ಪ್ರೇಕ್ಷಕರನ್ನು ನಕ್ಕು ನಗಿಸಲು ಜೀ ಕನ್ನಡ ಖ್ಯಾತ ರಿಯಾಲಿಟಿ ಶೋ 'ಕಾಮಿಡಿ ಕಿಲಾಡಿಗಳು' ಶ್ರೀಘ್ರದಲ್ಲೇ ಆರಂಭವಾಗವಾಗಲಿದೆ. ಜೀ ವಾಹಿನಿ ಪ್ರೋಮೋವನ್ನು ರಿಲೀಸ್ ಮಾಡಿದೆ.

ಸಂಜೆ ಆದರೆ ಸಾಕು ಮೂವರು ತೀರ್ಪುಗಾರರನ್ನು ನೋಡಿ ನಗುವುದೇ ಒಂದು ಖುಷಿ. ’ಕಾಮಿಡಿ ಕಿಲಾಡಿಗಳು 3' ಶುರುವಾಗಲಿದೆ. ಭರ್ಜರಿ ಮನರಂಜನೆಗೆ ಕೊರತೆಯಿಲ್ಲ. ಸ್ಪರ್ಧಿಗಳ ಕಾಮಿಡಿ ಒಂದು ಕಡೆಯಾದರೆ ಎವರ್ ಗ್ರೀನ್ ಹಾಸ್ಯ ನಟ ಕಮ್ ಹೀರೋ ಜಗ್ಗೇಶ್ ಕಾಮಿಡಿ ನೋಡಲು ಜನ ಕಾಯುತ್ತಿರುತ್ತಾರೆ. ರಾಜ್ಯಾದ್ಯಂತ ಆಡಿಷನ್ ಮಾಡಿ 15-18 ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗುತ್ತದೆ.

 

ಸದ್ಯಕ್ಕೆ ಸರಿಗಮಪ ಸೀಸನ್ -16 ಕಾರ್ಯಕ್ರಮ ಪ್ರಸಾರವಾಗುತ್ತಿದ್ದು ಇದಾದ ನಂತರ ಕಾಮಿಡಿ ಕಿಲಾಡಿಗಳು ಪ್ರಸಾರವಾಗಬಹುದು.