ಕಳೆದ ಆಗಸ್ಟ್ ತಿಂಗಳಲ್ಲಿ ಗೋವಾದಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ನೆರವೇರಿತ್ತು. ಇದೀಗ ಅವರ ಮದುವೆ ಡಿಸೆಂಬರ್ 10 ಮತ್ತು 11 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ನಡೆಯಲಿದೆ.

ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಮದುವೆ ಸಂಭ್ರಮ ಶುರುವಾಗಿದೆ. ನಟ ಯಶ್ ಮತ್ತು ರಾಧಿಕಾ ಎಲ್ಲರಿಗೂ ಲಗ್ನ ಪತ್ರಿಕೆಯನ್ನೂ ಕೊಡ್ತಿದ್ದಾರೆ. ಪ್ರೀತಿಯಿಂದ ಎಲ್ಲರನ್ನೂ ಆಹ್ವಾನಿಸುತ್ತಿದ್ದಾರೆ. ಯಶ್ ಹಾಗೂ ರಾಧಿಕಾ ಪಂಡಿತ್ ಈಗಾಗಲೇ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಡಿಸೆಂಬರ್ ನಲ್ಲಿ ಅವರ ಮದುವೆ ಫಿಕ್ಸ್ ಆಗಿದೆ. ಕಳೆದ ಆಗಸ್ಟ್ ತಿಂಗಳಲ್ಲಿ ಗೋವಾದಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ನೆರವೇರಿತ್ತು. ಇದೀಗ ಅವರ ಮದುವೆ ಡಿಸೆಂಬರ್ 10 ಮತ್ತು 11 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ನಡೆಯಲಿದೆ.

ಈ ಹಿನ್ನೆಲೆಯಲ್ಲಿ ಮದುವೆಗೆ ಮಮತೆಯಿಂದ ಎಲ್ಲರಿಗೂ ಕರೆಯೋಲೆ ನೀಡ್ತಿದ್ದಾರೆ. ಆದರೆ, ಯಶ್ ಇಲ್ಲೂ ಪರಿಸರ ಕಾಳಜಿ ಮೆರೆದಿದ್ದಾರೆ. ಲಗ್ನ ಪತ್ರಿಕೆಯೊಂದಿಗೆ ಒಂದು ಸಂಪಿಗೆ ಸಸಿಯನ್ನ ಕೊಡ್ತಿದ್ದಾರೆ. ಪತ್ರಕರ್ತ ಮತ್ತು ಸಾಹಿತಿ ಜೋಗಿ ಬರೆದ ಲೈಫ್ ಈಜ್ ಬ್ಯುಟಿಫುಲ್ ಪುಸ್ತಕವನ್ನೂ ಯಶ್ ಕೊಡ್ತಿದ್ದಾರೆ. ಅಷ್ಟೇ ಅಲ್ಲದೇ ಯಶ್ ಲಗ್ನ ಪತ್ರಿಕೆಗಾಗಿಯೇ ನಿರ್ದೇಶಕ ಯೋಗಾಜ್ ಭಟ್ಟರು, ಆಹ್ವಾನದ ಆತ್ಮೀಯವಾದ ಸಾಲುಗಳನ್ನೂ ಬರೆದುಕೊಟ್ಟಿದ್ದಾರೆ. ಅದನ್ನ ನಿರ್ದೇಶಕ ಎ.ಪಿ.ಅರ್ಜುನ್ ಸುಂದರವಾಗಿ ಕೈಯಿಂದ ಬರೆದಿದ್ದಾರೆ. ಅದೇ ಕೈ ಬರಹ ಅಚ್ಚಾಗಿರೋ ಲಗ್ನ ಪತ್ರಿಕೆಗಳನ್ನ ಯಶ್ ಮತ್ತು ರಾಧಿಕಾ ಆಪ್ತರಿಗೆ ಸ್ನೇಹಿತರಿಗೆ ಗಣ್ಯರಿಗೆ ಕೊಟ್ಟು ತಮ್ಮ ಮದುವೆಗೆ ಆಹ್ವಾನಿಸುತ್ತಿದ್ದಾರೆ.

ಮೊಗ್ಗಿನ ಮನಸ್ಸಿನಿಂದ ಶುರುವಾದ ಪ್ರೀತಿ

ಇನ್ನು ‘ಮೊಗ್ಗಿನ ಮನಸ್ಸು’ ಚಿತ್ರದಲ್ಲಿ ಮೊದಲ ಬಾರಿಗೆ ಜೊತೆಯಾಗಿ ನಟಿಸಿದ್ದ ಯಶ್, ರಾಧಿಕಾ ಪಂಡಿತ್ ಬಳಿಕ ‘ಡ್ರಾಮಾ’, ‘ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ’ ಹಾಗೂ ತೆರೆ ಕಾಣಲಿರುವ ‘ ಸಂತು ಸ್ಟ್ರೈಟ್ ಫಾರ್ವರ್ಡ್ ಚಿತ್ರದಲ್ಲಿ ಒಟ್ಟಿಗೆ ಅಭಿನಯಿಸಿದ್ದಾರೆ. ಇನ್ನು ಇದೀಗ ಯಶ್ ತಮ್ಮ ಮದುವೆ ತಯಾರಿಯಲ್ಲಿ ಬ್ಯುಸಿಯಾಗಿದ್ದು, ಕೆಲವು ದಿನಗಳ ಕಾಲ ಇದಕ್ಕಾಗಿ ಯಶ್ ಮತ್ತು ರಾಧಿಕಾ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ಯಶ್ ಮುಂದಿನ ಚಿತ್ರ ಕೆಜಿಎಫ್ ಚಿತ್ರೀಕರಣವನ್ನು ಜನವರಿಗೆ ಮುಂದೂಡಿದ್ದಾರೆ.

ಸದ್ಯಕ್ಕೆ ಇಬ್ಬರೂ ಸಂತು ಸ್ಟ್ರೈಟ್ ಫಾರ್ವರ್ಡ್ ಚಿತ್ರದ ಯಶಸ್ಸಿನ ಖುಷಿಯಲ್ಲಿದ್ದಾರೆ. ರೀಲ್ ಲೈಫ್‌ನಲ್ಲೂ ಯಶಸ್ವಿ ಜೋಡಿ ಎನ್ನಿಸಿಕೊಂಡಿರುವ ಯಶ್ ಮತ್ತು ರಾಧಿಕಾ ಪಂಡಿತ್, ನಿಜ ಜೀವನದಲ್ಲಿಯೂ ಜೊತೆಯಾಗುತ್ತಿದ್ದಾರೆ.