ಪೊಲಿಟಿಕಲ್ ಪ್ರಶ್ನೆಗೆ ಉಪ್ಪಿ ಪೊಲೈಟ್ ಉತ್ತರ

Upendra Political answer
Highlights

ಸದ್ಯದ ರಾಜಕೀಯ ವಿದ್ಯಮಾನಗಳ ಕುರಿತು ಉಪೇಂದ್ರ ಹೇಳುವುದು ಹೀಗೆ;  ಆದದ್ದೆಲ್ಲ ಒಳಿತೇ ಆಯಿತು. ಈ ಮಾತಿನಲ್ಲಿ ತುಂಬಾ ಅರ್ಥಗಳಿವೆ. ಇದು ನನಗೆ ನಾನು ಹೇಳಿಕೊಂಡ ಮಾತು ಕೂಡ ಹೌದು. ಅದೇ ಸಂದರ್ಭದಲ್ಲಿ ಜನ ಯಾರಿಗೂ ಬಹುಮತ ಕೊಟ್ಟ ಗೆಲ್ಲಿಸದ ಸ್ಥಿತಿಯೂ ಹೌದು. ಅಂಥ ಸ್ಥಿತಿಗೆ ಕಾರಣ ಯಾರೆಂಬುದು ಮತದಾರರಿಗೆ ಗೊತ್ತು. 

ಸದ್ಯದ ರಾಜಕೀಯ ವಿದ್ಯಮಾನಗಳ ಕುರಿತು ನಿಮ್ಮ ಪ್ರತಿಕ್ರಿಯೆ ಏನು?

ಆದದ್ದೆಲ್ಲ ಒಳಿತೇ ಆಯಿತು. ಈ ಮಾತಿನಲ್ಲಿ ತುಂಬಾ ಅರ್ಥಗಳಿವೆ. ಇದು ನನಗೆ ನಾನು ಹೇಳಿಕೊಂಡ ಮಾತು ಕೂಡ ಹೌದು. ಅದೇ ಸಂದರ್ಭದಲ್ಲಿ ಜನ ಯಾರಿಗೂ ಬಹುಮತ ಕೊಟ್ಟ ಗೆಲ್ಲಿಸದ ಸ್ಥಿತಿಯೂ ಹೌದು. ಅಂಥ ಸ್ಥಿತಿಗೆ ಕಾರಣ ಯಾರೆಂಬುದು ಮತದಾರರಿಗೆ ಗೊತ್ತು.

ಪಕ್ಷದ ಹೆಸರಿನ ಕಾರಣಕ್ಕೆ ಆದ ಗಲಾಟೆ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಇದು ನನಗೆ ನನ್ನವರಿಂದಲೇ ಆದ ಮೊದಲ ರಾಜಕೀಯ ಪಾಠ. ಮೊದಲ ಅನುಭವ. ಇಂಥ ಪೆಟ್ಟುಗಳು ತಿನ್ನುತ್ತಲೇ ಮತ್ತಷ್ಟು ಗಟ್ಟಿಯಾಗಬೇಕು ಎನ್ನುವುದನ್ನು ಮನವರಿಕೆ ಮಾಡಿಕೊಟ್ಟ ಘಟನೆ ಅದು. ಈ ಬೆಳವಣಿಗೆಗಳನ್ನು ನೋಡಿದರೆ

ನೀವು ಹೇಳುವ ರಾಜಕೀಯ ವ್ಯವಸ್ಥೆ ತರುವುದಕ್ಕೆ ಸಾಧ್ಯವೇ?

