ಇಡೀ ದೇಶ ಲೋಕಸಭಾ ಚುನಾವಣಾ ಫಲಿತಾಂಶಕ್ಕಾಗಿ ಕಾತರದಿಂದ ಕಾಯುತ್ತಿದೆ. ಮತಗಟ್ಟೆ ಸಮೀಕ್ಷೆಗಳು ಹೊರ ಬಿದ್ದಿದ್ದು ಮೋದಿ ಮತ್ತೊಮ್ಮೆ ಪ್ರಧಾನಿ ಎಂಬುದನ್ನು ಹೇಳುತ್ತಿದೆ. ವಿವೇಕ್ ಒಬೆರಾಯ್, ಸಲ್ಮಾನ್ ಖಾನ್ ಹಾಗೂ ಐಶ್ವರ್ಯಾ ರೈ ಸಂಬಂಧವನ್ನು ಚುನಾವಣಾ ಫಲಿತಾಂಶಕ್ಕೆ ಹೋಲಿಸಿ ಮಾಡಿದ ಟ್ರೋಲ್ ಅನ್ನು ವಿವೇಕ್ ಒಬೆರಾಯ್ ಶೇರ್ ಮಾಡುವ ಮೂಲಕ ವಿವಾದಕ್ಕೀಡಾಗಿದ್ದಾರೆ. 

ಈ ಟ್ರೋಲ್ ಗೆ ವಿವೇಕ್ ಒಬೆರಾಯ್ ಉತ್ತರಿಸಿದ್ದು, ‘ಹಹಹಹ... ಕ್ರಿಯೇಟಿವ್ ಆಗಿದೆ. ಇದರಲ್ಲಿ ಯಾವುದೇ ಪಾಲಿಟಿಕ್ಸ್ ಇಲ್ಲ... ಇದು ಜೀವನ‘ ಎಂದಿದ್ದರು. ವಿವೇಕ್ ಒಬೆರಾಯ್ ಪ್ರತಿಕ್ರಿಯೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು.  

ಐಶ್ವರ್ಯಾ ರೈಯನ್ನು ಅನಗತ್ಯವಾಗಿ ಎಳೆದು ತಂದಿದ್ದಕ್ಕೆ ವಿವೇಕ್ ಒಬೆರಾಯ್ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಮಹಿಳಾ ಆಯೋಗ ಎಚ್ಚರಿಸಿತ್ತು. 

ಕೂಡಲೇ ಟ್ವೀಟ್ ಡಿಲೀಟ್ ಮಾಡಿದ ವಿವೇಕ್ ಕ್ಷಮೆಯಾಚಿಸಿದ್ದಾರೆ. ‘ ನನ್ನ ರಿಪ್ಲೆಯಿಂದ ಯಾರಿಗಾದ್ರೂ ನೋವಾಗಿದ್ರೆ ಕ್ಷಮಿಸಿ. ಮಹಿಳಾ ಸಬಲೀಕರಣಕ್ಕಾಗಿ ಕಳೆದ 10 ವರ್ಷಗಳಿಂದ ಶ್ರಮಿಸುತ್ತಿದ್ದೇನೆ. ಮಹಿಳೆಯರಿಗೆ ಅಗೌರವ ತೋರಿಸಲು ಸಾಧ್ಯವೇ ಇಲ್ಲ’ ಎಂದಿದ್ದಾರೆ.