ಬೆಂಗಳೂರು(ನ.04): ಸ್ಯಾಂಡಲ್ ವುಡ್ ನಟ ಯಶ್ ಮತ್ತೆ ಮಾಧ್ಯಮಗಳಿಗೆ ಬುದ್ಧಿವಾದ ಹೇಳಿದ್ದಾರೆ. ಸಂತು ಸ್ಟ್ರೈಟ್ ಫಾರ್ವರ್ಡ್ ಚಿತ್ರದ ಯಶಸ್ಸಿನ ಖುಷಿಯಲ್ಲಿ ರಾಧಿಕಾ ಪಂಡಿತ್ ಜೊತೆ ಸುದ್ದಿಗೋಷ್ಠಿ ನಡೆಸಿದ ಯಶ್, ರೈತರ ಬಗ್ಗೆ ಪಾಸಿಟಿವ್ ಸುದ್ದಿ ಮಾಡಿ ಎಂದರು.

CLICK HERE.. 25 ವರ್ಷಗಳಿಂದ ಗುಹೆಗೆ ಹೋಗುತ್ತಿದ್ದ ಆ ಮನುಷ್ಯ ಏನು ಮಾಡಿದ್ದ ಗೊತ್ತಾ..?

ಇದೇವೇಳೆ, ಚಾನಲ್`ಗಳ ವೇದಿಕೆಗೆ ಬರುವುದರಿಂದ ರೈತರ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಬಹುದು ಎಂಬ ಅಭಿಪ್ರಾಯ ನಿಮ್ಮಿಂದ ವ್ಯಕ್ತವಾಗಿದೆ. ಎಲ್ಲ ಚಾನಲ್`ಗಳಿಗೂ ಬರಲು ನಾನು ಸಿದ್ದ. ಈ ಹಿಂದೆ ಎಲ್ಲರೂ ಒಂದೇ ವೇದಿಕೆಗೆ ಬರಲಿ ಎಂಬುದು ನನ್ನ ಅಭಿಪ್ರಾಯವಾಗಿತ್ತು. ಆದರೆ, ಅದು ಇಗೋಗೆ ಟರ್ನ್ ಆಗಿದ್ದರಿಂದ ಆ ನಿರ್ಧಾರ ಕೈಬಿಟ್ಟು ಚಾನಲ್`ಗಳಿಗೇ ಬರಲು ನಿರ್ಧರಿಸಿದ್ದೇನೆ ಎಂದು ಯಶ್ ಹೇಳಿದ್ಧಾರೆ.