8 ಸಾವಿರಕ್ಕೂ ಹೆಚ್ಚು ಭಕ್ತಿಗೀತೆಗಳ ಧ್ವನಿ ಮುದ್ರಿಕೆ ಹೊರ ತಂದಿದ್ದರು. ಆಡಿಯೋ ಖರೀದಿಯ ಮೂಲಕ ಸಿನಿಮಾ ಜಗತ್ತಿನಲ್ಲಿ ನಿಕಟವಾದ ಸಂಪರ್ಕ ಹೊಂದಿದ್ದರು
ಬೆಂಗಳೂರು(ಡಿ.11): ನಿರ್ಮಾಪಕ ಹಾಗೂ ಆನಂದ್ ಆಡಿಯೋ ಸಂಸ್ಥೆಯ ಮಾಲೀಕ ಮೋಹನ್ ಛಾಬ್ರಿಯಾ (52) ನಗರದಲ್ಲಿ ಶನಿವಾರ ನಿಧನರಾಗಿದ್ದಾರೆ. ಮೂರು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ವಾರದ ಹಿಂದೆ ಹೆಬ್ಬಾಳ ಕೆಂಪಾಪುರ ಬಳಿಯಿರುವ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಲಕಾರಿಯಾಗದೆ ಶನಿವಾರ ಬೆಳಗ್ಗೆ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
1999ರಲ್ಲಿ ಆನಂದ್ ಆಡಿಯೋ ಸಂಸ್ಥೆಯನ್ನು ಹುಟ್ಟು ಹಾಕಿದ್ದ ಮೋಹನ್, ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದರು. ಈವರೆಗೂ ಆನಂದ್ ಆಡಿಯೋ ಸಂಸ್ಥೆಯ ಮೂಲಕ 500ಕ್ಕೂ ಹೆಚ್ಚು ಚಿತ್ರಗಳ ಆಡಿಯೋ ಹಕ್ಕು ಖರೀದಿಸಿದ್ದರು. 8 ಸಾವಿರಕ್ಕೂ ಹೆಚ್ಚು ಭಕ್ತಿಗೀತೆಗಳ ಧ್ವನಿ ಮುದ್ರಿಕೆ ಹೊರ ತಂದಿದ್ದರು. ಆಡಿಯೋ ಖರೀದಿಯ ಮೂಲಕ ಸಿನಿಮಾ ಜಗತ್ತಿನಲ್ಲಿ ನಿಕಟವಾದ ಸಂಪರ್ಕ ಹೊಂದಿದ್ದ ಅವರು, ‘ಫ್ರೆಂಡ್ಸ್, ‘ರೌಡಿ ಅಳಿಯ’, ‘ವಿಕ್ಟರಿ’ ಹಾಗೂ ‘ಚೆಡ್ಡಿದೋಸ್ತ್’ ಚಿತ್ರಗಳಿಗೆ ನಿರ್ಮಾಪಕರೂ ಆಗಿದ್ದರು.
