ಸಲ್ಮಾನ್ ಖಾನ್ ಭೇಟಿಯಾದ ‘ಡ್ಯಾನ್ಸಿಂಗ್ ಅಂಕಲ್’ಮುಂಬೈನ ‘ದಸ್ ಕಾ ದಮ್’ ಸೆಟ್ ನಲ್ಲಿ ಭೇಟಿಸಂಜೀವ್ ಶ್ರೀವಾಸ್ತವ್ ಡ್ಯಾನ್ಸ್ ಸ್ಟೆಪ್ ಮೆಚ್ಚಿದ ಸಲ್ಲುಸಲ್ಮಾನ್ ಖಾನ್ ಗೋವಿಂದ ಅವರ ಅಭಿಮಾನಿ 

ಮುಂಬೈ(ಜೂ.9): ಡ್ಯಾನ್ಸಿಂಗ್ ಅಂಕಲ್ ಎಂದೇ ದೇಶದಲ್ಲಿ ಮನೆಮಾತಾಗಿರುವ ಮಧ್ಯಪ್ರದೇಶದ ಪ್ರೋ. ಸಂಜೀವ್ ಶ್ರೀವಾಸ್ತವ್, ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಕುಟುಂಬ ಸಮೇತ ಭೇಟಿಯಾಗಿದ್ದಾರೆ.

ಸಲ್ಮಾನ್ ನಿರೂಪಕರಾಗಿರುವ ‘ದಸ್ ಕಾ ದಮ್’ ಕಾರ್ಯಕ್ರಮದ ಸೆಟ್‌ನಲ್ಲಿ ಸಲ್ಮಾನ್ ಅವರನ್ನು ಶ್ರೀವಾಸ್ತವ್ ಭೇಟಿ ಮಾಡಿದರು. ಶ್ರೀವಾಸ್ತವ್ ಅವರನ್ನು ತುಂಬ ಆತ್ಮೀಯವಾಗಿ ಬರಮಾಡಿಕೊಂಡ ಸಲ್ಮಾನ್, ಅವರ ಡ್ಯಾನ್ಸ್ ಶೈಲಿಯನ್ನು ಕೊಂಡಾಡಿದ್ದಾರೆ. ಸಲ್ಮಾನ್ ಖುದ್ದು ಗೋವಿಂದ ಅವರ ಅಭಿಮಾನಿಯಾಗಿದ್ದು, ತಮ್ಮ ಕಾಲದ ಅತ್ಯಂತ ಶ್ರೇಷ್ಠ ನಟ ಗೋವಿಂದ ಎಂದು ಈ ಹಿಂದೆ ಸಲ್ಮಾನ್ ಖಾನ್ ಹೇಳಿದ್ದರು.

Scroll to load tweet…

ಮದುವೆ ಸಮಾರಂಭವೊಂದರಲ್ಲಿ ಗೋವಿಂದ ಅವರ ‘ಕುದಗರ್ಜ್’ ಚಿತ್ರದ ‘ಆಪ್ ಕೆ ಆ ಜಾನೆ ಸೇ..’ ಹಾಡಿಗೆ ಸ್ಟೆಪ್ ಹಾಕಿದ್ದ ಸಂಜೀವ್ ಶ್ರೀವಾಸ್ತವ್ ರಾತ್ರೋರಾತ್ರಿ ಪ್ರಖ್ಯಾತಿ ಪಡೆದಿದ್ದರು. ಖುದ್ದು ಗೋವಿಂದ ಸಂಜೀವ್ ಅವರ ಡ್ಯಾನ್ಸ್ ಸ್ಟೆಪ್ ನ್ನು ಹೊಗಳಿದ್ದರು.