Asianet Suvarna News Asianet Suvarna News

ಬಿಗ್‌ಬಾಸ್‌ ಮನೆಯೊಳಗೆ ರಕ್ಷಿತಾ ಪ್ರೇಮ್ ಹೋದರೆ ಏನಾಗುತ್ತದೆ?

ಬಿಗ್ ಬಾಸ್ ಮನೆಗೆ ವಿಲನ್ ತಂಡ ಎಂಟ್ರಿ ಕೊಟ್ಟು ಮಸ್ತಿ ಮಾಡಿ ಹೊರಕ್ಕೆ ಬಂದಿದೆ. ಹೊರಕ್ಕೆ ಬಂದ ಮೇಲೆ ಸುದೀಪ್ ಕೇಳಿದ ಪ್ರಶ್ನೆಗಳಿಗೆ ನಿರ್ದೇಶಕ ಪ್ರೇಮ್ ಮತ್ತು ಶಿವಣ್ಣ ಕೊಟ್ಟ ಉತ್ತರಗಳು ಸಖತ್ ಮನರಂಜೆ ನೀಡಿದವು.  ಪ್ರೇಮ್ ಪತ್ನಿ ರಕ್ಷಿತಾ ಅವರನ್ನು ಬಿಗ್ ಬಾಸ್ ಮನೆಯೊಳಗೆ ಬಿಟ್ಟರೆ ಏನಾಗುತ್ತಿತ್ತು ಎಂಬುದಕ್ಕೆ ಪ್ರೇಮ್ ಅವರೇ ಉತ್ತರ ಕೊಟ್ಟಿದ್ದಾರೆ.

Will Rakshita Prem enters bigg boss kannada season 6 what happens
Author
Bengaluru, First Published Oct 29, 2018, 8:05 PM IST
  • Facebook
  • Twitter
  • Whatsapp

ಬಿಗ್ ಬಾಸ್ ಕನ್ನಡ ಸೀಸನ್ 6 ಒಂದು ವಾರ ಮುಗಿಸಿದೆ. ಇತ್ತ ಉತ್ತಮ ಪ್ರದರ್ಶನ ಕಾಣುತ್ತಿರುವ ವಿಲನ್ ಚಿತ್ರ ತಂಡ ತಮ್ಮ ಸಂಭ್ರಮವನ್ನು ಬಿಗ್ ಬಾಸ್ ವೇದಿಕೆಯಲ್ಲಿ ಹಂಚಿಕೊಂಡಿದೆ. ಬಿಗ್ ಬಾಸ್ ವೇದಿಕೆಯಲ್ಲೇ 2 ವರ್ಷದ ಹಿಂದೆ ಆರಂಭವಾಗಿದ್ದ ಪ್ರಾಜೆಕ್ಟ್ ವೊಂದು ವಿಲನ್ ರೂಪದಲ್ಲಿ ಇಡೀ ದಕ್ಷಿಣ ಭಾರತ ಮಾತನಾಡುವಂತೆ ಮಾಡಿದೆ.

ಮನೆಯಲ್ಲಿ ವಿಲನ್ ಹವಾ, ಇವರನ್ನು ಕಂಡ್ರೆ ಶಿವಣ್ಣಗೆ ಭಯ!

ಬಿಗ್ ಬಾಸ್ ಮನೆಯೊಳಗೆ ಹೋಗಿ ಬಂದ ಶಿವರಾಜ್ ಕುಮಾರ್ ಮತ್ತು ಪ್ರೇಮ್ ರನ್ನು ಅಭಿಪ್ರಾಯ ಹಂಚಿಕೊಳ್ಳಲು ಸುದೀಪ್ ಕೇಳಿದರು.  ನಂತರ ಪ್ರಶ್ನೆ ಕೇಳುತ್ತಾ ರಕ್ಷಿತಾ ಅವರನ್ನು ಮನೆಯೊಳಗೆ ಬಿಟ್ಟರೆ ಏನಾಗುತ್ತದೆ? ಎಂದು ಪ್ರೇಮ್ ಬಳಿ ಕೇಳಿದರು. ಇದಕ್ಕೆ ಪ್ರೇಮ್ ಕೊಟ್ಟ ಉತ್ತರ ಸಖತ್ತಾಗಿತ್ತು. ‘ರಕ್ಷಿತಾ ಮನೆಯೊಳಗೆ ಹೋದರೆ ಮುಗೀತು ಕತೆ, ಇರೋ ಬರೋ ಕ್ಯಾಮರಾಗಳನ್ನೆಲ್ಲಾ ಆಕೆ ಒಡೆದು ಹಾಕುತ್ತಾರೆ' ಎಂದರು.

 

Follow Us:
Download App:
  • android
  • ios