ಲಕ್ಷ್ಮಿ ಬಾರಮ್ಮಾ ಸೀರಿಯಲ್ ಕೀರ್ತಿ ಬ್ಯೂಟಿ ಸೀಕ್ರೆಟ್ ರಿವೀಲ್ಡ್, ಏನು ಗುಟ್ಟು?

ಧಾರಾವಾಹಿಯಲ್ಲಿ ಬರುವ ಕಲಾವಿದರು ನಮ್ಮ ಮನೆಮಂದಿಯಂತೆ ಆಗ್ಬಿಟ್ಟಿರ್ತಾರೆ. ಪ್ರತಿ ದಿನ ಟಿವಿ ಪರದೆ ಮೇಲೆ ಕಾಣಿಸಿಕೊಳ್ಳುವ ಅವ್ರ ಬಗ್ಗೆ ಒಂದಿಷ್ಟು ವಿಷ್ಯ ತಿಳಿಯೋ ಆಸಕ್ತಿ ನಮಗಿರುತ್ತೆ. ಭಾಗ್ಯಲಕ್ಷ್ಮಿ ಧಾರಾವಾಹಿ ಕೀರ್ತಿ ನಿಮಗಿಷ್ಟವಾದ್ರೆ ಅವರಿಷ್ಟವೇನು ಅಂತಾ ಇಲ್ಲೋದಿ. 
 

Colors kannada serial Lakshmi baramma keerthi role beauty secrets and fashion roo

ಕನ್ನಡ ಧಾರಾವಾಹಿ ನೋಡುವ ಪ್ರೇಕ್ಷಕರಿಗೆಲ್ಲ ಲಕ್ಷ್ಮಿ ಬಾರಮ್ಮ ಧಾರಾವಾಹಿ ಕೀರ್ತಿ ಪಾತ್ರದ ಪರಿಚಯ ಇದ್ದೇ ಇರುತ್ತೆ. ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕೀರ್ತಿ ಹೆಸರು ತನ್ವಿ ರಾವ್. ರಂಗಭೂಮಿ ಕಲಾವಿದೆಯಾಗಿರುವ ಕೀರ್ತಿ, ಧಾರಾವಾಹಿ ಜೊತೆ ರಂಗಭೂಮಿಯಲ್ಲೂ ಮುಂದುವರೆದಿದ್ದಾರೆ. ಸುವರ್ಣ ಹಾಗೂ ಉದಯ ಟಿವಿಯಲ್ಲಿ ಪ್ರಸಾರವಾಗ್ತಿದ್ದ ಧಾರಾವಾಹಿಗಳಲ್ಲಿ ನಟಿಸಿದ್ದ ತನ್ವಿ ತಮ್ಮ ಅಭಿನಯದಿಂದ ಲಕ್ಷಾಂತರ ಮಂದಿ ಮನಸ್ಸು ಕದಿಯುವಲ್ಲಿ ಯಶಸ್ವಿಯಾಗಿದ್ದಾರೆ.

ತನ್ವಿ, ಭರತನಾಟ್ಯ (Bharatanatya) ಕಲಾವಿದೆ. ತಮ್ಮ ನಾಲ್ಕನೇ ವಯಸ್ಸಿನಲ್ಲಿಯೇ ಭರತನಾಟ್ಯ ಕಲಿತ ತನ್ವಿ ರಾವ್, ಕಥಕ್, ಒಡಿಸಾ, ಬಾಲಿವುಡ್ ಸೇರಿದಂತೆ ಅನೇಕ ವಿಧದ ಡಾನ್ಸ್ ಕಲಿತಿದ್ದಾರೆ. ಅಪೂರ್ವ ಬಾಲಪ್ರತಿಭೆ ಪ್ರಶಸ್ತಿ ಪಡೆದಿದ್ದ ತನ್ವಿ ರಾಜ್ಯ ಪ್ರಶಸ್ತಿಯನ್ನು ಕೂಡ ಪಡೆದಿದ್ದಾರೆ. ತನ್ವಿ ಸದ್ಯ ಭಾಗ್ಯಲಕ್ಷ್ಮಿ ಧಾರಾವಾಹಿ (Serial) ಯಲ್ಲಿ ವಿಲನ್ ಪಾತ್ರಕ್ಕೆ ಜೀವ ತುಂಬುವ ಕೆಲಸ ಮಾಡ್ತಿದ್ದು, ಮೇಕಪ್ ಬಗ್ಗೆ ಅವರ ಆಸಕ್ತಿ ಏನು ಎಂಬುದರ ವಿವರ ಇಲ್ಲಿದೆ.

