ಇದೀಗ ಅವರು ಗಣೇಶ್‌ ಹಬ್ಬಕ್ಕೆ ಮತ್ತೊಂದು ರೀತಿಯ ಸಾಮಾಜಿಕ ಕೆಲಸದೊಂದಿಗೆ ಸುದ್ದಿಯಲ್ಲಿದ್ದಾರೆ. ಪ್ಲಾಸ್ಟಿಕ್‌ ಬಳಕೆ ನಿಷೇಧದ ಪರಿಣಾಮ ಮಾರುಕಟ್ಟೆಗಳಲ್ಲಿ ಬ್ಯಾಗ್‌ಗಳಿಗೆ ಪರದಾಡುವ ಗ್ರಾಹಕರು ಮತ್ತು ವ್ಯಾಪಾರಸ್ಥರಿಗೆ ಉಚಿತವಾಗಿ ಬಟ್ಟೆಬ್ಯಾಗ್‌ ವಿತರಿಸುವ ಮೂಲಕ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ಶುಕ್ರವಾರ (ಆಗಸ್ಟ್‌ 30) ಇದರ ಪ್ರಾಯೋಗಿಕ ಅಭಿಯಾನ ಬೆಂಗಳೂರಿನ ಗಾಂಧಿ ಬಜಾರ್‌ನಲ್ಲಿ ನಡೆಯಿತು. ಸಾವಿರಕ್ಕೂ ಹೆಚ್ಚು ಬಟ್ಟೆಬ್ಯಾಗ್‌ ವಿತರಿಸಿ ಅಲ್ಲಿ ಗಮನ ಸೆಳೆದರು.

ನಟ ರಾಕೇಶ್ ಕುಟುಂಬಕ್ಕೆ ಶ್ರುತಿನಾಯ್ಡು ₹1 ಲಕ್ಷ ನೆರವು!

‘ಪ್ಲಾಸ್ಟಿಕ್‌ ಬಳಕೆ ನಿಲ್ಲಬೇಕಿದೆ. ಅದು ಅನಿವಾರ್ಯವೂ ಹೌದು. ಈಗಾಗಲೇ ಪ್ಲಾಸ್ಟಿಕ್‌ ಬಳಕೆಯಿಂದ ಪರಿಸರ ಸಾಕಷ್ಟುಹಾಳಾಗಿದೆ. ಈ ನಿಟ್ಟಿನಲ್ಲಿ ಬಿಬಿಎಂಪಿ ಆರಂಭಿಸಿರುವ ಪ್ಲಾಸ್ಟಿಕ್‌ ನಿಷೇಧ ಅಭಿಯಾನಕ್ಕೆ ನಮ್ಮ ಬೆಂಬಲವಿದೆ. ಆ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಾವು ನಡೆಸುತ್ತಾ ಬಂದಿದ್ದೇವೆ. ಆದರೆ, ಪ್ಲಾಸ್ಟಿಕ್‌ ಬಳಕೆ ನಿಷೇಧದ ಪರಿಣಾಮ ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಗ್ರಾಹಕರು ಮತ್ತು ವ್ಯಾಪರಸ್ಥರಿಗೆ ಸಾಕಷ್ಟುತೊಂದರೆ ಆಗಿದೆ. ಪರ್ಯಾಯವಾಗಿ ಬ್ಯಾಗುಗಳೇ ಸಿಗುತ್ತಿಲ್ಲ.

'ಬ್ರಹ್ಮಗಂಟು' ಗುಂಡಮ್ಮನ ರಿಯಲ್ ಲುಕ್ ಇದು..

