- ಗಣೇಶ್, ರಶ್ಮಿಕಾ ಅಭಿನಯದ ಚಮಕ್ ಚಿತ್ರ- ಸಿಂಪಲ್ ಸುನಿ ನಿರ್ದೇಶನದ ಚಿತ್ರಕ್ಕೆ ಮೆಚ್ಚುಗೆ- ಪ್ರೇಮವನ್ನು ನವಿರಾದ ಹಾಸ್ಯದ ಮೂಲಕ ಹೇಳೋ ಕಥೆ

ಸಿಂಪಲ್ ಸುನಿ ನಿರ್ದೇಶನದ 'ಚಮಕ್' ತೆರೆಗೆ ಬಂದಿದೆ. ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ನಟ ಗಣೇಶ್ ಹಾಗೂ ನಟಿ ರಶ್ಮಿಕಾ ಮಂದಣ್ಣ ಕೆಮಿಸ್ಟ್ರಿ ಸೊಗಸಾಗಿ ವರ್ಕ್‌ಔಟ್ ಆಗಿದೆ ಎಂದು ಜಾಲತಾಣಗಳಲ್ಲಿ ಚಿತ್ರವನ್ನು ವೀಕ್ಷಿಸಿದವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಿಂಪಲ್ ಕಥೆಯನ್ನು ಇಟ್ಟುಕೊಂಡು, ನವಿರಾದ ಹಾಸ್ಯದ ಮೂಲಕ ಗಂಭೀರ ಕಥೆಯನ್ನು ಪ್ರಸ್ತುತಪಡಿಸುವಲ್ಲಿ ಸುನಿ ಸಿದ್ಧಹಸ್ತರು. ಇದೇ ತಂತ್ರ ಈ ಚಿತ್ರದಲ್ಲಿಯೂ ಕೆಲಸ ಮಾಡಿದ್ದು, ಸಿನಿಮಾ ಪ್ರೇಕ್ಷಕರನ್ನು ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ, ಎನ್ನುವುದು ಅನೇಕರ ಅಭಿಪ್ರಾಯ.

Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…

ಫಸ್ಟ್ ನೈಟ್ ಟೀಸರ್ ಮೂಲಕವೇ ವೀಕ್ಷಕರಲ್ಲಿ ಅಪಾರ ಕುತೂಹಲ ಮೂಡಿಸಿದ ಚಮಕ್, ಪ್ರೇಕ್ಷಕರಿಗೆ ಚಮಕ್ ನೀಡುವುದು ಗ್ಯಾರಂಟಿ.

'ಕಿರಿಕ್ ಪಾರ್ಟಿ'ಯ ಪಾತ್ರಕ್ಕಿಂತ ವಿಭಿನ್ನ ಪಾತ್ರದಲ್ಲಿ ನಟಿಸಿರುವ ರಶ್ಮಿಕಾ, ಪಕ್ವ ಕಲಾವಿದೆಯಂತೆ ಅಭಿನಯಿಸಿದ್ದು, ವೀಕ್ಷಕರಿಂದ ಸೈ ಎನಿಸಿಕೊಳ್ಳುತ್ತಾರೆ. ಪ್ಲೇ ಬಾಯ್ ಡಾಕ್ಟರ್ ಆಗಿರೋ ಗಣೇಶ್ ಭಾವನಾತ್ಮಕ ಅಭಿನಯದಿಂದ ಎಲ್ಲರ ಹೃದಯ ಗೆಲ್ಲುತ್ತಾರೆ. 

ಮನಸ್ಸಿಗೆ ಮುದ ನೀಡೋ ಸಿಂಪಲ್ ಹಾಡುಗಳು, ಚಿತ್ರ ಮುಗಿದ ನಂತರವೂ ಗುನುಗುವಂತೆ ಮಾಡುತ್ತದೆ, ಎಂಬುವುದು ಚಿತ್ರ ವೀಕ್ಷಿಸಿದ ಪ್ರೇಕ್ಷಕರ ಅಭಿಪ್ರಾಯ.