ಕನ್ನಡ ಸಿನಿಮಾ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಸಕ್ಸಸ್ ಆಗಲು ಕನ್ನಡಿಗರೇ ಕಾರಣ: ರಿಷಬ್‌ ಶೆಟ್ಟಿ

ತನ್ವಿ (Tanvi) ಮೇಕಪ್ ಮಾಡಿಕೊಳ್ಳೋದು ಹೇಗೆ ಗೊತ್ತಾ? : ಮೇಕಪ್ ಕಿಟ್ ಜೊತೆ ಸ್ಪಾಂಜ್, ಬ್ರೆಶ್ ಎಲ್ಲ ಬಂದೇ ಬರುತ್ತೆ. ಪ್ರೊಪೇಷನರ್ಸ್ ಬ್ರೆಶ್ ಅಥವಾ ಸ್ಪಂಜ್ ಬಳಸಿ ಮೇಕಪ್ ಮಾಡ್ತಾರೆ. ಆದ್ರೆ ತನ್ವಿ ಕೈನಿಂದ ಮೇಕಪ್ ಮಾಡಿಕೊಳ್ತಾರಂತೆ. ಯಾವುದನ್ನೂ ಬಳಸದೆ ಕೈನಿಂದಲೇ ಮೇಕಪ್ ಮಾಡಿಕೊಳ್ಳೋದು ಇಷ್ಟವಂತೆ. ನಾನೂ ನಟಿ ಪದ್ಮಜಾ ಮೇಡಂರಂತೆಯೇ ಕೈನಲ್ಲೇ ಮಾಡ್ತೇನೆ ಎನ್ನುವ ತನ್ವಿ, ಎರಡರಲ್ಲಿ ಒಂದನ್ನು ಆಯ್ಕೆ ಮಾಡ್ಬೇಕು ಅಂದ್ರೆ ಸ್ಪಾಂಜ್ ಎನ್ನುತ್ತಾರೆ ತನ್ವಿ.

ಉದ್ದ ನೇಲ್ಸ್ ಯಾಕೆ ಬಿಡಲ್ಲ ಗೊತ್ತಾ? : ತನ್ವಿಗೆ ಉದ್ದದ ಉಗುರಿಗಿಂತ ರೌಂಡ್ ಉಗುರು ಇಷ್ಟವಂತೆ. ಅದಕ್ಕೆ ಹಿಂದೆ ನಡೆದ ಘಟನೆ ಕಾರಣ ಎನ್ನುತ್ತಾರೆ ತನ್ವಿ. ಕಂಟೆಂಪರರಿ ವರ್ಕ್ ಶಾಪ್ ಗೆ ಹೋದಾಗ ಉದ್ದದ ಉಗುರು ಬಿಟ್ಟುಕೊಂಡು ಹೋಗಿದ್ರು. ಅಲ್ಲಿ ಉಗುರು ಮುರಿದು ಹೋಗಿತ್ತು. ಈ ವೇಳೆ ಟೀಚರ್ ಬೈದ್ರಿದ್ದು. ಉದ್ದದ ಉಗುರನ್ನು ಮೆಂಟೇನ್ ಮಾಡೋದು ಕಷ್ಟ ಎನ್ನುವ ತನ್ವಿ ಆ ನಂತ್ರ ಉಗುರು ಬಿಡೋದನ್ನು ಬಿಟ್ಟಿದ್ದಾರೆ. 

