ಬೆಂಗಳೂರು (ಆ. 04):  ಯಾರಿಗುಂಟು ಯಾರಿಗಿಲ್ಲ ಶೋ ಯಾರಿಗೆ ನೆನಪಿಲ್ಲ ಹೇಳಿ? ಈಗ ಇದೇ ಶೋ ಮತ್ತೊಮ್ಮೆ ಹೊಸ ರೂಪದಲ್ಲಿ ಶುರುವಾಗಲಿದೆ. 

ಜೀ ಕನ್ನಡ ವಾಹಿನಿಯಲ್ಲಿ ಇಂದಿನಿಂದ ಯಾರಿಗುಂಟು ಯಾರಿಗಿಲ್ಲ ಶೋ ಆರಂಭವಾಗಲಿದೆ. ಪ್ರತಿ ಶನಿವಾರ, ಭಾನುವಾರ ಸಂಜೆ 6. 30 ಕ್ಕೆ ಪ್ರಸಾರವಾಗಲಿದೆ. ಪ್ರತಿ ಸಂಚಿಕೆಯಲ್ಲೂ ಆರು ಖ್ಯಾತ ತಾರೆಯರು, ನಾಲ್ಕು ವಿಶಿಷ್ಟ ಸುತ್ತುಗಳು, ಒಂದೊಂದು ಸುತ್ತಿನಲ್ಲೂ ಸಖತ್ ಮನರಂಜನೆ ಈ ಶೋನ ವಿಶೇಷತೆ. 

ಪಂಚಿಂಗ್ ಡೈಲಾಗ್ ಮೂಲಕ ಖ್ಯಾತರಾಗಿರುವ ಕಾಮಿಡಿ ಕಿಲಾಡಿ ಸೀಸನ್ 2 ಖ್ಯಾತಿಯ ಅಪ್ಪಣ್ಣ ಹಾಗೂ ಸೂರಜ್ ಈ ಶೋ ನಿರೂಪಣೆ ಮಾಡಲಿದ್ದಾರೆ.