ನಟ ವಿಜಯ್ ದೇವರಕೊಂಡ ಸಹೋದರ ಆನಂದ್ ದೇವರಕೊಂಡ ಟಾಲಿವುಡ್‌ಗೆ ದೊರಸಾನಿ ಚಿತ್ರದ ಮೂಲಕ ಎಂಟ್ರಿ ಕೊಡುತ್ತಿದ್ದಾರೆ.

ಅರ್ಜುನ್ ರೆಡ್ಡಿ ಮೂಲಕ ಇಂಡಸ್ಟ್ರಿಯಲ್ಲೇ ಹೊಸ ಅಲೆ ಹುಟ್ಟಿಸಿದ ನಟ ವಿಜಯ್ ದೇವರಕೊಂಡ ಟಾಲಿವುಡ್ ಇಮ್ರಾನ್ ಹಾಶ್ಮಿ ಎಂದು ಖ್ಯಾತರು.

ಇನ್ನು ದೇವರಕೊಂಡ ಬ್ರ್ಯಾಂಡ್‌ಗೆ ಪವರ್ ತುಂಬಲೂ ವಿಜಯ್ ಸಹೋದರ ಆನಂದ್ ಟಾಲಿವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ. ಅದು 'ದೊರಸಾನಿ' ಚಿತ್ರದ ಮೂಲಕ.

ಕೆವಿಆರ್ ಮಹೇಂದ್ರ ನಿರ್ದೇಶನದ ದೊರಸಾನಿಗೆ ನಟ ರಾಜಶೇಖರ್ ಪುತ್ರಿ ಶಿವಾತ್ಮಿಕ ನಾಯಕಿಯಾಗಿ ಅಭಿನಯಿಸಿದ್ದಾರೆ. ದೊರಸಾನಿ ಚಿತ್ರವೂ ಅನಂದ್ ಹಾಗೂ ಶಿವಾತ್ಮಿಕಾಳಿಗೆ ಮೊದಲ ಸಿನಿಮಾ.

ಅಣ್ಣನ ಹಾದಿಯಲ್ಲೆ ಸಾಗಿರುವ ಆನಂದ್ ನಟನೆಯ ದೊರಸಾನಿ ಚಿತ್ರದಲ್ಲೂ ಲಿಪ್‌ಲಾಕ್‌ ದೃಶ್ಯ ಸೇರಿಸಲಾಗಿದೆ.

ಸದ್ದಿಲ್ಲದೇ ರಶ್ಮಿಕಾ ತವರಿಗೆ ಬಂದ ವಿಜಯ್ ದೇವರಕೊಂಡ!