ಯಶ್ - ಧನಂಜಯ್ ಯಾರಿಗೆ ಚಾನ್ಸ್ ?

Yash and Dhananajai Gossip News
Highlights

ಈ ಹಿಂದೆ ಹೇಳಿರೋ ಹಾಗೆ ಕನ್ನಡ ಅರ್ಜುನ್ ರೆಡ್ಡಿ ಚಿತ್ರದಲ್ಲಿ ನಟ ರಾಕಿಂಗ್ ಸ್ಟಾರ್ ಯಶ್ ಅಭಿನಯಸುತ್ತಾರೆ ಅನ್ನೊ ಸುದ್ದಿ ಇತ್ತು ಇದಕ್ಕೆ ಪ್ರತಿಕ್ರಿಯೇಸಿದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ , ಸದ್ಯ ನಾಯಕನ ಆಯ್ಕೆ ಪಕ್ಕಾ ಆಗಿಲ್ಲ ಅಂತ ಹೇಳಿದ್ದಾರೆ. 

ಅರ್ಜುನ್ ರೆಡ್ಡಿ ಸೌತ್ ಇಂಡ್ರಸ್ಟಿಯಲ್ಲಿ ಬ್ಲಾಕ್ ಬಸ್ಟರ್ ಹಿಟ್ ಕೊಟ್ಟ ಸಿನಿಮಾ.  ವಿಜಯ ದೇವರ ಕೊಂಡ ಅಭಿನಯದ ಈ ಸಿನಿಮಾ ಸದ್ಯ ಟಾಲಿವುಡ್ ಹಲ ಚಲ್ ಎಬ್ಬಿಸಿದ ಈ ಸಿನಿಮಾ ಸ್ಯಾಂಡಲ್ ವುಡ್ ಗೂ ಎಂಟ್ರಿ ಕೋಟ್ಟಿದೆ. ಸದ್ಯ ಅರ್ಜನ್ ರೆಡ್ಡಿ ಕನ್ನಡ ರಿಮೇಕ್ ರೈಟ್ಸ್ ನಿರ್ಮಾಪಕ ರಾಕ್ ಲೈನ್ ವೆಂಕೆಟೇಶ್ ಪಡೆದುಕೊಂಡಿದ್ದಾರೆ.

ಈ ಹಿಂದೆ ಹೇಳಿರೋ ಹಾಗೆ ಕನ್ನಡ ಅರ್ಜುನ್ ರೆಡ್ಡಿ ಚಿತ್ರದಲ್ಲಿ ನಟ ರಾಕಿಂಗ್ ಸ್ಟಾರ್ ಯಶ್ ಅಭಿನಯಸುತ್ತಾರೆ ಅನ್ನೊ ಸುದ್ದಿ ಇತ್ತು ಇದಕ್ಕೆ ಪ್ರತಿಕ್ರಿಯೇಸಿದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ , ಸದ್ಯ ನಾಯಕನ ಆಯ್ಕೆ ಪಕ್ಕಾ ಆಗಿಲ್ಲ ಅಂತ ಹೇಳಿದ್ದಾರೆ. 

ಇದೀಗ, ಇದೇ ಪ್ರಶ್ನೆ ಮತ್ತೆ ಗಾಂಧಿನಗರದಲ್ಲಿ ಚರ್ಚೆಯಾಗುತ್ತಿದೆ. ಅರ್ಜನ್ ರೆಡ್ಡಿ ರಿಮೇಕ್'ನಲ್ಲಿ ಯಾರು ನಾಯಕ ಅನ್ನೊ ಪ್ರಶ್ನೆಗೆ ಈ ಬಾರಿ ರಾಕಿಂಗ್ ಸ್ಟಾರ್ ಜೊತೆಯಲ್ಲಿ ಡಾಲಿ ಧನಂಜಯ್ ಹೆಸರು ಕೂಡ ಕೇಳಿ ಬರ್ತಿದೆ. ಯಶ್ ಪ್ರತಿಭೆ ಬಗ್ಗೆ ಸಿನಿಪ್ರೇಕ್ಷಕರಿಗೆ ಗೊತ್ತೆ ಇದೆ. ಇನ್ನು ಸ್ಯಾಂಡಲ್'ವುಡ್'ನಲ್ಲಿ ತನ್ನ ಅದ್ಭತ ನಟನೆ ಮೂಲಕ ಗಮನ ಸೆಳೆದ ನಟಿ ಧನಂಜಯ್ ಮತ್ತೆ ಟಗರು ಚಿತ್ರದಲ್ಲಿ ಹೊಸ ಮ್ಯಾನರಿಸಂ'ನಿಂದ ಅಬ್ಬರಿಸಿ ಬೊಬ್ಬೆರೆರಿದ್ದಾರೆ. ಇನ್ನು ಇವರ ಈ ವಿಲನ್ ಪಾತ್ರ ಕಂಡ ಸಿನಿಪ್ರೇಕ್ಷಕರು ಪಕ್ಕಾ ಅರ್ಜುನ್ ರೆಡ್ಡಿ ಪಾತ್ರವನ್ನ ಧನಂಜಯ್ ಮಾಡಿದ್ರಿ ಸಖತ್ತಾಗಿರುತ್ತೆ ಅಂತ ಹೇಳ್ತಿದ್ದಾರೆ.

ಯಶ್ ಮತ್ತು ಧನಂಜಯ್ ಒಳ್ಳೆ ಅದ್ಭುತ ಕಲಾವಿದರು. ಇವರಲ್ಲಿ ಯಾರು ನಟಿಸಿದರೂ ಸಿನಿಮಾ ಚೆನ್ನಾಗಿಯೇ ಮೂಡಿ ಬರುತ್ತದೆ ಅಂತ ಇನ್ನು ಕೆಲವರು ಹೇಳ್ತಿದ್ದಾರೆ. ಮತ್ತೊಂದು ಕಡೆ ಈ ಸಿನಿಮಾ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಟಿಸುತ್ತಾರೆ ಅನ್ನೋ ಸುದ್ದಿ ಕೂಡ ಹರಿದಾಡ್ತಿದೆ.

loader