ಈಕೆ ಅಂತಿಂಥ ನಟಿ ಅಲ್ಲ. ಮಹಿಳಾ ಸಂಘದ ಹಣಕ್ಕಾಗಿ ಕಾರ್ಯಕರ್ತನ ಮೇಲೆಯೇ ಹಲ್ಲೆ ಮಾಡಿದ್ದಾರೆ. ಮಾಡಿದ್ದಾರೆ ಎನ್ನುವುದಕ್ಕಿಂತ ಮಾಡಿಸಿದ್ದಾರೆ. ಸೌಂದರ್ಯದ ದುಷ್ಟ ಮುಖಕ್ಕೆ ಕಾರ್ಯಕರ್ತ ಬೆಚ್ಚಿ ಬಿದ್ದಿದ್ದಾನೆ.

ಬೆಂಗಳೂರು[ಸೆ.13]  ಮಹಿಳಾ ಸಂಘದ ಹಣಕ್ಕಾಗಿ ಚಿತ್ರನಟಿ ಕಾರ್ಯಕರ್ತರೊಬ್ಬರ ಮೇಲೆ ಹಲ್ಲೆ ಮಾಡಿದ್ದು ಹಣ ಮತ್ತು ಕಾರು ಸುಲಿಗೆ ಮಾಡಿದ್ದಾರೆ. ಆದಿಶಕ್ತಿ ಮಹಿಳಾ ಸಂಘದ ಕಾರ್ಯಕರ್ತರಿಂದ ರಘು ಎಂಬುವರ ಮೇಲೆ ಹಲ್ಲೆ ನಡೆಸಿದ ಚಿತ್ರ ನಟಿ ಸುಲಿಗೆ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಚಿತ್ರನಟಿ ಸುಷ್ಮಿತಾ ಎಂಬಾಕೆ ತನ್ನ ಸಹಚರರೊಂದಿಗೆ ಹಲ್ಲೆ ನಡೆಸಿದ್ದಾರೆ ಎಂದು ದೂರು ದಾಖಲಾಗಿದೆ. ರಘು ಒಬ್ಬನೇ ಹಣ ಮಾಡುತ್ತಿದ್ದಾನೆ ಎಂದು ಆರೋಪಿಸಿ ಹಲ್ಲೆ ನಡೆಸಿ ಕಾರು , ಹಣ ಲ್ಯಾಪ್ ಟ್ಯಾಪ್ ದೋಚಲಾಗಿದೆ ಎಂದು ಹೇಳಲಾಗಿದೆ.

ತನ್ನ ಆರು ಜನ ಸಹಚರರೊಂದಿಗೆ ರಸ್ತೆಯಲ್ಲಿ ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ ಎಂದು ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.