ಸ್ಯಾಂಡಲ್ ವುಡ್ ರಾಕಿಂಗ್ ಕಪಲ್ ಯಶ್- ರಾಧಿಕಾ ಪಂಡಿತ್ ಇಬ್ಬರೂ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಯಶ್ ಕೆಜಿಎಫ್-2 ನಲ್ಲಿ ಬ್ಯುಸಿಯಾಗಿದ್ರೆ, ರಾಧಿಕಾ ಪಂಡಿತ್ ಆದಿಲಕ್ಷ್ಮೀ ಪುರಾಣದಲ್ಲಿ ಬ್ಯುಸಿಯಾಗಿದ್ದಾರೆ. ರಾಧಿಕಾ ಅವರ ಆದಿಲಕ್ಷ್ಮೀ ಪುರಾಣ ಟ್ರೇಲರ್ ರಿಲೀಸ್ ಆಗಿದೆ. ಟ್ರೇಲರ್ ಬಿಡುಗಡೆ ಸಮಾರಂಭಕ್ಕೆ ಯಶ್ ಆಗಮಿಸಿದ್ದರು. 

ರಾಧಿಕಾ ತುಂಬಾ ಟ್ಯಾಲೆಂಟೆಡ್‌ ನಟಿ: ಯಶ್‌

ಈ ವೇಳೆ ಯಶ್ ಪತ್ನಿಯ ನಟನೆ ಬಗ್ಗೆ ಹೊಗಳುತ್ತಾ, ಸಿನಿಮಾ ಬಗ್ಗೆ ಇಂಟರೆಸ್ಟಿಂಗ್ ವಿಚಾರವೊಂದನ್ನು ಹೇಳಿದ್ದಾರೆ.  ‘ ಸುಹಾಸಿನಿ ಮೇಡಂ ನನಗೆ ಕಾಲ್ ಮಾಡಿ ಸ್ಕ್ರಿಪ್ಟ್ ಬಗ್ಗೆ ಮಾತನಾಡಿದರು. ಕಥೆ ಕೇಳಿ ನಾನು ಇಂಪ್ರೆಸ್ ಆದೆ. ಕೂಡಲೇ ರಾಕ್ ಲೈನ್ ವೆಂಕಟೇಶ್ ಗೆ ತಿಳಿಸಿದೆ. ಅವರಿಗೂ ಸ್ಕ್ರಿಪ್ಟ್ ಇಷ್ಟವಾಯ್ತು. ನಿರ್ಮಾಣ ಮಾಡಲು ಒಪ್ಪಿಕೊಂಡರು. ಹಾಗೇ ರಾಧಿಕಾ ಕೂಡಾ ಒಪ್ಪಿಕೊಂಡರು. ಅಲ್ಲಿಂದ ಆದಿಲಕ್ಷ್ಮೀ ಪುರಾಣ ಶುರುವಾಯ್ತು’ ಎಂದಿದ್ದಾರೆ. 

ರಾಧಿಕಾಗಾಗಿ ಯಶ್ ಮಾಡಿದ್ರು ಶಪಥ

ಯಶ್-ಸುಹಾಸಿನಿ ಮಾಸ್ಟರ್ ಪೀಸ್ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದಾರೆ.