1. ಟ್ವಿಟ್ಟರ್, ಫೇಸ್‌ಬುಕ್, ಇನ್‌ಸ್ಟಗ್ರಾಮ್- ಈ ಮೂವರಲ್ಲಿ ಯಾರು ಹಿತವರು?

ನಿಜವಾಗಿ ಹೇಳ್ಬೇಕಂದ್ರೆ, ನನಗೆ ಇಷ್ಟವಾಗೋದು ಇನ್‌ಸ್ಟಗ್ರಾಮ್ ಮಾತ್ರ. ಇಲ್ಲಿ ನಾನು ಸಾಕಷ್ಟು ಚಿತ್ರಗಳನ್ನು ಪೋಸ್ಟ್ ಮಾಡಿರುವೆ. ೆಟೋ ಬಿಟ್ಟರೆ ಬೇರಾವ ತತ್ವಗಳನ್ನೂ ಅಲ್ಲಿ ಹೇಳಲು ಸಾಧ್ಯವಿಲ್ಲ. ಒಂದು ವರ್ಷ ಕಾಲ ಟ್ವಿಟ್ಟರಿನಲ್ಲೂ ಕಾಲ ಕಳೆದೆ. ಅಲ್ಲಿ ನನಗೆ ಇಷ್ಟವಿಲ್ಲದ ವಿಚಾರಗಳು ಎದುರುಗೊಳ್ಳುತ್ತಿದ್ದವು. ಭಾರತದಲ್ಲಿದ್ದ ಎಲ್ಲ ಗಣ್ಯರನ್ನೂ ಫಾಲೋ ಮಾಡಲು ಸಾಧ್ಯವೇ ಆಗಲಿಲ್ಲ. ಅಂಥವರು ಬೇಸರವಾದರು. ಈಗಷ್ಟೇ ಫೇಸ್‌ಬುಕ್‌ಗೆ ಕಾಲಿಟ್ಟಿರುವೆ, ಅದೇನೂಂತ ನೋಡಬೇಕು.

2. ‘ಕಹಾನಿ 2’ ಚಿತ್ರದ ನಿಮ್ಮ ದುರ್ಗ ರಾಣಿ ಸಿಂಗ್ ಪಾತ್ರವನ್ನು 140 ಅಕ್ಷರಗಳಲ್ಲಿ ಹೇಳುವುದಾದರೆ?

ದುರ್ಗಾ ರಾಣಿ ಸಿಂಗ್ ಮಾಸಿದ ಬಣ್ಣದ ಮತ್ತು ಅಸಾಮಾನ್ಯ ಹೆಣ್ಣು.

3. ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಮನರಂಜನೆ ನೀಡುವ ವ್ಯಕ್ತಿ?

ಶಿರೀಶ್ ಕುಂದರ್! ಅವರ ಟ್ವೀಟ್‌ಗಳು ಕನಸಿನಲ್ಲೂ ನಗಿಸುತ್ತವೆ. ಅವರು ಋಣಾತ್ಮಕವಾಗಿ ಯೋಚಿಸುವಂತೆ ಟ್ವೀಟಿಸುವುದಿಲ್ಲ.

4. ಸಾಮಾಜಿಕ ಜಾಲತಾಣದಲ್ಲಿ ನೀವು ಮಾಡದ ಸಂಗತಿಯೇನು?

ಎಲ್ಲ ಸಂಗತಿಗಳಿಗೂ ಸುಖಾಸುಮ್ಮನೆ ಅಭಿಪ್ರಾಯ ನೀಡುವುದಿಲ್ಲ. ಪ್ರಸಕ್ತ ವಿದ್ಯಮಾನ, ಅದರಲ್ಲೂ ರಾಜಕೀಯ ಬೆಳವಣಿಗೆಗಳ ಕುರಿತು ನಾನು ಏನನ್ನೂ ಹೇಳುವುದಿಲ್ಲ. ಎಲ್ಲವಕ್ಕೂ ಪ್ರತಿಕ್ರಿಯೆ ನೀಡಬೇಕು ಅಂತೇನೂ ಇಲ್ವಲ್ಲಾ?

5. ಡಿಜಿಟಲ್ ಮೀಡಿಯಾ ಬಗ್ಗೆ ನಿಮ್ಗೆ ಮೊದಲು ಹೇಳಿದ್ದು ಯಾರು?

ಸುಜಯ್ ಘೋಷ್. 2009ರಲ್ಲಿ ಅವರೇ ನನ್ನಿಂದ ಟ್ವಿಟ್ಟರ್ ಖಾತೆಯನ್ನು ತೆರೆಸಿದರು. ಆದರೆ, ಐದು ವರ್ಷ ನಾನು ಟ್ವಿಟ್ಟರೊಳಗೆ ಕಾಲಿಡಲಿಲ್ಲ. ನನ್ನ ಮ್ಯಾನೇಜರ್ ಒತ್ತಾಯದ ಕಾರಣ ಕಳೆದ ವರ್ಷದಿಂದ ಟ್ವಿಟ್ಟರಿನಲ್ಲಿ ಸಕ್ರಿಯಳಾದೆ.

6. ಸೋಷಿಯಲ್ ಮೀಡಿಯಾಗಳಲ್ಲಿ ಎಷ್ಟು ಹೊತ್ತು ಕಳೆಯುತ್ತೀರಿ?

ಐದೇ ಐದು ನಿಮಿಷ! ನಾನು ಇದಕ್ಕೆ ಅಡಿಕ್ಟೇ ಆಗಿಲ್ಲ. ಕಳೆದ 9 ವರ್ಷದಿಂದ ನನ್ನ ೆನು ಸೈಲೆಂಟ್ ಮೋಡ್‌ನಲ್ಲಿದೆ!

(ಕೃಪೆ: ಫಲ್ಮ್'ಫೇರ್.ಕಾಂ)