ಪುನಿತ್ ಅಭಿನಯದ ಮೊದಲ ಚಿತ್ರ 'ಅಪ್ಪು' ಸಿನಿಮಾಕ್ಕೆ 'ತಾಲಿಬಾನ್ ಅಲ್ಲ ಅಲ್ಲ' ಎಂಬ ಹಾಡು ಬರೆದು ಎಲ್ಲರ ಬಾಯಲ್ಲೂ ಗುನುಗುವಂತೆ ಮಾಡಿದ್ದರು. ಇದಕ್ಕೆ ಅಪ್ಪು ಕೂಡ ಉಪ್ಪಿಗೆ ಕೃತಜ್ಞತೆ ಸಲ್ಲಿಸಿದ್ದರು.ಇತ್ತೀಚಿಗಷ್ಟೆ ರಿಯಲ್ ಸ್ಟಾರ್ ಉಪೇಂದ್ರ ರಾಜಕುಮಾರ ಸಿನಿಮಾದ ಬಗ್ಗೆ ಟ್ವೀಟ್ ಮಾಡಿದ್ದು,' ಈ ಸಿನಿಮಾ 25 ದಿನಗಳನ್ನ ಪೂರೈಸಿ 50ನೇ ದಿನದತ್ತ ಮುನ್ನಗುತ್ತಿದ್ದು  ಬಾಕ್ಸ್ ಆಫೀಸ್'ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದೆ' ಎಂದು ಬರೆದುಕೊಂಡಿದ್ದರು. ಈ ಅಂಶ ಕೂಡ ಪುನಿತ್ ಚಿತ್ರಕ್ಕೆ ಕೆಲಸ ಮಾಡುವ ಸುಳಿವೇ ಆಗಿದೆ.

ಬೆಂಗಳೂರು(ಏ.30): ರಾಜ'ಕುಮಾರ ಚಿತ್ರದಲ್ಲಿ ಅಪ್ಪು ಅಭಿನಯವನ್ನು ಮೆಚ್ಚಿಕೊಂಡಿರುವ ಉಪ್ಪಿ ಸ್ಟಾರ್ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಬೇಕು ಎಂಬ ತಮ್ಮ ಮಹದಾಸೆಯನ್ನು ತೋಡಿಕೊಂಡಿದ್ದಾರೆ. ಓಂ ಸಿನಿಮಾದಿಂದ ಇಲ್ಲಿಯ ತನಕ ಪುನೀತ್ ಮತ್ತು ಉಪೇಂದ್ರ ಒಡನಾಟ ಹೆಮ್ಮರವಾಗಿ ಬೆಳೆದಿದೆ. ಈ ಸಲಿಗೆಯಿಂದಲೇ ರಿಯಲ್ ಸ್ಟಾರ್ ಉಪೇಂದ್ರ ಪವರ್ ಸ್ಟಾರ್ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಬೇಕಂತ ಸಾಕಷ್ಟು ಬಾರಿ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ.

ಮೊದಲ ಚಿತ್ರಕ್ಕೆ ಹಾಡು ಬರೆದಿದ್ದ ಉಪ್ಪಿ

ಪುನಿತ್ ಅಭಿನಯದ ಮೊದಲ ಚಿತ್ರ 'ಅಪ್ಪು' ಸಿನಿಮಾಕ್ಕೆ 'ತಾಲಿಬಾನ್ ಅಲ್ಲ ಅಲ್ಲ' ಎಂಬ ಹಾಡು ಬರೆದು ಎಲ್ಲರ ಬಾಯಲ್ಲೂ ಗುನುಗುವಂತೆ ಮಾಡಿದ್ದರು. ಇದಕ್ಕೆ ಅಪ್ಪು ಕೂಡ ಉಪ್ಪಿಗೆ ಕೃತಜ್ಞತೆ ಸಲ್ಲಿಸಿದ್ದರು.ಇತ್ತೀಚಿಗಷ್ಟೆ ರಿಯಲ್ ಸ್ಟಾರ್ ಉಪೇಂದ್ರ ರಾಜಕುಮಾರ ಸಿನಿಮಾದ ಬಗ್ಗೆ ಟ್ವೀಟ್ ಮಾಡಿದ್ದು,' ಈ ಸಿನಿಮಾ 25 ದಿನಗಳನ್ನ ಪೂರೈಸಿ 50ನೇ ದಿನದತ್ತ ಮುನ್ನಗುತ್ತಿದ್ದು ಬಾಕ್ಸ್ ಆಫೀಸ್'ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದೆ' ಎಂದು ಬರೆದುಕೊಂಡಿದ್ದರು. ಈ ಅಂಶ ಕೂಡ ಪುನಿತ್ ಚಿತ್ರಕ್ಕೆ ಕೆಲಸ ಮಾಡುವ ಸುಳಿವೇ ಆಗಿದೆ.

ರಾಜ್ ಬ್ಯಾನರ್'ನಲ್ಲಿ ಓಂ ಹಾಗೂ ಸ್ವಸ್ತಿಕ್ ಚಿತ್ರ

ಈಗಾಗಲೇ ಡಾ.ರಾಜ್'ಕುಮಾರ್ ಬ್ಯಾನರ್'ನಲ್ಲಿ ಶಿವಣ್ಣನ ಜೊತೆ ಸೂಪರ್ ಡೂಪರ್ 'ಓಂ' ರಾಘಣ್ಣನೊಂದಿಗೆ ಸ್ವಸ್ತಿಕ್ ಚಿತ್ರವನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿದ್ದಾರೆ. ಪುನಿತ್ ಸಿನಿಮಾ ನಿರ್ದೇಶಿಸಿದರೆ ರಾಜ್ ಮೂವರು ಪುತ್ರರ ಸಿನಿಮಾ ನಿರ್ದೇಶಿಸಿದ 2ನೆ ದಾಖಲೆ ಅವರದಾಗುತ್ತದೆ. ಈ ಮೊದಲು ಎಸ್.ನಾರಾಯಣ್ ಮಾತ್ರ ಮೂರು ಕುಮಾರ್'ಗಳ ಚಿತ್ರಗಳನ್ನು ನಿರ್ದೇಶಿಸಿರುವುದು.