ಖಂಡಿತ ಸಾಧ್ಯ. ಮತದಾರರಿಗೆ ಇಷ್ಟ ಇದೆಯೋ ಇಲ್ಲವೋ ಅಭ್ಯರ್ಥಿಗಳಿಗೆ ಮತ ಹಾಕಬೇಕಿತ್ತು. ಇದು ಒಂದು ಕಾಲದ ಮಾತು. ಆದರೆ ಈಗ!? ಅಭ್ಯರ್ಥಿಗಳನ್ನು ರಿಜೆಕ್ಟ್ ಮಾಡುವ ಹಕ್ಕು ಸಿಕ್ಕಿದೆ. ಈ ಬಾರಿ ಹತ್ತಿರತ್ತಿರ ನಾಲ್ಕು ಲಕ್ಷ ನೋಟಾ ಮತಗಳು ಚಲಾವಣೆ ಆಗಿವೆ. ಇದೊಂದು ಬದಲಾವಣೆ. ಜಾತಿ, ಧರ್ಮ, ದುಡ್ಡು ಇವುಗಳ ಹೊರತಾಗಿಯೂ ಒಂದು ರಾಜಕೀಯ ವ್ಯವಸ್ಥೆ ಇದೆ. ಚುನಾವಣೆ ಇದೆ ಎಂಬುದನ್ನು ತುಂಬಾ ಗಟ್ಟಿಯಾಗಿ ಜನಕ್ಕೆ ನಿರಂತರವಾಗಿ ಹೇಳುತ್ತ ಬರಬೇಕು. ಸೋಲು- ಗೆಲುವು ಸ್ಪರ್ಧಿಸಿದವನ ವೈಯಕ್ತಿಕ ವಿಚಾರಗಳಲ್ಲ. ಅದು ಜನ ಕೊಟ್ಟ ತೀರ್ಪು. ಜನಾದೇಶವನ್ನು ಪ್ರಭಾವಗಳಿಂದ ದೂರವಿಡಬೇಕು. ಅದೇ ಉತ್ತಮ ಪ್ರಜಾಕೀಯದ ಉದ್ದೇಶ ಕೂಡ. 

ಪ್ರತಿ ಚುನಾವಣೆಗೂ ಪಕ್ಷಗಳು ಹೊರತರುವ ಪ್ರಣಾಳಿಕೆಗಳ ಕುರಿತು ಹೇಳುವುದಾದರೆ?

ಪ್ರಚಾರದ ಕರಪತ್ರದಂತೆ ಪ್ರಣಾಳಿಕೆಗಳನ್ನು ಪ್ರಿಂಟ್ ಮಾಡಿ ವಿತರಣೆ ಮಾಡುವ ಕೆಟ್ಟ ವ್ಯವಸ್ಥೆಗೆ ಮೊದ್ಲು ಬ್ರೇಕ್ ಹಾಕಬೇಕು. ಪ್ರತಿ ಪ್ರಣಾಳಿಕೆಗೂ ಕೋರ್ಟ್ ನಿಯಮಗಳು ಅನ್ವಯ ಆಗಬೇಕು. ಮೊದಲೇ ಕೋರ್ಟ್‌ನಲ್ಲಿ ನೋಂದಣಿ ಮಾಡಿಸಿ ಬಿಡುಗಡೆ ಮಾಡಬೇಕು. ತಾವು ಹೇಳಿಕೊಂಡಂತೆ ಗೆದ್ದ ಮೇಲೆ ತಾವು ತಮ್ಮ ಪ್ರಣಾಳಿಕೆಯಲ್ಲಿರುವ ಕೆಲಸಗಳನ್ನು ಮಾಡದಿದ್ದಾಗ ಅದೇ ಪ್ರಣಾಳಿಕೆ, ಅದನ್ನು ಬಿಡುಗಡೆ ಮಾಡಿ ಗೆದ್ದ ಪಕ್ಷದ ವಿರುದ್ಧ ಕೋರ್ಟ್‌ನಲ್ಲಿ ಕೇಸ್ ಹೂಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಜನರಿಂದ ತೆರಿಗೆ ರೂಪದಲ್ಲಿ ಸಂಗ್ರಹಿಸಿದ ದುಡ್ಡಿಗೆ ಲೆಕ್ಕ ಕೊಡುವಂತಹ ಕೆಲಸ ಮಾಡಬೇಕು. ಅಂಥ ಕೆಲಸ ಒಳಗೊಂಡ ಪ್ರಣಾಳಿಕೆ ಚುನಾವಣೆಗೂ ಆರು ತಿಂಗಳ ಮೊದಲೇ ಬಿಡುಗಡೆ ಮಾಡಬೇಕು. ಯಾಕೆಂದರೆ ಲೀಡರ್ ಆಯ್ಕೆ ಆದವನು ಜನರ ತೆರಿಗೆ ದುಡ್ಡಿಗೆ ಲೆಕ್ಕ ಕೊಡೋ ಗುಮಾಸ್ತನೇ ಹೊರತು, ಆತನಿಗೆ ಹೆಚ್ಚುವರಿಗೆ ಕೊಂಬುಗಳು ಇರಲ್ಲ. 

