ಬೇಬೋ ಮಗ ತೈಮೂರ್ ಅಲಿಖಾನ್ ನೋಡಿಕೊಳ್ಳುವ ಕೇರ್ ಟೇಕರ್ ವೇತನ ಕೇಳಿದ್ರೆ ಹೌಹಾರಿ ಬಿಡ್ತೀರಿ | ಮಗುವಿನ ಜೊತೆ ಜಾಸ್ತಿ ಸಮಯ ಕಳೆದರೆ ವೇತನವೂ ಹೆಚ್ಚಾಗುತ್ತದೆ
ನವದೆಹಲಿ (ಸೆ. 28): ಕರೀನಾ ಕಪೂರ್ ಹಾಗೂ ಸೈಫ್ ಅಲಿ ಖಾನ್ ಪುತ್ರ ತೈಮೂರ್ ಖಾನ್ ಬಾಲಿವುಡ್ ನ ಮುದ್ದಾದ ಮಗು. ತನ್ನ ತುಂಟಾಟ, ಮುದ್ಮುದ್ದಾದ ಮಾತುಗಳಿಂದ ಸದಾ ಸುದ್ದಿಯಲ್ಲಿರುತ್ತಾನೆ. ಈಗ ತೈನೂರ್ ಅಲಿ ಖಾನ್ ಮಾತ್ರವಲ್ಲ ಆತನ ಕೇರ್ ಟೇಕರ್ ಕೂಡಾ ಸುದ್ದಿಯಾಗಿದ್ದಾರೆ. ಹೌದಾ? ಅವರೇನು ಮಾಡಿದ್ರು ಅಂತ ಆಶ್ಚರ್ಯಗೊಳ್ಳಬೇಡಿ. ಅವರ ಸಂಬಳ ಕೇಳಿದ್ರೆ ನಿಮಗೆ ಆಶ್ಚರ್ಯವಾಗೋದು ಗ್ಯಾರಂಟಿ!

ತೈಮೂರ್ ನನ್ನು ನೋಡಿಕೊಳ್ಳುವ ಕೇರ್ ಟೇಕರ್ ಗೆ ತಿಂಗಳಿಗೆ 1. 5 ಲಕ್ಷ ವೇತನವಿದೆ. ಹೆಚ್ಚು ಅವಧಿ ಕೆಲಸ ಮಾಡಿದ್ರೆ ಇದು ಇನ್ನೂ ಹೆಚ್ಚಾಗುತ್ತದೆ. ಯಾವ ಕಾರ್ಪೋರೇಟ್ ಉದ್ಯೋಗಿಗೂ ಕಡಿಮೆ ಇಲ್ಲದಂತೆ ಸಂಬಳ ಪಡೆಯುತ್ತಾರೆ ಇವರು.

ಮಗುವಿನ ಜೊತೆ ಹೆಚ್ಚಿನ ಸಮಯ ಕಳೆದರೆ ಅದಕ್ಕೆ ಹೆಚ್ಚಿನ ದುಡ್ಡು ನೀಡಲಾಗುತ್ತದೆ. ಜೊತೆಗೆ ತೈಮೂರ್ ನನ್ನು ಎಲ್ಲಾದರೂ ಕರೆದುಕೊಂಡು ಹೋಗಬೇಕಾದರೆ ಕಾರು ನೀಡಲಾಗಿದೆ.

