ಮುಂಬೈ[ಏ.10]: ಸೂಪರ್‌ ಹಿಟ್‌ ‘ಉರಿ-ದ ಸರ್ಜಿಕಲ್‌ ಸ್ಟೆ್ರೖಕ್‌’ ಚಿತ್ರದಲ್ಲಿ ಗೃಹ ಸಚಿವರಾಗಿ ಪಾತ್ರ ನಿರ್ವಹಿಸಿದ್ದ ಹಿರಿಯ ನಟ ನವತೇಜ್‌ ಹುಂಡಾಲ್‌ ಸೋಮವಾರ ನಿಧನರಾದರು.

ಹಲವಾರು ಬಾಲಿವುಡ್‌ ಸಿನಿಮಾ ಹಾಗೂ ಟೀವಿ ಕಾರ್ಯಕ್ರಮಗಳಲ್ಲಿ ಹಲವು ಪ್ರಮುಖ ಪಾತ್ರ ನಿರ್ವಹಿಸಿದ್ದ ನವತೇಜ್‌ ಅವರು ಸಂಜಯ್‌ ದತ್‌ ಅಭಿನಯದ ‘ಖಳ್‌ನಾಯಕ್‌’, ಟೀವಿ ಕಾರ್ಯಕ್ರಮವಾದ ‘ದೂಸ್ರಾ ಕಾನೂನ್‌’ಗಳಲ್ಲಿ ಕೂಡ ನಟಿಸಿದ್ದರು.

ಅವರಿಗೆ ಪತ್ನಿ ಹಾಗೂ ಇಬ್ಬರು ಪುತ್ರಿಯರಿದ್ದಾರೆ. ಇವರ ಅಗಲಿಕೆಗೆ ಸಿನಿಮಾ ಮತ್ತು ಟೀವಿ ಕಲಾವಿದರ ಸಂಘಟನೆ ಆಘಾತ ವ್ಯಕ್ತಪಡಿಸಿದೆ.