ಫೋಕ್ ಶೈಲಿಯಲ್ಲಿ ಪಕ್ಕಾ ದೇಸಿ ಸೊಗಡಿನಲ್ಲಿ ಹಾಡುವ ಗಾಯಕಿ ಈಕೆ ತಮಿಳು ಚಿತ್ರರಂಗದ ಪ್ರಸಿದ್ಧ ಗಾಯಕಿ. ಅಂಧ ಗಾಯಕಿ ಇವರು. ಈಗ ಕನ್ನಡದ ‘ಲಂಬೋದರ’ ಚಿತ್ರಕ್ಕೆ ಹಾಡಿದ್ದಾರೆ.

ಯೋಗೇಶ್ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ‘ಕೇಳಿ ಇವ ತುಂಬಾನೇ ಒಳ್ಳೆ ಕೇಡಿ.... ಲಂಬೋದರ, ಬಾಡಿ ಇಡೀ ಊರೆಲ್ಲ ವೇಸ್ಟು ಬಾಡಿ... ಲಂಬೋದರ’ ಎನ್ನುವ ಹಾಡನ್ನು ತುಂಬಾ ಭಿನ್ನವಾಗಿ ಹಾಡಿದ್ದಾರೆ. ಇದೇ ಹಾಡು ಯೂಟ್ಯೂಬ್‌ನಲ್ಲಿ ಕೇಳುಗರಿಂದ ಮೆಚ್ಚುಗೆ ಗಳಿಸುತ್ತಿದೆ. ಚಿತ್ರದ ಈ ಶೀರ್ಷಿಕೆ ಗೀತೆಯನ್ನು ಶ್ರೀಮುರಳಿ ಇತ್ತೀಚೆಗೆ ಬಿಡುಗಡೆ ಮಾಡಿದ್ದಾರೆ.

ಹೀರೋ ಪರಿಚಯದ ಹಾಡು ಇದು. ಕಾರ್ತಿಕ್ ಶರ್ಮಾ ಸಂಗೀತ, ಅರವಿಂದ್ ಎಸ್. ಕಶ್ಯಪ್ ಛಾಯಾಗ್ರಹಣ ಈ ಚಿತ್ರದಲ್ಲಿ ಯೋಗೇಶ್, ಆಕಾಂಕ್ಷ, ಧರ್ಮಣ್ಣ, ಅಚ್ಯುತ್ ಕುಮಾರ್, ಅರುಣಾ ಬಾಲರಾಜ್ ಮುಂತಾದವರು ನಟಿಸಿದ್ದಾರೆ. ವಿಶ್ವೇಶ್ವರ್ ಪಿ ಹಾಗೂ ರಾಘವೇಂದ್ರ ಭಟ್ ಅವರು ಈ ಚಿತ್ರ ನಿರ್ಮಿಸಿದ್ದಾರೆ. ಕೃಷ್ಣರಾಜ್ ನಿರ್ದೇಶನದ ಚಿತ್ರವಿದು.