ಅಂಬರೀಶ್ ನಿಧನಕ್ಕೂ ಮೊದಲೇ ಅವರ ಕನಸಿನಂತೆ ಹೊಸ ಮನೆ ಕಟ್ಟುವ ಕಾರ್ಯ ಆರಂಭಗೊಂಡಿತ್ತು. ಕೊನೆ ದಿನಗಳನ್ನು ಆ ಮನೆಯಲ್ಲೆ ಕಳೆಯುವ ಬಯಕೆ ಅವರು ಹೊಂದಿದ್ದರು. ಅದೇ ಜಾಗದಲ್ಲಿದ್ದ ಹಳೆಯ ಮನೆಯಲ್ಲಿ 29 ವರ್ಷಗಳ ಕಾಲ ಅಂಬರೀಶ್ ವಾಸವಿದ್ದರು. ಬೆಂಗಳೂರಲ್ಲಿ ಲಿಫ್ಟ್ ಇರುವ ಮೊದಲ ಮನೆ ಎಂಬ ಖ್ಯಾತಿ ಅಂಬರೀಷ್ ಅವರ ಈ ಮನೆಗೆ ಇತ್ತು.

'23 ರ ಫಲಿತಾಂಶದ ಬಗ್ಗೆ ಕ್ಯೂರಿಯಾಸಿಟಿಯಿದೆ, 31 ಕ್ಕೆ ಜಾಸ್ತಿ ಟೆನ್ಷನ್ ಇದೆ' !

ಆ ಹಳೆ ಮನೆಯನ್ನು ನೆಲಸಮ ಮಾಡಿ ನೂತನ ಮನೆ ನಿರ್ಮಿಸಲಾಗಿದೆ. ಹಳೆ ಮನೆ ಜಾಗದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಗೊಂಡ ಬಳಿಕ ಅಂಬರೀಶ್ ಗಾಲ್ಪ್ ಕೋರ್ಸ್ ಮುಂಭಾಗ ಸ್ಯಾಂಕಿ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದರು. ಸುಮಲತಾ ಅಂಬರೀಶ್ ಹಾಗೂ ಪುತ್ರ ಅಭಿಷೇಕ್ ಅವರು ಶುಕ್ರವಾರ ಪೂಜೆ ಸಲ್ಲಿಸುವ ಮೂಲಕ ಗೃಹ ಪ್ರವೇಶ ಮಾಡಿದರು. ಈ ಕಾರ್ಯಕ್ರಮಕ್ಕೆ ಕುಟುಂಬದ ಆಪ್ತರಿಗಷ್ಟೆ ಆಹ್ವಾನ ನೀಡಲಾಗಿತ್ತು. 

‘ನಿಖಿಲ್ ಎಲ್ಲಿದ್ದಿಯಪ್ಪಾ’ಗೆ ವಿಶ್ ಮಾಡಿದ ಯಶ್