ಕ್ರಿಕಟ್ ದಂತಕಥೆ ಸಚಿನ್ ತೆಂಡೂಲ್ಕರ್ ಫೀಲ್ಡ್ ನಲ್ಲಿ ಆಟ ಆಡುವುದನ್ನು ನೋಡಿದ್ದೀರಿ. ಆದರೆ ಗಲ್ಲಿಗಳಲ್ಲಿ ಆಟ ಆಡುವುದನ್ನು ನೋಡಿದ್ದೀರಾ? ಹಾಗಾದ್ರೆ ಇಲ್ಲಿದೆ ನೋಡಿ. 

ಗುರುವಾರ ನ್ಯಾಷನಲ್ ಸ್ಪೋರ್ಟ್ಸ್ ದಿನ ಅಭಿಷೇಕ್ ಬಚ್ಚನ್ ಹಾಗೂ ವರುಣ್ ಧವನ್ ಜೊತೆ ಗಲ್ಲಿಯಲ್ಲಿ ಕ್ರಿಕೆಟ್ ಆಡಿದ್ದಾರೆ. ಈ ವಿಡಿಯೋವನ್ನು ನೋಡಿ ಅಭಿಮಾನಿಗಳು ಸಖತ್ ಖುಷಿಪಟ್ಟಿದ್ದಾರೆ. ಅವರೂ ಕೂಡಾ ಸಿಕ್ಕಾಪಟ್ಟೆ ಫನ್ ಮಾಡಿದ್ದಾರೆ. 

 

ಅಭಿಷೇಕ್ ಬಚ್ಚನ್, ಸಚಿನ್ ತೆಂಡೂಲ್ಕರ್ ಅವರ ದೊಡ್ಡ ಫ್ಯಾನ್. ‘ನನಗೆ ಎಕ್ಸೈಟ್ ಮೆಂಟನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಅಂತೂ ಕನಸು ನನಸಾಗಿದೆ. ಥ್ಯಾಂಕ್ಯೂ ಸೋ ಮಚ್ ಎಂದು ಖುಷಿಯನ್ನು ವ್ಯಕ್ತಪಡಿಸಿದ್ದಾರೆ. 

ವರುಣ್ ಧವನ್ ಕೂಡಾ ಟ್ವೀಟ್ ಮಾಡಿದ್ದಾರೆ. 


ಜೊತೆಗೆ ವರುಣ್- ಸಚಿನ್ ಫಿಟ್ ನೆಸ್ ಪ್ರಾಮುಖ್ಯತೆ ಬಗ್ಗೆ ಮಾತನಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಫಿಟ್ ನೆಸ್ ಇಂಡಿಯಾ ಮೂವ್ ಮೆಂಟ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.