ಒರು ಅದಾರ್ ಲವ್ ಚಿತ್ರದ ಹಾಡಿನ ಕಣ್'ಮಿಟುಕಿಸುವ ದೃಶ್ಯದ ಮೂಲಕ ಲಕ್ಷಾಂತರ ಪಡ್ಡೆ ಹುಡುಗರ ಹೃದಯ ಕದ್ದ ಚೋರಿ ಪ್ರಿಯಾ ಪ್ರಕಾಶ್ ವಾರಿಯರ್ ಮುಂದೇನು ಮಾಡುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇದ್ದೆ ಇದೆ. ತಮ್ಮ ಇನ್ಸ್ಟಾ'ಗ್ರಾಮ್ ಖಾತೆಯ ಮೂಲಕ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ಪ್ರಿಯಾ ಪ್ರಕಾಶ್ ಅವರ ಸಂಕ್ಷಿಪ್ತ ಭಾವಾನುವಾದ

'ಎಲ್ಲರಿಗೂ ನಮಸ್ಕಾರ, ನಾನು ನಟಿಸಿರುವ ಒರು ಅದಾರ್ ಚಿತ್ರದ ಹಾಡಿನ ಕಣ್'ಮಿಟುಕಿಸುವ ದೃಶ್ಯಕ್ಕೆ ನಿರೀಕ್ಷಿಸದಷ್ಟು ಅಪಾರ ಬೆಂಬಲ ನೀಡಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು. ನಿಜ ಹೇಳಬೇಕೆಂದರೆ ನಾನು ಆ ಚಿತ್ರದ ಸಣ್ಣ ಪಾತ್ರಕಷ್ಟೆ ಆಯ್ಕೆಯಾಗಿದ್ದೆ ಆದರೆ ಅಂತಿಮವಾಗಿ ಪ್ರಮುಖ ಪಾತ್ರವನ್ನು ನಿರ್ವಹಿಸಿದೆ. ನನಗೆ ನಟನೆ ಮಾಡುತ್ತೇನೆಂದು ಎಂದಿಗೂ ಅಂದುಕೊಂಡಿರಲಿಲ್ಲ. ನಿರ್ದೇಶಕ ಮರ್ ಲಾಲು ಅವರು ನಟಿಸಲು ಅವಕಾಶ ನೀಡಿದರು. ಕಣ್'ಮಿಟುಕಿಸುವ ದೃಶ್ಯ  ನಿರೀಕ್ಷಿಸದ ಮಟ್ಟದಲ್ಲಿ ಯಶಸ್ವಿಯಾಗಿರುವುದಕ್ಕೆ ನಿರ್ದೇಶಕರೆ ಕಾರಣ.  ಛಾಯಾಚಿತ್ರಗ್ರಾಹಕ ಸೀನು ಸಿದ್ಧಾರ್ಥ, ಸಂಗೀತ ನಿರ್ದೇಶಕ ಶಾನ್ ರೆಹಮಾನ್ ಒಳಗೊಂಡಂತೆ ಎಲ್ಲ ತಂತ್ರಜ್ಞರಿಗೂ ನಾನು ಆಭಾರಿಯಾಗಿದ್ದೇನೆ.

ಸಿನಿಮದಲ್ಲಿ ಹೊಸ ಮುಖಗಳನ್ನು ಸ್ವೀಕರಿಸುವುದಕ್ಕೆ ಈ ಚಿತ್ರವೇ ಜೀವಂತ ಉದಾಹರಣೆ. ಈ ಸಂದರ್ಭದಲ್ಲಿಯೇ  ನನಗೆ ಉದ್ಯಮದಿಂದ ಹಲವು ಅವಕಾಶಗಳು ಹರಿದುಬರುತ್ತಿದೆ. ಆದರೆ ಆಗಸ್ಟ್'ವರೆಗೂ ಒರು ಅದಾರ್ ಮುಗಿಯುವವರೆಗೂ ನಾನು ಯಾವುದೇ ಚಿತ್ರದಲ್ಲಿ ನಟಿಸಲು ಸಾಧ್ಯವಾಗುವುದಿಲ್ಲ. ಅದೇ ರೀತಿ ನಿರ್ದೇಶಕರು ಹೊಸ ಪ್ರತಿಭೆಗಳನ್ನು ಆಡಿಷನ್ ಮೂಲಕ ಬೆಳಗಿಕೆ ತರುವುದನ್ನು ಇಷ್ಟಪಡುತ್ತೇನೆ. ಎಲೆಮರೆ ಕಾಯಿಯಂತೆ ಹಲವು ಪ್ರತಿಭೆಗಳು ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ. ಮತ್ತೊಮ್ಮೆ ನನಗೆ ಬೆಂಬಲ ನೀಡಿರುವುದಕ್ಕೆ ಧನ್ಯವಾದಗಳು.       

 

 

Hi everyone, Thank you all for your immense support and encouragement that you have been giving me. I was actually selected to do a very small role in 'Oru Adaar Love' but ended up doing a prominent role in it. I was so new to the industry and had no clue about the acting. It was just my director Omar Lulu sir who made me act and the credit for the viral 'winking' & 'gun shoot' goes to him. I'm grateful to all my technicians including our DOP Sinu Sidharth, music director Shaan Rahman and co-artists too. It's so great to see people accepting new faces. 'Oru Adaar Love' is the living example. At the moment I'm getting a lot of offers from various industry. I would not be able to do any other films until August as we have not completed 'Oru Adaar Love' yet. I would just love to see the directors conducting auditions for new comers again. There are more hidden talents who wait to get a chance ❤ Once again thank you all for your love and support! ❤

A post shared by priya prakash varrier (@priya.p.varrier) on Feb 18, 2018 at 1:17am PST