ಈಗ ಭಟ್ಟರು ತಮ್ಮ ಮಾತನ್ನು ತಾವೇ ಮುರಿದಿದ್ದಾರೆ. ಜಯತೀರ್ಥ ನಿರ್ದೇಶನದ, ರಿಷಬ್ ಶೆಟ್ಟಿ ನಾಯಕನಾಗಿ ನಟಿಸಿರುವ ‘ಬೆಲ್ ಬಾಟಮ್’ ಚಿತ್ರದಲ್ಲಿ ನಿವೃತ್ತಿ ರೌಡಿ ಪಾತ್ರದಲ್ಲಿ ಅಭಿನಯಿಸಿದ್ದಾರೆ.

‘ಇದರಲ್ಲಿ ಯೋಗರಾಜ್ ಭಟ್ ಅವರ ಪಾತ್ರ ತುಂಬಾ ವಿಶೇಷವಾಗಿದೆ. ಭಟ್ಟರ ಪಾತ್ರ ಎಂದಾಗ ದ್ಯಾವ್ರೆ ಚಿತ್ರವನ್ನು ಗಮನದಲ್ಲಿಟ್ಟುಕೊಳ್ಳುವುದು ಸಹಜ. ಆದರೆ, ಇಲ್ಲಿ ಬೇರೆ. ಈಗಾಗಲೇ ನೀವು ಅವರ ಗೆಟಪ್ಗಳನ್ನು ನೋಡಿದ್ದೀರಿ. ನಾನು ಕತೆ ಬರೆಯುವಾಗಲೂ ಯೋಗರಾಜ್ ಭಟ್ ಅವರನ್ನೇ ಗಮನದಲ್ಲಿಟ್ಟುಕೊಂಡು ಪಾತ್ರಕಟ್ಟಿದೆ. ತುಂಬಾ ಹಿಲೇರಿಯಸ್ ಆಗಿದೆ. ನಿವೃತ್ತ ರೌಡಿ ಕಂ ಕ್ರೈಮ್ ಪ್ಲಾನರ್ ಕ್ಯಾರೆಕ್ಟರ್ ಆಗಿ ಭಟ್ಟರು ನಟಿಸುತ್ತಿದ್ದಾರೆ’ ಎನ್ನುತ್ತಾರೆ ಚಿತ್ರಕ್ಕೆ ಕತೆ ಹಾಗೂ ಚಿತ್ರಕತೆ ನೀಡಿರುವ ಟಿ ಕೆ ದಯಾನಂದ.