ಅಂದುಕೊಂಡಂತೆ ಆಗಿದ್ದರೆ ಎಸ್‌ ನಾರಾಯಣ್‌ ನಿರ್ದೇಶನದ ‘ಪಂಟ' ಸಿನಿಮಾ ಇಷ್ಟೊತ್ತಿಗೆ ಬಿಡುಗಡೆಯಾಗಿ ಮೂರು ವಾರ ಕಳೆಯಬೇಕಿತ್ತು. ಆದರೆ, ಅದೇನಾಯಿತೋ ಗೊತ್ತಿಲ್ಲ ಮೊದಲೇ ನಿಗಧಿ ಮಾಡಿದ್ದ ‘ಪಂಟ'ನ ಬಿಡುಗಡೆಯ ದಿನಾಂಕವನ್ನು ಇದ್ದಕ್ಕಿದಂತೆ ಮುಂದೂಡಲಾಯಿತು. ಹೀಗೆ ಎಸ್‌ ನಾರಾಯಣ್‌ ಸಿನಿಮಾ ಇದ್ದಕ್ಕಿದಂತೆ ಬಿಡುಗಡೆ ಕಾಣದೆ ಹೋಗಿದ್ದರ ಹಿಂದೆ ನಿರ್ದೇಶಕ ಯೋಗರಾಜ್‌ ಭಟ್‌ ಅವರ ಹಾಡಿನ ಕೈವಾಡ ಇದೆ ಎಂದರೆ ಅಚ್ಚರಿಯಾಗಬೇಡಿ. ಯಾಕೆಂದರೆ ಭಟ್ಟರು ‘ಅಲ್ಲಾಡ್ಸು ಅಲ್ಲಾಡ್ಸು...' ಅಂತ ಹಿಟ್‌ ಕೊಟ್ಟರು. ನಾರಾಯಣ್‌ ಅವರಿಗೆ ಈ ಗೆಲುವೇ ಅವರ ಚಿತ್ರದ ಬಿಡುಗಡೆಗೆ ಅಡ್ಡಿಯಾಗಿದೆ. ವಿಷಯ ಇಷ್ಟೇ, ತರುಣ್‌ ಸುಧೀರ್‌ ನಿರ್ದೇಶನದ ‘ಚೌಕ' ಸಿನಿಮಾ ನೀವೆಲ್ಲ ನೋಡಿರುತ್ತೀರಿ. ಈ ಚಿತ್ರದಲ್ಲಿ ಯೋಗರಾಜ್‌ ಭಟ್‌ ಬರೆದಿರುವ ‘ಅಲ್ಲಾಡ್ಸು ಅಲ್ಲಾಡ್ಸು...' ಹಾಡು ಇದೆ. ಇದೇ ರೀತಿಯಲ್ಲಿ ಸೌಂಡು ಮಾಡುವ ಒಂದು ಹಾಡನ್ನು ನಿರ್ದೇಶಕ ಎಸ್‌ ನಾರಾಯಣ್‌ ಅವರ ‘ಪಂಟ' ಚಿತ್ರಕ್ಕೂ ಬೇಕು ಅಂತ ನಿರ್ಮಾಪಕರೇ ಹೇಳಿ ಬರೆಸಿದ್ದರು. ‘ಕುಲುಕು ಕುಲುಕು...' ಎಂದು ಸಾಗುವ ಈ ಹಾಡನ್ನು ಚಿತ್ರದಲ್ಲಿ ಬಳಸುದು ಬೇಡ ಅಂತ ಮೊದಲೇ ತಕರಾರು ತೆಗೆದರು ಎಸ್‌ ನಾರಾಯಣ್‌.