ಒಂದು ವೇಳೆ ಈ ಚುನಾವಣೆಯಲ್ಲಿ ಉಪ್ಪಿ ಪಕ್ಷ ಸ್ಪರ್ಧಿಸಿ ಗೆದ್ದಿದ್ದರೆ ಯಾರಿಗೆ ನಿಮ್ಮ ಬೆಂಬಲ ಇರುತ್ತಿತ್ತು?

ಈ ಪೊಲಿಟಿಕಲ್ ಉಪೇಂದ್ರನಿಗೆ ಅಧಿಕಾರದ ಆಸೆ ಇಲ್ಲ. ಹೀಗಾಗಿ ನನ್ನ ಬೆಂಬಲ ಯಾರಿಗೆ ಇರುತ್ತಿತ್ತು ಎನ್ನುವುದಕ್ಕೆ ನನ್ನಿಂದ ಬೆಂಬಲ ಬಯಸುವವರ ಮುಂದೆ ನಾನು ಜನರ ಪರವಾಗಿ ಒಂದಿಷ್ಟು ಬೇಡಿಕೆಗಳನ್ನು ಮುಂದಿಡುತ್ತಿದ್ದೆ. ಅವುಗಳನ್ನು ಯಾರು ಈಡೇರಿಸುತ್ತಾರೆ ಅವರಿಗೆ ನನ್ನ ಬೆಂಬಲ ಅಂತ ಹೇಳುತ್ತಿದ್ದೆ.

ಲೋಕಸಭಾ ಹಾಗೂ ಬಿಬಿಎಂಪಿ ಚುನಾವಣೆ ನಿಮ್ಮ ಟಾರ್ಗೆಟ್ ಆಗಲಿದೆಯೇ?

ಆ ನಿಟ್ಟಿನಲ್ಲಿ ನಮ್ಮ ಪಕ್ಷ ಕೆಲಸ ಮಾಡುತ್ತಿದೆ. ನಿರಂತರವಾಗಿ ಜನರ ಜತೆಗೆ ಇದ್ದೇನೆ. ಪೇಪರ್‌ಗಳಲ್ಲಿ ಕೋಟಿ ಕೋಟಿಗಳ ವೆಚ್ಚದಲ್ಲಿ ಪ್ರಾಜೆಕ್ಟ್‌ಗಳನ್ನು ತೋರಿಸಿ ವಿಧಾನಸಭೆ, ಲೋಕಸಭೆಯಲ್ಲಿ ಗಲಾಟೆ ಮಾಡಿಕೊಳ್ಳುವುದು ಯಾರಿಗೂ ಬೇಕಿಲ್ಲ. ಊಟ, ವಸತಿ, ಕುಡಿಯುವ ನೀರು, ಉತ್ತಮ ಶಿಕ್ಷಣ, ದುಡಿಯುವ ಕೈಗಳಿಗೆ ಕೆಲಸ, ರೈತನಿಗೆ ಕೃಷಿಗೆ ನೆಮ್ಮದಿಯ ಬಾಳು. ನೂರು ಕೋಟಿಯ ಹತ್ತಾರು ಪ್ರಾಜೆಕ್ಟ್‌ಗಳನ್ನು ಘೋಷಣೆ ಮಾಡಿ ಒಂದೇ ಒಂದು ಯೋಜನೆಯೂ ಜಾರಿ ಮಾಡದೆ ಹೋಗುವ ಬದಲು ೫೦ ಲಕ್ಷದ ಸಾಮಾನ್ಯ ಜನರ ಯೋಜನೆ ಜಾರಿಗೆ ತರುವಂತಹ ಕೆಲಸ ಮಾಡಬೇಕು.  

loader