ಶಾರ್ಟ್ಸ್ ಇಲ್ಲದ ಫೋಟೋದಲ್ಲಿ ರಮ್ಯಾ ಹಾಟ್, ತಮ್ಮೆದೆಯಲ್ಲಿ ಕಿಚ್ಚು ಹತ್ತಿಸಿದ್ದಾರೆಂದ ಫ್ಯಾನ್ಸ್

ಕರ್ಲಿ ಹೇರ್ ಯಾಕೆ ಇಷ್ಟವಾಗಲ್ಲ ಗೊತ್ತಾ? : ಕರ್ಲಿ ಹೇರ್ ನಲ್ಲಿ ಹುಡುಗಿಯರು ಚೆಂದ ಕಾಣ್ತಾರೆ ಎನ್ನುವ ಮಾತಿದೆ. ತನ್ವಿಗೂ ಕರ್ಲಿ ಹೇರ್ ಇಷ್ಟವಂತೆ. ಆದ್ರೆ ಅದಕ್ಕೆ ಹೀಟ್ ಅಪ್ಲೈ ಮಾಡಿ ಸುಸ್ತಾಗ್ತೇನೆ. ಅದಕ್ಕಾಗಿ ಸ್ಟ್ರೇಟ್ ಹೇರ್ ಬೆಸ್ಟ್ ಎನ್ನುತ್ತಾರೆ ತನ್ವಿ.

ಥಿಕ್ ಐಬ್ರೋ ಇಷ್ಟ : ಎಕ್ಸ್ ಪ್ರೆಸ್ ಮಾಡೋಕೆ ಇದು ಯೂಸ್ ಆಗುತ್ತೆ. ಐಬ್ರೋ ತುಂಬಾ ಥಿನ್ ಇಲ್ಲ. ಐಬ್ರೋ ಥಿನ್ ಮಾಡಿದ್ರೆ ಮುಖ ಇನ್ನೂ ದೊಡ್ಡದಾಗಿ ಕಾಣುತ್ತೆ ಎನ್ನುತ್ತಾರೆ ತನ್ವಿ.

ತನ್ವಿಗೆ ಇವೆಲ್ಲ ಇಷ್ಟ : ಪಿಂಕ್ ಲಿಪ್ಸ್ಟಿಕ್ ಇಷ್ಟಪಡುವ ತನ್ವಿ ಬಿಬಿ ಕ್ರೀಮ್ ಗಿಂತ ಪೌಂಡೇಶನ್ ಹೆಚ್ಚು ರೆಫರ್ ಮಾಡ್ತಾರೆ. ಸ್ಮೋಕಿ ಐಸ್ ಇಷ್ಟ ಎನ್ನುವ ಬೆಡಗಿ ಪರ್ ಫ್ಯೂಮ್ ಲೈಕ್ ಮಾಡ್ತಾರಂತೆ.  

ಡಾನ್ಸ್ ಇವರ ಫೆವರೆಟ್ : ಸಣ್ಣವರಿದ್ದಾಗ್ಲೇ ಡಾನ್ಸ್ ಕಲಿತಿದ್ದ ತನ್ವಿಗೆ ಡಾನ್ಸ್ ಅಚ್ಚುಮೆಚ್ಚು. ಬೇಜರವಾದ್ರೂ ಡಾನ್ಸ್ ಮಾಡುವ ತನ್ವಿ ಖುಷಿಯಾದ್ರೂ ಡಾನ್ಸೇ ಮಾಡ್ತೇನೆ ಎನ್ನುತ್ತಾರೆ. ಮನೆಯಲ್ಲಿ ತನ್ನು ಅಂತಾ ನಿಕ್ ನೇಮ್ ಹೊಂದಿರುವ ತನ್ವಿ ಸೆಡ್ ನಲ್ಲಿ ಅವರ ಶೂಟ್ ಇದ್ರೆ ತುಂಬಾ ಸ್ಟ್ರಿಕ್ಟ್. ಸ್ಕ್ರಿಪ್ಟ್ ಹಿಡಿದು ಒಂದ್ಕಡೆ ಕುಳಿತ್ರೆ ತಲೆ ಎತ್ತಿಯೂ ನೋಡಲ್ವಂತೆ. ಸೀನ್ ಇಲ್ಲ ಅಂದಾಗ ಎಂಜಾಯ್ ಮಾಡ್ತಾರಂತೆ.  
 

Latest Videos
Follow Us:
Download App:
  • android
  • ios