನಲ್ಲಿರುತ್ತದೆ. ಇದ್ರಿಂದ ಬಟ್ಟೆ ಮುಗ್ಗುಲು ಹಿಡಿದ ವಾಸನೆ ಬರುತ್ತದೆ. ಯಾವುದೇ ಪೌಡರ್ ಬಳಸಿದ್ರೂ ಬಟ್ಟೆ ಸ್ವಚ್ಛವಾಗುವುದಿಲ್ಲ. ಹಾಗಾಗಿ ನೀವು ಬಳಸಿದ ಬಟ್ಟೆಯನ್ನು ಮೆಷಿನ್ ಗೆ ಹಾಕಿ ಮುಚ್ಚಿಡಬೇಡಿ. ಅದನ್ನು ತೆರೆದ ಸ್ಥಳದಲ್ಲಿಡಿ.
ಮೆಷಿನ್ ಕ್ಲೀನಿಂಗ್ : ಹೌದು, ವಾಷಿಂಗ್ ಮೆಷಿನ್ ಬಟ್ಟೆ ಕ್ಲೀನ್ ಮಾಡುವ ಯಂತ್ರ. ಹಾಗಂತ ಅದು ಕ್ಲೀನ್ ಆಗಿರಬಾರದು ಎಂದೇನಿಲ್ಲ. ಬಹುತೇಕರು ಮೆಷಿನ್ ಸ್ವಚ್ಛಗೊಳಿಸಲು ಆದ್ಯತೆ ನೀಡುವುದಿಲ್ಲ. ಇದ್ರಿಂದಾಗಿ ಕೆಟ್ಟ ವಾಸನೆ ಬರುತ್ತದೆ. ಮೆಷಿನ್ ಗಾಗಿಯೇ ವಿಶೇಷ ಪೌಡರ್ ಸಿಗುತ್ತದೆ. ಅದನ್ನು ಬಳಸಿ ಮೊದಲು ನಿಮ್ಮ ವಾಷಿಂಗ್ ಮೆಷಿನ್ ಸ್ವಚ್ಛಗೊಳಿಸಿಕೊಳ್ಳಿ.
Men Fashion: ಹೊಟ್ಟೆ ಹೊರಗೆ ಬಂದಿದ್ಯಾ? ನಾಚಿಕೆ ಬಿಟ್ಟು ಈ ರೀತಿಯ ಡ್ರೆಸ್ ಧರಿಸಿ
ಲಿಕ್ವಿಡ್ ಡಿಟರ್ಜೆಂಟ್ ಬಳಕೆ : ಕೆಲ ಮೆಷಿನ್ ಗಳಿಗೆ ಲಿಕ್ವಿಡ್ ಡಿಟರ್ಜೆಂಟ್ ಬಳಸುವಂತೆ ಸೂಚನೆ ನೀಡಲಾಗುತ್ತದೆ. ಅನೇಕರ ಮನೆಯಲ್ಲಿ ಲಿಕ್ವಿಡ್ ಡಿಟರ್ಜೆಂಟ್ ಇಲ್ಲದೆ ಹೋದಾಗ, ಡಿಟರ್ಜೆಂಟ್ ನೀರಿನಲ್ಲಿ ಕರಗಿಸಿ ಅದನ್ನು ಬಳಸ್ತಾರೆ. ತಣ್ಣನೆಯ ನೀರಿನಲ್ಲಿ ಇದು ಕರಗುವುದಿಲ್ಲ. ಬಟ್ಟೆಗಳಿಗೆ ಇದು ಮೆತ್ತಿಕೊಂಡಿರುತ್ತದೆ. ಹಾಗಾಗಿ ಮೃದು ಬಟ್ಟೆಗಳಿಗೆ ಡಿಟರ್ಜೆಂಟ್ ಬಳಸುವುದನ್ನು ಮರೆಯಬೇಡಿ.
ಬಿಳಿ ಬಟ್ಟೆ : ಎಲ್ಲ ಬಟ್ಟೆಗಳ ಜೊತೆ ಬಿಳಿ ಬಟ್ಟೆಯನ್ನು ಸೇರಿಸಿ ಕ್ಲೀನ್ ಮಾಡುವ ಮಂದಿ ಅನೇಕರಿದ್ದಾರೆ. ಬಿಳಿ ಬಟ್ಟೆಗಳಿಗೆ ಬಣ್ಣ ಅಂಟುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಮೆಷಿನ್ ವಾಶ್ ಇರಲಿ ಹ್ಯಾಂಡ್ ವಾಶ್ ಇರಲಿ, ಬಿಳಿ ಬಟ್ಟೆಯನ್ನು ಪ್ರತ್ಯೇಕವಾಗಿಡಿ. ಹಾಗೆ ಬಣ್ಣ ಹೋಗುವ ಬಟ್ಟೆ,ಹೆವಿ ವರ್ಕ್ ಇರುವ ಬಟ್ಟೆಯನ್ನು ಮೆಷಿನ್ ಗೆ ಹಾಕಬೇಡಿ.
Winter Care: ನಿಮ್ಮ ಮೇಕಪ್‌ನಿಂದಲೇ ಚರ್ಮ ಒಣಗುತ್ತಿರಬಹುದು, ಎಚ್ಚರ!
ಬಟ್ಟೆ ಹಾಕುವ ವಿಧಾನ : ಬಟ್ಟೆಯ ಮೇಲ್ಭಾಗ ಮಾತ್ರ ಕೊಳಕಾಗಿರುತ್ತದೆ ಎಂದು ನಾವು ಭಾವಿಸುತ್ತೇವೆ. ಆದ್ರೆ ಬೆವರಿನ ವಾಸನೆ ಅಂಟಿಕೊಳ್ಳುವುದು ಬಟ್ಟೆಯ ಒಳ ಭಾಗದಲ್ಲಿ. ಹಾಗಾಗಿ ಬಟ್ಟೆಯ ಒಳ ಭಾಗವನ್ನು ಜಾಗೃತೆಯಿಂದ ಸ್ವಚ್ಛಗೊಳಿಸಬೇಕು.
ಕಾಲರ್ ಕ್ಲೀನಿಂಗ್ : ಕಾಲರ್ ಗೆ ಹೆಚ್ಚು ಕೊಳೆ ಇರುವುದು ಸಾಮಾನ್ಯ. ಮೆಷಿನ್ ನಲ್ಲಿ ಸ್ವಚ್ಛಗೊಳಿಸುವಾಗ ಕಾಲರ್ ಕ್ಲೀನ್ ಆಗುವುದಿಲ್ಲ. ಹಾಗಾಗಿ ಕಾಲರ್ ಬಟ್ಟೆಯನ್ನು ಒಮ್ಮೆ ಕೈನಲ್ಲಿ ಸ್ವಚ್ಛಗೊಳಿಸಿ ನಂತ್ರ ಮೆಷಿನ್ ಗೆ ಹಾಕುವುದು ಒಳ್ಳೆಯದು.