ನಾಗ ಚೈತನ್ಯ ನಟನೆ ಇಷ್ಟವಾಗದಿದ್ದರೆ ಸಮಂತಾ ಏನು ಮಾಡ್ತಾರೆ?

what Samantha Akkineni does if she dislikes Naga Chaitanya’s role?
Highlights

ನಾಗಚೈತನ್ಯ ನಟನೆ ಇಷ್ಟವಾಗದಿದ್ದರೆ ಸಮಂತಾ ಏನು ಮಾಡ್ತಾರೆ?

ನವಜೋಡಿ ದಾಂಪತ್ಯ ಜೀವನ ಆನಂದಿಸುತ್ತಿರುವ ಪರಿ ಹೇಗಿದೆ?

ದಾಂಪತ್ಯ ಜೀವನದ ಜವಾಬ್ದಾರಿ ಹೊರಲು ನಾಗಚೈತನ್ಯ ಸಿದ್ದ
 

ಹೈದರಾಬಾದ್(ಜೂ.17): ಟಾಲಿವುಡ್ ನಟಿ ಸಮಂತಾ ಮತ್ತು ನಟ ನಾಗಚೈತನ್ಯ ತಮ್ಮ ದಾಂಪತ್ಯ ಜೀವನವನ್ನು ಆನಂದಿಸುತ್ತಿದ್ದಾರೆ. ಅದರಲ್ಲೂ ಮದುವೆಯಾದ ಬಳಿಕ ಬಿಡುಗಡೆಗೊಂಡ ರಂಗಸ್ಥಲಂ ಭಾರೀ ಹಿಟ್ ಆದ ಮೇಲೆ ಸಮಂತಾ ಖುಷಿ ಇಮ್ಮಡಿಗೊಳಿಸಿದೆ.

ಈ ಮಧ್ಯೆ ತಮ್ಮ ದಾಂಪತ್ಯದ ಜೀವನದ ಕುರಿತು ನಟ ನಾಗಚೈತನ್ಯ  ಹಲವು ರೋಮಾಂಚನಕಾರಿ ವಿಷಯಗಳನ್ನು ಬಿಚ್ಚಿಟ್ಟಿದ್ದಾರೆ. ಬ್ಯಾಚ್ಯೂಲರ್ ಲೈಫ್‌ನ್ನು ಚೆನ್ನಾಗಿಯೇ ಎಂಜಾಯ್ ಮಾಡಿರುವ ನಾನು ಇದೀಗ ದಾಂಪತ್ಯ ಜೀವನದ ಜವಾಬ್ದಾರಿಗಳನ್ನು ಕಲಿಯುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.

ಈ ವಿಚಾರದಲ್ಲಿ ಸಮಂತಾ ತಮಗೆ ತುಂಬ ಸಹಾಯ ಮಾಡುತ್ತಿದ್ದು, ಭವಿಷ್ಯದ ಕುರಿತು ತಮ್ಮದೇ ಯೋಜನೆಗಳನ್ನು ಹಾಕಿಕೊಂಡಿರುವುದಾಗಿ ನಾಗಚೈತನ್ಯ ಹೇಳಿದ್ದಾರೆ. ದಾಂಪತ್ಯದ ಜವಾಬ್ದಾರಿಗಳನ್ನು ಹೊರಲು ನಾನೀಗ ಸಂಪೂರ್ಣ ಸಿದ್ದನಾಗಿದ್ದೇನೆ ಎಂದೂ ಅವರು ಹೇಳಿದ್ದಾರೆ.

ಈ ಮಧ್ಯೆ ತಾವು ನಟಿಸಿದ ಚಿತ್ರಗಳ ಕುರಿತು ಸಮಂತಾ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದನ್ನೂ ಬಿಚ್ಚಿಟ್ಟಿರುವ ನಾಗಚೈತನ್ಯ, ಚಿತ್ರವೊಂದರಲ್ಲಿ ತಮ್ಮ ನಟನೆ ಚೆನ್ನಾಗಿದ್ದರೆ ಸಮಂತಾ ತಮ್ಮನ್ನು ಹೊಗಳಿ ಅಟ್ಟಕ್ಕೇರಿಸುತ್ತಾಳೆ. ಆದರೆ ನನ್ನ ನಟನೆ ಆಕೆಗೆ ಇಷ್ಟವಾಗಲಿಲ್ಲ ಎಂದಾರೆ ಅತ್ಯಂತ ಕಠೋರವಾಗಿ ವಿಮರ್ಶೆ ಮಾಡುತ್ತಾಳೆಂದು ಅವರು ಹೇಳಿದ್ದಾರೆ.

ಪತ್ನಿಯ ಈ ನೇರ ಸ್ವಭಾವ ತಮಗೆ ಭಾರೀ ಇಷ್ಟವಾಗಿದ್ದು, ನೈಜ ಗೆಳತಿಯಂತೆ ತಮ್ಮ ಕೆಲಸವನ್ನು ಆಕೆ ವಿಮರ್ಶೆ ಮಾಡುತ್ತಾಳೆಂದು ನಾಗಚೈತನ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  

loader