ನರ್ತನ್‌ಗೆ ‘ಮಾಸ್ಟರ್‌ಪೀಸ್’ ಚಿತ್ರದಲ್ಲಿ ಯಶ್ ಜೊತೆ ಕೆಲಸ ಮಾಡಿದ್ದರು. ನರ್ತನ್ ಕೆಲಸ ಯಶ್ ಮೆಚ್ಚಿಕೊಂಡಿದ್ದರು.
ವರ್ಷದ ಕೊನೆಯಲ್ಲಿ ಚಿತ್ರರಂಗದಲ್ಲಿ ಸಂಭ್ರಮ ಹುಟ್ಟಿಸಿದ ಚಿತ್ರ ‘ಮಫ್ತಿ’. ಶಿವಣ್ಣನ ಖದರ್, ಶ್ರೀಮುರಳಿಯ ಪವರ್ ನೋಡಿದ ಪ್ರೇಕ್ಷಕ ಫಿದಾ ಆಗಿದ್ದಾನೆ. ‘ಮಫ್ತಿ’ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಸಂದರ್ಭ ಹೀಗಿರುವಾಗ ಚೊಚ್ಛಲ ಚಿತ್ರದಲ್ಲಿ ಸೆಂಚುರಿ ಬಾರಿಸಿರುವ ನಿರ್ದೇಶಕ ನರ್ತನ್ ಮೇಲೆ ಎಲ್ಲರ ಕಣ್ಣು ಬಿದ್ದಿದೆ. ಅವರ ಮುಂದಿನ ಚಿತ್ರ ಯಾರಿಗಾಗಿ ಎಂಬ ಕುತೂಹಲ ಎಲ್ಲರನ್ನೂ ಕಾಡುತ್ತಿದೆಯಾದರೂ ಅದಕ್ಕೆ ಉತ್ತರ ಸಿಕ್ಕಿದೆ.
ನರ್ತನ್ ಮುಂದಿನ ಚಿತ್ರಕ್ಕೆ ಹೀರೋ ಬೇರೆ ಯಾರೂ ಅಲ್ಲ ಮಾಸ್ಟರ್ ಪೀಸ್ ಯಶ್. ಈ ಹೊತ್ತಿನಲ್ಲಿ ನರ್ತನ್ ಜೊತೆ ನಿರ್ಮಾಪಕ ಜಯಣ್ಣ ಮತ್ತೊಂದು ಸಿನಿಮಾ ಮಾಡಲು ಉತ್ಸುಕರಾಗಿದ್ದಾರೆ. ಆ ಚಿತ್ರಕ್ಕೆ ಯಶ್ ನಾಯಕನಾಗುವ ಎಲ್ಲಾ ಲಕ್ಷಣಗಳೂ ಕಾಣುತ್ತಿವೆ. ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆದಿದ್ದು, ಯಶ್ರಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. ನರ್ತನ್ ಕತೆ ರೆಡಿ ಮಾಡುತ್ತಿದ್ದಾರೆ ಎನ್ನಲಾಗಿದೆ.
ನರ್ತನ್ಗೆ ‘ಮಾಸ್ಟರ್ಪೀಸ್’ ಚಿತ್ರದಲ್ಲಿ ಯಶ್ ಜೊತೆ ಕೆಲಸ ಮಾಡಿದ್ದರು. ನರ್ತನ್ ಕೆಲಸ ಯಶ್ ಮೆಚ್ಚಿಕೊಂಡಿದ್ದರು. ಹೀಗಾಗಿ ಈ ಸ್ನೇಹ ಕೆಲಸ ಮಾಡುವ ಸಾಧ್ಯತೆ ಇದ್ದು, ಅಲ್ಲದೇ ಜಯಣ್ಣ ಮತ್ತು ಯಶ್ ಬಾಂಧವ್ಯವೂ ಚೆನ್ನಾಗಿರುವುದರಿಂದ ನರ್ತನ್ ನಿರ್ದೇಶನದಲ್ಲಿ ಯಶ್ ಮುಂದಿನ ಚಿತ್ರ ಸೆಟ್ಟೇರುವ ಲಕ್ಷಣ ಕಾಣುತ್ತಿದೆ.
