ಬ್ರೇಕಿಂಗ್ ನ್ಯೂಸ್ : ದೀಪಿಕಾ ಮದುವೆ ದಿನಾಂಕ ಫಿಕ್ಸ್ ಆಯ್ತು, ವಿವಾಹ ಎಲ್ಲಿ ಗೊತ್ತೆ ?

First Published 31, Mar 2018, 9:03 PM IST
Year end wedding for Deepika Padukone Ranveer Singh
Highlights

ದೀಪೀಕಾ ಈಗಾಗಲೇ ಮದುವೆ ತಯಾರಿಗೆ ರೆಡಿಯಾಗುತ್ತಿದ್ದಾರೆ. ಪ್ರತಿಷ್ಟಿತ ಆಭರಣ ಹಾಗೂ ವಸ್ತ್ರ ಮಳಿಗೆಗಳಲ್ಲಿ ಶಾಪಿಂಗ್ ಮಾಡುತ್ತಿದ್ದಾರೆ. ಕೆಲವು ದಿನಗಳ ಹಿಂದಷ್ಟೆ ಇಬ್ಬರು ಜೋಡಿಗಳು ರಜೆಯ ಮಜವನ್ನು ಮಾಲ್ಡೀವ್ಸ್ ದೇಶದಲ್ಲಿ ಕಳೆದಿದ್ದರು.

ಬಾಲಿವುಡ್'ನಲ್ಲಿ ಸದ್ಯ ಹರಿದಾಡುತ್ತಿರುವ ಲವ್ ಸ್ಟೋರಿಗಳಲ್ಲಿ ಲೇಟೆಸ್ಟ್ ಆಗಿರುವುದು ರಣವೀರ್ ಸಿಂಗ್ ಹಾಗೂ ದೀಪಿಕಾ ಅವರದು. ವಿರಾಟ್  - ಅನುಷ್ಕಾ ನಂತರ ಇವರಿಬ್ಬರ ಮದುವೆ ಸುದ್ದಿ ನಿತ್ಯ ಒಂದಕ್ಕೊಂದು ಬಣ್ಣಕ್ಕೆ ತಿರುಗುತ್ತಿವೆ.

ಇತ್ತೀಚಿಗಷ್ಟೆ ಪದ್ಮಾವತಿ ಚಿತ್ರದ ಸಂಭ್ರಮದಲ್ಲಿ ರಣವೀರ್ ಹಾಗೂ ದೀಪೀಕಾ ತಮ್ಮ ಕುಟುಂಬದ ಜೊತೆ ಒಟ್ಟಾಗಿ ಪಾಲ್ಗೊಂಡಿದ್ದರು.  ಇದು ಮದುವೆಯ ಶುಭ ಸೂಚನೆ ಎಂದು ಹಲವು ಮಾಧ್ಯಮಗಳು ಹಾಗೂ ಬಾಲಿವುಡ್ ಮಂದಿ ಹೇಳಿದ್ದುಂಟು.ಈಗಿನ ತಾಜಾ ಸುದ್ದಿಯೆಂದರೆ  ಇವರಿಬ್ಬರು ಶೀಘ್ರದಲ್ಲಿಯೇ ಮದುವೆಯಾಗುತ್ತಿದ್ದಾರೆ. ಸೆಪ್ಟಂಬರ್ ಅಥವಾ ಡಿಸೆಂಬರ್'ನಲ್ಲಿ ಈ ಬಾಲಿವುಡ್ ಪ್ರೇಮಿಗಳು ದಾಂಪತ್ಯಕ್ಕೆ ಕಾಲಿಡಲಿದ್ದಾರೆ ಎನ್ನಲಾಗಿದೆ. ಆದರೆ ಮದುವೆ ಭಾರತದಲ್ಲಿಯೇ ಅಥವಾ ಹೊರ ರಾಷ್ಟ್ರದಲ್ಲಿಯೇ ಎಂಬುದು ಮಾತ್ರ ಗೋಪ್ಯವಾಗಿದೆ.

ದೀಪೀಕಾ ಈಗಾಗಲೇ ಮದುವೆ ತಯಾರಿಗೆ ರೆಡಿಯಾಗುತ್ತಿದ್ದಾರೆ. ಪ್ರತಿಷ್ಟಿತ ಆಭರಣ ಹಾಗೂ ವಸ್ತ್ರ ಮಳಿಗೆಗಳಲ್ಲಿ ಶಾಪಿಂಗ್ ಮಾಡುತ್ತಿದ್ದಾರೆ. ಕೆಲವು ದಿನಗಳ ಹಿಂದಷ್ಟೆ ಇಬ್ಬರು ಜೋಡಿಗಳು ರಜೆಯ ಮಜವನ್ನು ಮಾಲ್ಡೀವ್ಸ್ ದೇಶದಲ್ಲಿ ಕಳೆದಿದ್ದರು. ಯಾವುದೇ ವಿಷಯವನ್ನು ಬಿಚ್ಚಿಡುವುದರಲ್ಲಿ ಈ ಜೋಡಿ ನಾಚಿಕೆ ಪಟ್ಟುಕೊಳ್ಳುತ್ತಿಲ್ಲ. ಕೆಲವು ದಿನಗಳಲ್ಲಿಯೇ ಇಬ್ಬರ ಮದುವೆಯ ಸುದ್ದಿ ಬಹಿರಂಗವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

loader