ಯಾರು ಹಿತವರು ನಿನಗೆ ಈ ಮೂವರೊಳಗೆ?

First Published 27, Jan 2018, 11:28 PM IST
Who will win Bigg boss kannada
Highlights

ಕನ್ನಡ ಬಿಗ್ ಬಾಸ್ ಕಡೆಯ ಹಂತಕ್ಕೆ ತಲುಪಿದ್ದು, ಯಾರಿಗೆ ಗೆಲವು ಎನ್ನುವುದಿನ್ನೂ ಸ್ಪಷ್ಟವಾಗಿಲ್ಲ. 105ನೇ ದಿನವೇ ವಿಜಯಿ ಹೆಸರು ಘೋಷಿಸಬಹುದೆಂಬ ನಿರೀಕ್ಷೆಯಲ್ಲಿದ್ದ ಕಡೆಯ ಮೂವರು ಸ್ಪರ್ಧಿಗಳಿಗೆ ಆಶ್ಚರ್ಯ ಎಂಬಂತೆ ಮತ್ತೊಂದು ದಿನ ಬಿಗ್ ಬಾಸ್ ಮನೆಯಲ್ಲಿಯೇ ಕಾಲ ಕಳೆಯುವ ಅವಕಾಶ ಸಿಕ್ಕಿದೆ.

ಕನ್ನಡ ಬಿಗ್ ಬಾಸ್ ಕಡೆಯ ಹಂತಕ್ಕೆ ತಲುಪಿದ್ದು, ಯಾರಿಗೆ ಗೆಲವು ಎನ್ನುವುದಿನ್ನೂ ಸ್ಪಷ್ಟವಾಗಿಲ್ಲ. 105ನೇ ದಿನವೇ ವಿಜಯಿ ಹೆಸರು ಘೋಷಿಸಬಹುದೆಂಬ ನಿರೀಕ್ಷೆಯಲ್ಲಿದ್ದ ಕಡೆಯ ಮೂವರು ಸ್ಪರ್ಧಿಗಳಿಗೆ ಆಶ್ಚರ್ಯ ಎಂಬಂತೆ ಮತ್ತೊಂದು ದಿನ ಬಿಗ್ ಬಾಸ್ ಮನೆಯಲ್ಲಿಯೇ ಕಾಲ ಕಳೆಯುವ ಅವಕಾಶ ಸಿಕ್ಕಿದೆ.

ಮಧುರ ಕಂಠದಿಂದ ಬಿಗ್ ಬಾಸ್ ಮನೆಯಲ್ಲಿ ಎಲ್ಲರನ್ನೂ ರಂಜಿಸುತ್ತಿದ್ದ ಶೃತಿ ಪ್ರಕಾಶ್ ಮೊದಲು ಔಟ್ ಆಗಿ, ಮನೆಯಿಂದ ಹೊರ ಬಂದರು. ದಿವಾಕರ್ ಹಾಗೂ ನಿವೇದಿತಾ ಗೌಡ ಇಬ್ಬರಲ್ಲಿ ಯಾರು ಹೊರ ಬರುತ್ತಾರೆಂಬ ಕುತೂಹಲ ಪ್ರೇಕ್ಷಕರಲ್ಲಿತ್ತು. ಕಂಗ್ಲಿಷ್‌ ಶೈಲಿಯ ಮಾತಲ್ಲದೇ, ಮುದ್ದು ಮುಖ ಹಾಗೂ ತಮ್ಮ ಮುಗ್ಥತೆಯೊಂದಿಗೆ, ಮನೆಯಲ್ಲಿ ಪ್ರಬುದ್ಧತೆಯನ್ನು ತೋರಿದ ನಿವೇದಿತಾ ಗೌಡ ಫೈನಲ್ಸ್‌ಗೆ ಬರಬಹುದೆಂಬ ನಿರೀಕ್ಷೆ ಅನೇಕರಲ್ಲಿತ್ತು. ಆದರೆ, ಅವರೂ ಮನೆಯಿಂದ ಹೊರ ಬಂದಿದ್ದು, ಗೆಲವು ಯಾರಿಗೆ ಎಂಬ ಕುತೂಹಲ ಹೆಚ್ಚಿಸಿದೆ.

ಜೆಕೆ ಹಾಗೂ ಚಂದನ್ ಶೆಟ್ಟಿ ನಡುವೆ ಪ್ರಬಲ ಸ್ಪರ್ಧೆ ಇದ್ದು, ಜಯಲಕ್ಷ್ಮಿ ಯಾರಿಗೆ ಒಲಿಯುತ್ತಾಳೆಂಬುದಕ್ಕೆ ತಿಳಿಯಲು ಇನ್ನೊಂದು ದಿನ ಕಾಯಲೇ ಬೇಕು. ನಡೆ, ನುಡಿಯಿಂದ ಬಿಗ್ ಬಾಸ್ 5ರ ಸ್ಪರ್ಧೆಯಲ್ಲಿ ಜೆಕೆ ಎಲ್ಲರ ಮನೆ ಗೆದ್ದರೆ, ತಮ್ಮ ಪ್ರತಿಭೆಯಿಂದ ಚಂದನ್ ಶೆಟ್ಟಿ ಎಲ್ಲರಿಂದಲೂ ಸೈ ಎನಿಸಿಕೊಂಡಿದ್ದಾರೆ. 

'ಬೆಂಗಳೂರು ಬೆಂಗಳೂರು, ನಿಮಗೆ ಇಷ್ಟವಿಲ್ವಾ ಬಿಟ್ಟು ಹೋಯ್ತಾ ಇರಿ...' ಎಂದು ಪಾಪ್ ಸಾಂಗ್ ಹಾಡುತ್ತಲೇ, ಜನರಲ್ಲಿ ಕನ್ನಡಾಭಿಮಾನ ಹುಟ್ಟಿಸಿದ ಚಂದನ್ ಗೆಲ್ಲುತ್ತಾರೆಂಬುವುದು ಹಲವರ ಅಭಿಪ್ರಾಯ. 'ಬಾಲಿವುಡ್ ಎಂಬ ಸಾಗರದಲ್ಲಿ ನಾನು ಈಜಿ ಬಂದಿದ್ದೇನೆ..' ಎಂದು ಹೇಳಿ, ಎಲ್ಲಿಯೋ ಕನ್ನಡಿಗರ ಕೋಪಕ್ಕೆ ಜೆಕೆ ಗುರಿಯಾಗಿದ್ದು, ಕನ್ನಡಿಗರಲ್ಲಿ ಚಂದನ್ ಶೆಟ್ಟಿ ಕಡೆಗೆ ಹೆಚ್ಚು ಒಲವಿದೆ, ಎಂಬ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 

loader