ವಿನೋದ್ ಆಳ್ವಾ ಕಮ್ ಬ್ಯಾಕ್!

First Published 5, Feb 2018, 5:39 PM IST
Vinod Alva to come back to sandalwood
Highlights

'ಪ್ರೇಮ ಯುದ್ಧ' ಚಿತ್ರದ ಮೂಲಕ ವಿನೋದ್ ಆಳ್ವಾ ಮತ್ತೆ ಸ್ಯಾಂಡಲ್‌ವುಡ್‌ಗೆ ರೀ ಎಂಟ್ರಿ ಕೊಡುತ್ತಿದ್ದಾರೆ.

ಹಳೇ ಸಿನಿಮಾಗಳ ಶೀರ್ಷಿಕೆಗಳೇ ಮತ್ತೊಂದು ಸಿನಿಮಾಕ್ಕೆ ಟೈಟಲ್ ಆಗುತ್ತಿರುವ ಟ್ರೆಂಡ್‌ನಲ್ಲೀಗ 'ಪ್ರೇಮ ಯುದ್ಧ' ಚಿತ್ರದ ಸರದಿ. ಟೈಗರ್ ಪ್ರಭಾಕರ್, ಅರ್ಜುನ್ ಸರ್ಜಾ ಹಾಗೂ ಜಯಮಾಲ ಅಭಿನಯದಲ್ಲಿ ಹಲವು ವರ್ಷಗಳ ಹಿಂದೆಯೇ ಬಂದು ಹೋಗಿದ್ದ ಈ ಚಿತ್ರದ ಟೈಟಲ್ ಮತ್ತೊಂದು ಚಿತ್ರಕ್ಕೆ ಟೈಟಲ್ ಆಗಿದೆ. ಅಂದ ಹಾಗೆ, ಇದು ಆ ಚಿತ್ರದ ಸೀಕ್ವೆಲ್ ಅಲ್ಲ. ಇವೆರಡಕ್ಕೂ ಯಾವುದೇ ಕಲೆಕ್ಷನ್ ಕೂಡ ಇಲ್ಲ. ಇದೊಂದು ಹೊಸಬರ ಚಿತ್ರ. ಹಾಗೆಯೇ ಹೊಸ ಬಗೆಯ ಕತೆಯಂತೆ.

ಅದರಾಚೆ, ಈ ಚಿತ್ರ ವಿಶೇಷವಾಗಿ ಗಮನ ಸೆಳೆದಿದ್ದು ನಟ ವಿನೋದ್ ಆಳ್ವಾ ಆಗಮನದ ಮೂಲಕ. ಯಾಕಂದ್ರೆ, ನಾಲ್ಕೈದು ವರ್ಷಗಳ ನಂತರ ಬಹುಭಾಷಾ ನಟ ವಿನೋದ್ ಆಳ್ವಾ ಈ ಚಿತ್ರದೊಂದಿಗೆ ಮತ್ತೆ ಕನ್ನಡಕ್ಕೆ ಬಂದಿದ್ದಾರೆ. ಎಂದಿನಂತೆ ಅವರಿಲ್ಲಿ ತಮ್ಮ ನೆಚ್ಚಿನ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.  

loader