ಇನ್ನೆರಡು ದಿನಗಳಲ್ಲಿ ಪ್ರೇಮಿಗಳ ದಿನ ಬರಲಿದೆ. ಈ ಹೊತ್ತಲ್ಲಿ ಇಂಟರ್ನೆಟ್‌ನಲ್ಲಿ ಪ್ರಿಯಾ ಪ್ರಕಾಶ್ ವಾರಿಯರ್ ಎಂಬ 18ರ ಯುವತಿ ನಟಿಸಿದ ಮಲಯಾಳಂ ಚಿತ್ರ 'ಉರು ಅದಾರ್ ಲವ್'ನ 'ಮಾಣಿಕ್ಯ ಮಲರಯಾ ಪೂವಿ'ಯದ್ದೆ ಹವಾ. ಈ ವೀಡಿಯೋ ಪೋಸ್ಟ್ ಆದ ಕೆಲವೇ ಗಂಟೆಗಳಲ್ಲಿ ವೈರಲ್ ಆಗಿದ್ದು, ಪ್ರಿಯಾ ಪ್ರಕಾಶ್ ವಾರಿಯರ್ ಎಲ್ಲರ ಮನ ಗೆದ್ದು, ಮನೆಯ ಮಾತಾಗಿದ್ದಾಳೆ. ಪಡ್ಡೆ ಹುಡುಗರಂತೂ ಈಕೆಗೆ ಫುಲ್ ಫಿದಾ.
ಮುಂಬಯಿ: ಇನ್ನೆರಡು ದಿನಗಳಲ್ಲಿ ಪ್ರೇಮಿಗಳ ದಿನ ಬರಲಿದೆ. ಈ ಹೊತ್ತಲ್ಲಿ ಇಂಟರ್ನೆಟ್ನಲ್ಲಿ ಪ್ರಿಯಾ ಪ್ರಕಾಶ್ ವಾರಿಯರ್ ಎಂಬ 18ರ ಯುವತಿ ನಟಿಸಿದ ಮಲಯಾಳಂ ಚಿತ್ರ 'ಉರು ಅದಾರ್ ಲವ್'ನ 'ಮಾಣಿಕ್ಯ ಮಲರಯಾ ಪೂವಿ'ಯದ್ದೆ ಹವಾ. ಈ ವೀಡಿಯೋ ಪೋಸ್ಟ್ ಆದ ಕೆಲವೇ ಗಂಟೆಗಳಲ್ಲಿ ವೈರಲ್ ಆಗಿದ್ದು, ಪ್ರಿಯಾ ಪ್ರಕಾಶ್ ವಾರಿಯರ್ ಎಲ್ಲರ ಮನ ಗೆದ್ದು, ಮನೆಯ ಮಾತಾಗಿದ್ದಾಳೆ. ಪಡ್ಡೆ ಹುಡುಗರಂತೂ ಈಕೆಗೆ ಫುಲ್ ಫಿದಾ.

ಹೈ ಸ್ಕೂಲ್ ಜೀವನದ ಕ್ರಷ್ಗಳನ್ನು ಮೆಲಕು ಹಾಕುವಂತೆ ಮಾಡುವ ಈ ಹಾಡು, ಎಲ್ಲರನ್ನೂ ಒಮ್ಮೆ ತಮ್ಮ ಪ್ರೌಢ ಜೀವನವನ್ನು ನೆನಪಿಸುವಂತೆ ಮಾಡುವುದು ಸುಳ್ಳಲ್ಲ. ಈ ಚಿತ್ರದ ಮೂಲಕ ಪ್ರಿಯಾ ಚಿತ್ರೋದ್ಯಮಕ್ಕೆ ಕಾಲಿಡುತ್ತಿದ್ದು, ಒಂದು ಹಾಡಿನ ಮೂಲಕವೇ ಫುಲ್ ಫೇಮಸ್ ಆಗಿ ಬಿಟ್ಟಿದ್ದಾಳೆ.
ಕಣ್ಣು, ಉಬ್ಬಿನಿಂದಲೇ ತನ್ನೆಲ್ಲಾ ಭಾವನೆಗಳನ್ನು ವ್ಯಕ್ತಪಡಿಸುವ ಪ್ರಿಯಾ ಆಂಗಿಕ ಭಾಷೆ, ಎಂಥವರನ್ನ ಮನವನ್ನಾದರೂ ಗೆಲ್ಲುವಲ್ಲಿ ಯಶಸ್ವಿಯಾಗುವುದು ಸುಳ್ಳಲ್ಲ. ತೆರೆ ಮೇಲೆ ಈಕೆ 10 ಸೆಕೆಂಡ್ಗಳಲ್ಲಿ ತೋರಿದ 8 ವಿಭಿನ್ನ ಭಾವಗಳು ಅಮೋಘ, ಅನನ್ಯ.
ಈ ಹಾಡೂ, ಈಕೆಯ ಆಂಗಿಕ ಭಾಷೆ, ಅಭಿನಯ ಎಲ್ಲವೂ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದ್ದು, ಟ್ರಾಲ್ ಆಗುತ್ತಿದೆ. ರಾತ್ರಿ ಬೆಳಗಾಗೋದ್ರಲ್ಲಿ ಈ ನಟಿಯ ಬಗ್ಗೆ ಸರ್ಚ್ ಮಾಡೋದು ಹೆಚ್ಚಾಗುತ್ತಿದೆ. ಹಾಡು ಹೇಳುವ, ನೃತ್ಯ ಮಾಡುವ ಈಕೆ ರೂಪದರ್ಶಿಯೂ ಹೌದು. ಇನ್ನೂ ಬಿ.ಕಾಂ. ಓದುತ್ತಿರುವ ಈ ಬೆಡಗಿ ಬಗ್ಗೆ ಟ್ರಾಲ್ ಆಗುತ್ತಿರುವುದು ಹೀಗೆ.
#PriyaPrakashVarrier
— Akshay Batra (@Travellerakki) February 11, 2018
This is epic pic.twitter.com/lxiLAgIYpP