ಈ ಹಿಂದೆ ವರಮಹಾಲಕ್ಷ್ಮಿ ಹಬ್ಬಕ್ಕೆ ಗಾಂಧಿ ಬಜಾರ್‌ಗೆ ಹೋಗಿದ್ದಾಗ ಅಲ್ಲಿನ ಪರಿಸ್ಥಿತಿ ನೋಡಿದ್ದೆ. ಆಗ ನನಗನಿಸಿದ್ದು ಇಬ್ಬರಿಗೂ ಅನುಕೂಲ ಆಗುವ ಹಾಗೆ ಬಟ್ಟೆಅಥವಾ ಪೇಪರ್‌ ಬ್ಯಾಗ್‌ ವಿತರಿಸುವ ಕಾರ್ಯಕ್ರಮ. ಇದು ತಾತ್ಕಲಿಕ ಮಾತ್ರ. ಜನರು ತಾವೇ ಅಂತಹ ಬ್ಯಾಗ್‌ಗಳಿಗೆ ಮಾರು ಹೋಗುವ ತನಕ ಅವರಲ್ಲಿ ಅಭ್ಯಾಸ ಮಾಡಿಸುವುದು ಸೂಕ್ತ ಎನ್ನುವ ಕಾರಣಕ್ಕೆ ನಾವೇ ಉಚಿತವಾಗಿ ಬಟ್ಟೆಬ್ಯಾಗ್‌ ವಿತರಿಸಿದ್ದೇವೆ’ ಎನ್ನುತ್ತಾರೆ ನಟಿ ಹಾಗೂ ನಿರ್ಮಾಪಕಿ ಶ್ರುತಿ ನಾಯ್ಡು.

ಶ್ರುತಿ ನಾಯ್ಡು ಚಿತ್ರ ಸಂಸ್ಥೆಯ ಮೂಲಕ ನಡೆದ ಈ ಕಾರ್ಯಕ್ರಮದಲ್ಲಿ ‘ಬ್ರಹ್ಮಗಂಟು’ ಧಾರಾವಾಹಿಯ ಕಲಾವಿದರ ತಂಡ ಭಾಗವಹಿಸಿತ್ತು. ಅದರ ಪ್ರಮುಖ ಕಲಾವಿದರಾದ ಭರತ್‌, ಗೀತಾ, ವೀಣಾ ರಾವ್‌ ಹಾಗೂ ಮಂಗಳ ಪಾಲ್ಗೊಂಡು ಗಾಂಧಿ ಬಜಾರ್‌ನಲ್ಲಿ ಗ್ರಾಹಕರು ಮತ್ತು ವ್ಯಾಪರಸ್ಥರಿಗೆ ಬ್ಯಾಗ್‌ ವಿತರಿಸಿದರು. ಪ್ಲಾಸ್ಟಿಕ್‌ ನಿಷೇಧ ಅನಿವಾರ್ಯವಾಗಿರುವುದರಿಂದ, ಬಟ್ಟೆಬ್ಯಾಗ್‌ಗಳ ಬಳಕೆಗೆ ಆದ್ಯತೆ ನೀಡುವಂತೆ ಜನರಲ್ಲಿ ಜಾಗೃತಿ ಮೂಡಿಸಿದರು. ‘ಇದು ನಿರಂತರ ಕಾರ್ಯಕ್ರಮ. ಉದ್ದೇಶ ಪ್ಲಾಸ್ಟಿಕ್‌ ಬಳಕೆ ನಿಲ್ಲಬೇಕು. ಅದಕ್ಕೆ ಪರ್ಯಾಯವಾಗಿ ಬಟ್ಟೆಅಥವಾ ಪೇಪರ್‌ ಬ್ಯಾಗ್‌ ಬಳಕೆ ಹೆಚ್ಚಾಗಬೇಕು. ಆ ನಿಟ್ಚಿನಲ್ಲಿ ನಮ್ಮ ಕಾರ್ಯಕ್ರಮವನ್ನು ನಗರದ ವಿವಿಧ ಮಾರುಕಟ್ಟೆಗಳಲ್ಲೂ ನಡೆಸುತ್ತೇವೆ’ ಎನ್ನುವುದು ಶ್ರುತಿ ನಾಯ್ಡು ಮಾತು.