ಮುಂಜಾನೆ 5 ಗಂಟೆಯಿಂದ 6 ಗಂಟೆಯ ವರೆಗಿನ ಶುಭ ತುಲಾ ಲಗ್ನ ಮುಹೂರ್ತದಲ್ಲಿ ಹೊಸ ಜೀವನಕ್ಕೆ ಕಾಲಿಟ್ಟರು.

ಬಾಲ್ಯದ ಗೆಳೆಯರ ಪ್ರೀತಿಯ ಕಥೆ. ಆ ಕಥೆಗೆ ಈಗ ವಿವಾಹದ ಬಂದ ಲೂಸ್ ಮಾದ ಯೋಗಿ ಮತ್ತು ಟೆಕ್ಕಿ ಸಾಹಿತ್ಯ ವಿವಾಹ ಶಾಸ್ತ್ರೋಕ್ತವಾಗಿ ನಡೆಯಿತು. ಸ್ಟಾರ್ ಬಳಗ ಸೇರಿದಂತೆ ಗಣ್ಯರು ಯೊಗಿ ದಂಪತಿಗೆ ಶುಭ ಹಾರೈಸಿದರು.

ಕೋಣನ ಕುಂಟೆಯ ಶ್ರೀ ಕನ್ವೆನ್ಷನ್ ಹಾಲ್​ನಲ್ಲಿ ಲಾಂಗ್ ಟರ್ಮ್​.. ಗರ್ಲ್ ಫ್ರೆಂಡ್​ ಸಾಹಿತ್ಯ ಜೊತೆ ಇಂದು ಲೂಸ್ ಮಾದ ಯೋಗಿ ಗುರು-ಹಿರಿಯರ ಸಮ್ಮುಖದಲ್ಲಿ ಸಪ್ತಪದಿ ತುಳಿದರು. ಮುಂಜಾನೆ 5 ಗಂಟೆಯಿಂದ 6 ಗಂಟೆಯ ವರೆಗಿನ ಶುಭ ತುಲಾ ಲಗ್ನ ಮುಹೂರ್ತದಲ್ಲಿ ಹೊಸ ಜೀವನಕ್ಕೆ ಕಾಲಿಟ್ಟರು. ವಧು ಸಾಹಿತ್ಯ ಗೌರಿ ಪೂಜೆ ಮಾಡಿದರು. ಕಾಶಿಯಾತ್ರೆ. ಸೂರ್ಯ ಪೂಜೆ ಮುಗಿಸಿ ಯೋಗಿ ಪತ್ನಿಗೆ ಅಶ್ವಿನಿ ನಕ್ಷತ್ರ ತೋರಿಸಿದರು.

ಹಿರಿಯ ನಟ ಕಲಾತಪಸ್ವಿ ರಾಜೇಶ್, ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಸೇರಿದಂತೆ ಸ್ಯಾಂಡಲ್​ವುಡ್​ ಗಣ್ಯರು ಮದುವೆ ಸಂಭ್ರಮಕ್ಕೆ ಸಾಕ್ಷಿಯಾದರು.ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡ ನವದಂಪತಿಗೆ ಶುಭಕೋರಿದರು. ಒಟ್ಟಿನಲ್ಲಿ ಯೋಗಿ ತನ್ನಿಷ್ಟದ ಹುಡುಗಿ ಜೊತೆ ಸಪ್ತಪದಿ ತುಳಿದು ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಿದ್ಲಿಂಗು ದಾಂಪತ್ಯ ಮೆರವಣಿಗೆ ನೂರ್ಕಾಲ ಚೆನ್ನಾಗಿ ಸಾಗಲಿ.