ಸಾಮಾಜಿಕ ಮಾಧ್ಯಮಗಳಲ್ಲಿ ಸಂಚಲನ ಮೂಡಿಸಿದ ಸುದೀಪ್-ದರ್ಶನ್ ಬಗ್ಗೆ ನುಡಿದ ಯಶ್ ಶಾಕಿಂಗ್ ಹೇಳಿಕೆ!

First Published 11, Jan 2018, 6:50 PM IST
Yash Statement about Sudeep and darshan
Highlights

ಯಶ್'ಗೆ ಸುದೀಪ್ ಹಾಗೂ ದರ್ಶನ್ ಅವರನ್ನು  ಕಂಡರೆ ಆಗೋದಿಲ್ಲ ಅನ್ನೋ ಮಾತುಗಳು, ಗಾಂಧಿನಗರದಲ್ಲಿ ಕೇಳಿ ಬರುವ ಮಾತು.

ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ವಾರ್ ಇದೆ ಅನ್ನೋದು ಆಗಾಗ ಕೇಳಿ ಬರುವ ಮಾತು. ಒಬ್ಬ ನಟನನ್ನ ಕಂಡ್ರೆ, ಮತ್ತೊಬ್ಬ ನಟನಿಗೆ ಆಗಲ್ಲ. ಹಾಗೇ ಇವ್ರನ್ನ ನೋಡಿ ಆ ನಟನ ಅಭಿಮಾನಿಗಳು ಕಿತ್ತಾಡುತ್ತಾರೆ ಎಂಬ ಆರೋಪ. ಸ್ಯಾಂಡಲ್'ವುಡ್'ನಲ್ಲಿ ಕೇಳ್ತಾನೆ ಇರ್ತೀವಿ. ಆದರೆ ರಾಕಿಂಗ್'ಸ್ಟಾರ್ ಯಶ್ ಅವರ ಒಂದು ಹೇಳಿಕೆ ಕನ್ನಡ ಚಿತ್ರೋದ್ಯಮದಲ್ಲಿ ಸಂಚಲನ ಸೃಷ್ಟಿಸಿದೆ.

ಯಶ್'ಗೆ ಸುದೀಪ್ ಹಾಗೂ ದರ್ಶನ್ ಅವರನ್ನು  ಕಂಡರೆ ಆಗೋದಿಲ್ಲ ಅನ್ನೋ ಮಾತುಗಳು, ಗಾಂಧಿನಗರದಲ್ಲಿ ಕೇಳಿ ಬರುವ ಮಾತು. ಆದರೆ ರಾಕಿಂಗ್​ ಸ್ಟಾರ್ ಯಶ್ ತಮ್ಮ ಹುಟ್ಟು ಹಬ್ಬದ ವಿಶೇಷವಾಗಿ, ಸುವರ್ಣ ನ್ಯೂಸ್ ಜೊತೆ ಸುದೀಪ್ ಮತ್ತು ದರ್ಶನ್ ಬಗ್ಗೆ ಶಾಕಿಂಗ್ ಸ್ಟೇಟ್'ಮೆಂಟ್ ಕೊಟ್ಟಿದ್ದಾರೆ. ಈ ಹೇಳಿಕೆ ಸೋಷಿಯಲ್ ಮೀಡಿಯದಲ್ಲಿ ವೈರಲ್ ಆಗಿರೋದು ಅಚ್ಚರಿ ಮೂಡಿಸಿದೆ.

ಚಿತ್ರರಂಗಕ್ಕೆ ಒಳ್ಳೆಯ ಬೆಳವಣಿಗೆ

ಹುಟ್ಟುಹಬ್ಬದ ದಿನದಂದು ಸುವರ್ಣ ನ್ಯೂಸ್'ಗೆ ನಿಡಿದ ವಿಶೇಷ ಸಂದರ್ಶನದಲ್ಲಿ ಯಶ್' ಸುದೀಪ್ ಅವರ  ಹೈಟ್ ಮತ್ತು ಅವರ ವಾಯ್ಸ್ ಇಷ್ಟ ದಿದ್ದರು. ಹಾಗೆ ದರ್ಶನ್ ಬಗ್ಗೆ ಅವರ ಪರ್ಸನಾಲಿಟಿ.  ಅವರೆದರು ನಿಂತರೇ ಬೇರೆ ಯಾರೂ ಕಾಣಲ್ಲ. ಈಗ ಕುರುಕ್ಷೇತ್ರದಲ್ಲಿ ಸೂಪರ್ ಆಗಿ ಕಾಣಿಸ್ತಿದ್ದಾರೆ. ಅವರಿಗೆ ಮಾಸ್ ಇಮೇಜ್ ಚೆನ್ನಾಗಿ ಹೋಲುತ್ತೆ ' ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ನಮ್ಮವರು ಎಂಬ ಭಾವನೆಯನ್ನು ಯಶ್ ವ್ಯಕ್ತಪಡಿಸಿದರು. ಒಟ್ಟಿನಲ್ಲಿ ಕನ್ನಡ ಸ್ಟಾರ್ ನಟರ ಮಧ್ಯೆ ಒಳ್ಳೆ ಬಾಂಧ್ಯವ ಇದೆ ಅನ್ನೋದಿಕ್ಕೆ ಯಶ್ ಮಾತುಗಳೇ ಸಾಕ್ಷಿ. ಯಶ್ ಮಾತನಾಡಿರೋ ಮಾತುಗಳನ್ನ ಕೇಳಿದ್ರೆ, ನಿಜಕ್ಕೂ ಕನ್ನಡ ಚಿತ್ರರಂಗದಲ್ಲಿ ಒಳ್ಳೆ ಬೆಳವಣಿಗೆ ಅನ್ನಿಸುತ್ತೆ.

loader