ಶಿವರಾಜ್‌ ಕುಮಾರ್‌ ಅಭಿನಯದ ‘ಸವ್ಯಸಾಚಿ’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿ, ‘ಓಂ’ ಚಿತ್ರದೊಂದಿಗೆ ಯಶಸ್ಸಿನ ಓಂಕಾರ ಹಾಡಿ, ಸಾಲು ಸಾಲು ಸಿನಿಮಾಗಳಲ್ಲಿ ಅವಕಾಶ ಪಡೆದುಕೊಂಡ ಪ್ರೇಮಾ, 90ರ ದಶಕದಲ್ಲಿ ಸ್ಟಾರ್‌ ನಟಿ ಎಂದೆನಿಸಿಕೊಂಡ ಖ್ಯಾತಿ ಅವರದ್ದು. ಆನಂತರ ಮದುವೆ ಆಗಿ ಬಣ್ಣದ ಲೋಕದಿಂದ ದೂರವೇ ಉಳಿದಿದ್ದರೂ ಗಾಸಿಪ್‌ಗಳಲ್ಲಿ ಸುದ್ದಿ ಆಗುತ್ತಲೇ ಇದ್ದರು. ಆರೋಗ್ಯವೂ ಸೇರಿ ಖಾಸಗಿ ಬದುಕಲ್ಲಿ ಹಲವು ಏರುಪೇರು ಕಂಡರೂ ಎನ್ನುವ ಸುದ್ದಿಗಳು ಹರಿದಾಡಿದ್ದವು.

 

ಆ ಮೇಲೆ ಮತ್ತೆ ಚಿತ್ರರಂಗಕ್ಕೂ ಬಂದರು. ಅಷ್ಟಾಗಿಯೂ ಅವರು ಹೆಚ್ಚಾಗಿ ಎಲ್ಲೂ ಖಾಸಗಿ ವಿಚಾರಗಳ ಬಗ್ಗೆ ಮಾತನಾಡಿರಲಿಲ್ಲ. ಇದೀಗ ವೀಕೆಂಡ್‌ ವಿತ್‌ ರಮೇಶ್‌ ಕಾರ್ಯಕ್ರಮಲ್ಲಿ ಅವರು ಮನ ಬಿಚ್ಚಿ ಮಾತನಾಡಿರುವುದಕ್ಕೆ ಕಾರ್ಯಕ್ರಮದ ಪ್ರೋಮೋ ಸಾಕ್ಷಿ ಆಗಿದೆ. ಅವರ ಮಾತುಗಳಿಗೆ ವೀಕೆಂಡ್‌ಗೆ ಕಾಯಲೇಬೇಕಿದೆ.