ರಾಷ್ಟ್ರಪತಿ ರಾಮನಾಥ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವಾರು ಗಣ್ಯರು ಹಿರಿಯ ನಟನ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.

ಮುಂಬೈ(ಸೆ.30):ಶತ್ರಂಜ್ ಕೇ ಖಿಲಾಡಿ’, ‘ಜುನೂನ್ಮತ್ತು ಕ್ರಾಂತಿಮುಂತಾದ ಚಿತ್ರಗಳಲ್ಲಿ ತಮ್ಮ ಅದ್ಭುತ ನಟನೆಯಿಂದ ಸುಪ್ರಸಿದ್ಧರಾಗಿದ್ದ ಟೀವಿ ಮತ್ತು ಚಲನಚಿತ್ರ ನಟ ಟಾಮ್ ಆಲ್ಟರ್ (67) ನಿಧನರಾಗಿದ್ದಾರೆ.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ನಟ ಆಲ್ಟರ್, ಚರ್ಮದ ಕ್ಯಾನ್ಸರ್‌ನ ಕೊನೆ ಹಂತದಲ್ಲಿದ್ದರು. ಕಳೆದ ವರ್ಷದಿಂದ ಚರ್ಮದ ಕ್ಯಾನ್ಸರ್‌ಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು ಈ ತಿಂಗಳ ಆರಂಭದಲ್ಲಿ, ಮುಂಬೈಯ ಸೈಫೀ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ರಾತ್ರಿ ಅವರು ಕೊನೆಯುಸಿರೆಳೆದರು.

ವರ್ಲಿಯ ಸ್ಮಶಾನದಲ್ಲಿ ಶನಿವಾರ ಕುಟುಂಬ ಸದಸ್ಯರು, ಗಣ್ಯರ ಸಮ್ಮುಖದಲ್ಲಿ ಆಲ್ಟರ್‌ರ ಅಂತ್ಯ ಸಂಸ್ಕಾರ ನಡೆಯಿತು. ರಾಷ್ಟ್ರಪತಿ ರಾಮನಾಥ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವಾರು ಗಣ್ಯರು ಹಿರಿಯ ನಟನ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.

ಕನ್ನಡದಲ್ಲಿ ನಟನೆ

ಟಾಮ್ಆಲ್ಟರ್1977ರಲ್ಲಿ ಅನಂತ್ ನಾಗ್ ಅಭಿನಯಿಸಿದ್ದ 'ಕನ್ನೇಶ್ವರ ರಾಮ' ಚಿತ್ರದಲ್ಲಿ ಬ್ರಿಟಿಷ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅಮರಿಕದ ಕ್ರಿಶ್ಚಿಯನ್ ಮಿಶಿನರಿಯ ಪುತ್ರರಾಗಿ 1950, ಜೂನ್ 22 ರಂದು ಭಾರತದಉತ್ತರಖಾಂಡದ ಮುಸ್ಸೂರಿಯಲ್ಲಿಜನಿಸಿದ ಟಾಮ್ಬಾಲಿವುಡ್ ಸಿನಿಮಾ ಕ್ಷೇತ್ರದಲ್ಲಿ ಹೆಚ್ಚು ಖ್ಯಾತಿ ಗಳಿಸಿದ್ದರು.