ಅನುಭವಿ ನಿರ್ದೇಶಕನ ಮಾತಿಗೆ ನಿರ್ಮಾಪಕರು ಸೋಲಬೇಕಾಯಿತು. ಹೀಗಾಗಿ ‘ಕುಲುಕು ಕುಲುಕು...' ಹಾಡನ್ನು ಚಿತ್ರದಿಂದ ಕೈ ಬಿಡಲಾಯಿತು. ಈ ನಡುವೆ ‘ಚೌಕ' ಸಿನಿಮಾ ಬಿಡುಗಡೆ ಆಯ್ತು. ಚಿತ್ರ ಹಿಟ್‌ ಆಯಿತೋ ಇಲ್ಲವೋ ಗೊತ್ತಿಲ್ಲ. ಆದರೆ, ಭಟ್ಟರ ‘ಅಲ್ಲಾಡ್ಸು ಅಲ್ಲಾಡ್ಸು' ಹಾಡು ಮಾತ್ರ ಸಿಕ್ಕಾಪಟ್ಟೆಸೌಂಡು ಮಾಡಿತು. ಈ ಹಾಡು ಹಿಟ್‌ ಆಗುತ್ತಿದ್ದಂತೆಯೇ ‘ಪಂಟ' ಚಿತ್ರದ ನಿರ್ಮಾಪಕ ಸುಬ್ರಮಣ್ಯಂ ಅವರು ಮತ್ತೆ ‘ಕುಲುಕು ಕುಲುಕು' ಹಾಡು ಬೇಕು ಅಂತ ಪಟ್ಟು ಹಿಡಿದರು. ಅಷ್ಟರೊಳಗೆ ಚಿತ್ರದ ಆಡಿಯೋ ಬಿಡುಗಡೆ ಮುಗಿದು ಸೆನ್ಸಾರ್‌ ಮುಗಿಸಿಕೊಂಡು ಬಿಡುಗಡೆಯ ದಿನಾಂಕವನ್ನೂ ಸಹ ಘೋಷಿಸಲಾಯಿತು. ಈ ಹೊತ್ತಿನಲ್ಲಿ ಕೈ ಬಿಟ್ಟಹಾಡನ್ನು ಮತ್ತೆ ಸೇರಿಸುವುದು ಹೇಗೆ? ಎನ್ನುವ ಪ್ರಶ್ನೆ ಎಸ್‌ ನಾರಾಯಣ್‌ ಅವರದ್ದು. ಅಲ್ಲದೆ ಡಬಲ್‌ ಮೀನಿಂಗ್‌ ಬರುವ ಇಂಥ ಹಾಡುಗಳು ಬೇಕಾಗಿಲ್ಲ ಎಂಬುದು ನಾರಾಯಣ್‌ ಅವರ ವಾದ. ಆದರೆ, ನಿರ್ಮಾಪಕರು ಕೇಳಬೇಕಲ್ಲ, ‘ಜನಕ್ಕೆ ಡಬಲ್‌ ಮೀನಿಂಗ್‌ ಹಾಡುಗಳೇ ಬೇಕು. ಅಲ್ಲಾಡ್ಸು ಅಲ್ಲಾಡ್ಸು ಹಾಡು ನೋಡಿ ಎಷ್ಟುಹಿಟ್‌ ಆಗಿದೆ. ಹೀಗಾಗಿ ಬಿಡುಗಡೆ ದಿನಾಂಕವನ್ನು ಮುಂದೂಡಿ. ಕುಲುಕು ಕುಲುಕು ಹಾಡನ್ನು ಚಿತ್ರೀಕರಣ ಮಾಡಿ' ಎಂದುಬಿಟ್ಟರು. ಅಲ್ಲಿಗೆ ‘ಪಂಟ' ಬಿಡುಗಡೆಯ ದಿನ ಮುಂದಕ್ಕೆ ಹೋಯಿತು.

ಈಗ ‘ಕುಲುಕು ಕುಲುಕು' ಹಾಡಿನ ಚಿತ್ರೀಕರಣಕ್ಕೆ ಎಸ್‌ ನಾರಾಯಣ್‌ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೆ ಈ ಹಾಡಿನಲ್ಲಿ ಸ್ಟಾರ್‌ ಹೀರೋ ಬೇರೆ ಕಾಣಿಸಿಕೊಳ್ಳಬೇಕಂತೆ. ಆ ಹೀರೋಗಾಗಿ ಚಿತ್ರತಂಡ ಹುಡುಕಾಟ ನಡೆಸುತ್ತಿದೆ. ಜಗತ್ತನ್ನು ಆಳುವುದು ಮನುಷ್ಯರಲ್ಲ ಹಣ ಎನ್ನುವ ಸಂದೇಶವನ್ನು ಹೊತ್ತ ಈ ಹಾಡಿನ ಚಿತ್ರೀಕರಣಕ್ಕೆ ಒಂದು ವಾರ ಕಾಲ ಬೇಕಾಗಿದೆ. ಈ ನಡುವೆ ನಾರಾಯಣ್‌ ಅವರದ್ದೇ ‘ಮನಸು ಮಲ್ಲಿಗೆ' ಚಿತ್ರ ಇದೇ ತಿಂಗಳು 31ಕ್ಕೆ ಬಿಡುಗಡೆ ಪಕ್ಕಾ ಆಗಿದೆ. ಈ ಸಿನಿಮಾ ಬಂದ ನಂತರವೇ ‘ಪಂಟ'ನಿಗೆ ಬಿಡುಗಡೆ ಮೋಕ್ಷ ದೊರೆಯಲಿದೆ. ಅಲ್ಲಿಗೆ ಭಟ್ಟರು ಅಲ್ಲಾಡಿಸಿದ್ದಕ್ಕೆ ನಾರಾಯಣ್‌ ಈಗ ಕುಲುಕಬೇಕಾಗಿದೆ!

ವರದಿ: ಕನ್ನಡ ಪ್ರಭ, ಸಿನಿ ವಾರ್ತೆ