'ನಾನು ಯಾವಾಗಲು ಇದನ್ನೆಲ್ಲ ಎದುರಿಸಲು ಸಿದ್ಧವಾಗಿದ್ದು ಪುಟಿದೇಳುವಂತ ಛಾತಿ ನನ್ನದು' ಎಂದ ನಟಿ ನಾನು ಮಾನಸಿಕ ಹಿಂಸೆಗೊಳಗಾದಾಗ ಪ್ರೋತ್ಸಾಹ ನೀಡಿ ಧೈರ್ಯ ತುಂಬಿದ ಎಲ್ಲರಿಗೂ ಧನ್ಯವಾದಗಳು' ಎಂದು ಇನ್ಸ್ಟಾಗ್ರಾಮ್'ನಲ್ಲಿ ಬರೆದುಕೊಂಡಿದ್ದಾರೆ.

ತಿರುವನಂತಪುರಂ(ಫೆ.28): ಏಳು ಮಂದಿ ರಾಕ್ಷಸರಿಂದ ಲೈಂಗಿಕ ಕಿರುಕುಳಕ್ಕೊಳಗಾದ ಖ್ಯಾತ ಮಲಯಾಳಿ ನಟಿ 10 ದಿನದ ನಂತರ ಮೊದಲ ಬಾರಿಗೆ ತಮ್ಮ ಮನದ ಮಾತನ್ನು ಸಾಮಾಜಿಕ ಮಾಧ್ಯಮದಲ್ಲಿ ತೋರ್ಪಡಿಸಿಕೊಂಡಿದ್ದಾರೆ.

ಅವರು ಹೇಳಿಕೊಂಡ ಮಾತುಗಳು ಹೀಗಿದೆ ನೋಡಿ 'ಜೀವನ ಕೆಲವು ಬಾರಿ ನನ್ನನ್ನು ಕೆಳಗೆ ಬೀಳಿಸಿತ್ತು, ನಾನು ನೋಡದಿದ್ದದ್ದನ್ನು ಈ ಘಟನೆಗಳು ನನಗೆ ತೋರಿಸಿತು. ಇದರಿಂದ ನನಗೆ ದುಃಖದ ಹಾಗೂ ಸೋಲಿನ ಅನುಭವ ಕೂಡ ಉಂಟಾಯಿತು. ಆದರೆ ಒಂದು ವಿಷಯವನ್ನು ಖಂಡಿತಾ ಹೇಳ ಬಯಸುತ್ತೇನೆ ಅದೇನಂದರೆ 'ನಾನು ಯಾವಾಗಲು ಇದನ್ನೆಲ್ಲ ಎದುರಿಸಲು ಸಿದ್ಧವಾಗಿದ್ದು ಪುಟಿದೇಳುವಂತ ಛಾತಿ ನನ್ನದು' ಎಂದ ನಟಿ ನಾನು ಮಾನಸಿಕ ಹಿಂಸೆಗೊಳಗಾದಾಗ ಪ್ರೋತ್ಸಾಹ ನೀಡಿ ಧೈರ್ಯ ತುಂಬಿದ ಎಲ್ಲರಿಗೂ ಧನ್ಯವಾದಗಳು' ಎಂದು ಇನ್ಸ್ಟಾಗ್ರಾಮ್'ನಲ್ಲಿ ಬರೆದುಕೊಂಡಿದ್ದಾರೆ.

30 ವರ್ಷದ ಮಲಯಾಳಿ ನಟಿ ವಿವಿಧ ಭಾಷೆಗಳಲ್ಲಿ 75ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದು, ಫೆ.17 ರಂದು ತ್ರಿಶೂರ್'ನಿಂದ ಕೊಚ್ಚಿಗೆ ತೆರಳುವಾಗ 7 ಮಂದಿ ದುಷ್ಕರ್ಮಿಗಳು ಈಕೆಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯವೆಸಗಿದ್ದರು. ಈ ಅನ್ಯಾಯದ ವಿರುದ್ಧ ಇಡೀ ಭಾರತೀಯ ಚಿತ್ರರಂಗವೇ ನಟಿಯ ಬೆಂಬಲಕ್ಕೆ ನಿಂತು ಈಕೆಗೆ ಧೈರ್ಯ ತುಂಬಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪ್ರಮುಖ ಆರೋಪಿ ಪಲ್ಸರ್ ಸುನಿ ಸೇರಿದಂತೆ 6 ಮಂದಿಯನ್ನು ಬಂಧಿಸಲಾಗಿದೆ.

ನಟಿ ಲೈಂಗಿಕ ದೌರ್ಜನ್ಯಕ್ಕೊಳಗಾದ ನಂತರ ಮೊನ್ನೆ ಶೂಟಿಂಗ್'ಗೆ ಕೂಡ ಹಾಜರಾಗಿ ನೂತನ ಚಿತ್ರದ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.