ಕೇಂದ್ರ ಸರ್ಕಾರವು ಕಾಶ್ಮೀರದ ವಿಚಾರದಲ್ಲಿ ಐತಿಹಾಸಿಕ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಆರ್ಟಿಕಲ್ 370, 35 [A) ನ್ನು ರದ್ದುಗೊಳಿಸಿ ಐತಿಹಾಸಕ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. 

ರಾಜ್ಯ ತೊರೆಯಲು ಎಲ್ಲಾ ಪ್ರವಾಸಿಗರು, ಕ್ರಿಕೆಟಗರಿಗೆ, ಯಾತ್ರಿಕರಿಗೆ ತುರ್ತಾಗಿ ರಾಜ್ಯ ಬಿಡಬೇಕೆಂಬ ಕಟ್ಟಾಜ್ಞೆ ನೀಡಲಾಗಿತ್ತು. ಇಂಟರ್ ನೆಟ್ ಸ್ಥಗಿತಗೊಳಿಸಲಾಗಿತ್ತು.  ಒಮರ್ ಅಬ್ದುಲ್ಲಾ, ಮುಫ್ತಿ ಮೆಹಬೂಬಾ ಸೇರಿದಂತೆ ಹಲವು ನಾಯಕರನ್ನು ಗೃಹ ಬಂಧನಕ್ಕೆ ಒಳಪಡಿಸಲಾಗಿದೆ. ಈ ಎಲ್ಲಾ ಬೆಳವಣಿಗೆಗಳು ಭಾರೀ ಕುತೂಹಲ ಮೂಡಿಸಿತ್ತು. ಕಾಶ್ಮೀರದಲ್ಲಿ ಏನು ನಡೆಯುತ್ತಿದೆ ಎಂದು ಎಲ್ಲರ ಚಿತ್ತ ಕಾಶ್ಮೀರದತ್ತ ನೆಡುವಂತೆ ಮಾಡಿತ್ತು. 

ಈ ಬೆಳವಣಿಗೆ ಪಾಕಿಸ್ತಾನಕ್ಕೆ ನಡುಕ ಹುಟ್ಟಿಸಿದೆ. ಭಾರತ ಏನು ಮಾಡುತ್ತಿದೆ ಎಂದು ಆತಂಕಗೊಂಡಿದ್ದಾರೆ. ಭಾರತೀಯ ಸೇನಾ ಕ್ರಮವನ್ನು ವಿರೋಧಿಸಿದ್ದಾರೆ. ಅವರಲ್ಲಿ ಪಾಕಿಸ್ತಾನಿ ನಟಿ ವೀಣಾ ಮಲ್ಲಿಕ್ ಕೂಡಾ ಒಬ್ಬರು.  ಭಾರತೀಯ ಸೇನೆ ಕಡೆ ಬೆಟ್ಟು ಮಾಡಿ ತೋರಿಸಿ ಅಧಿಕ ಪ್ರಸಂಗತನ ತೋರಿಸಿದ್ದಾರೆ.

 

‘ಭಾರತ ಕಾಶ್ಮೀರದಲ್ಲಿ ಕ್ರೌರ್ಯವನ್ನು ಮೆರೆಯುತ್ತಿದೆ’ ಎಂದು ಬರೆದು #IndianArmyInKashmir #IndianArmy ಎಂದು ಬರೆದಿದ್ದಾರೆ.  ಕೈ ತೋರಿಸಿದ್ದಾರೆ. ಇದು ಟ್ವೀಟಿಗರ ಆಕ್ರೋಶಕ್ಕೆ ಕಾರಣವಾಗಿದೆ.