ಸಾಮಾಜಿಕ ಜಾಲತಾಣದಲ್ಲಿ ವಿಜಯ್ ಹಾಗೂ ರಶ್ಮಿಕಾ ಫ್ಯಾನ್ಸ್ ಕ್ಲಬ್ ಹೆಚ್ಚು ಆ್ಯಕ್ಟೀವ್ ಇದ್ದು ಯಾವುದೇ ವಿಚಾರವಿದ್ರೂ ಚರ್ಚೆ ಆಗುತ್ತದೆ. ಕೆಲ ದಿನಗಳ ಹಿಂದೆ ರಿಲೀಸ್ ಆದ ಡಿಯರ್ ಕಾಮ್ರೇಡ್ ಟೀಸರ್ ಸಿಕ್ಕಾಪಟ್ಟೆ ಟ್ರಾಲಿಗರಿಗೆ ಆಹಾರವಾಗಿದೆ. ಇದಕ್ಕೆ ಕಾರಣ ಅದರಲ್ಲಿರುವ ಲಿಪ್ ಲಾಪ್ ದೃಶ್ಯ.

 

ಖಾಸಗಿ ವೆಬ್ ಸೈಟ್ ನಡೆಸಿದ ಸಂದರ್ಶನದಲ್ಲಿ ವಿಜಯ್ ಇದರ ಬಗ್ಗೆ ಮಾತನಾಡುತ್ತಾ, ‘ರಶ್ಮಿಕಾ ಫ್ಯಾನ್ಸ್ ಇಂತಹ ವಿಚಾರವನ್ನು ಇಷ್ಟು ಸೀರಿಯಸ್ ಆಗಿ ತೆಗೆದುಕೊಂಡಿರುವುದು ಸ್ವಲ್ಪ ಬೇಸರವಾಗಿದೆ. ನನ್ನ ಬಗ್ಗೆ ಏನೇ ಮಾತನಾಡಿದರೂ ತೊಂದರೆ ಇಲ್ಲ ಆದರೆ ರಶ್ಮಿಕಾಗೆ ಇದರಿಂದ ಯಾವುದೇ ಕೆಟ್ಟ ಹೆಸರು ಬರಬಾರದು ಅಷ್ಟೆ ’ ಎಂದು ಮಾತನಾಡಿದ್ದಾರೆ.

 

ಅಷ್ಟೇ ಅಲ್ಲದೆ ಅಭಿಮಾನಿಗಳಿಗೆ ಒಂದು ಕಿವಿಮಾತು ಸಹ ಹೇಳಿದ್ದಾರೆ. ‘ಚರ್ಚೆ ಮಾಡುವುದಕ್ಕೆ ದೇಶದಲ್ಲಿ ಆಗುತ್ತಿರುವ ಎಷ್ಟೋ ವಿಚಾರಗಳಿದೆ. ಅದನ್ನು ಬಿಟ್ಟ ಸಿನಿಮಾದಲ್ಲಿ ಅಭಿನಯಿಸುವ ಕಿಸ್ ಸೀನ್ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ’ಎಂದಿದ್ದಾರೆ.

 

ಬಹುತೇಕ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಕಿಸ್ಸಿಂಗ್ ದೃಶ್ಯಗಳಿದ್ದು ಇದಕ್ಕೆ ಅಭಿಮಾನಿಗಳು ಈತ ದಕ್ಷಿಣ ಭಾರತದ ಇಮ್ರಾನ್ ಹಶ್ಮಿ ಎಂದು ಕರೆಯುತ್ತಾರೆ.