ಬಾಲಿವುಡ್‌ನ ಬಿಗ್‌ಬಿ, ಅಮಿತಾಬ್ ಬಚ್ಚನ್ ಒಂದೇ ಸಮನೆ ಪ್ರಸಿದ್ಧಿಯ ಏಣಿ ಹತ್ತುತ್ತಾ ಮೇಲೆ ಬಂದವರು. ಈ ನಡುವಲ್ಲೂ ಅವರು ಸಾಕಷ್ಟು ಸೋಲು, ನಿರಾಶೆಗಳನ್ನು ಹೊತ್ತು ಸಾಗಿದರು ಎಂದು ಎಲ್ಲರಿಗೂ ಗೊತ್ತಿದೆ. ಏಳು-ಬೀಳುಗಳ ಯಾನದಲ್ಲಿ ಯಾವುದಕ್ಕೂ ಹೆದರದೆ ಸಾಗಿ ಬಂದ ಈ ಪ್ರತಿ‘ೆಗೆ ಇಂದು 75ರ ಸಂಭ್ರಮ. ಇದರ ಆಚರಣೆಗೆ ಇಡೀ ಬಾಲಿವುಡ್ ಸಜ್ಜಾಗಿದೆ. ಈ ಸಡಗರದ ನಡುವಲ್ಲೇ ನಾವು ಅಮಿತಾಬ್ ಬಗ್ಗೆ ಗೊತ್ತಿರದ ಕೆಲವು ಸಂಗತಿಗಳ ಕಡೆಗೆ ಬೆಳಕು ಚೆಲ್ಲುತ್ತಿದ್ದೇವೆ.

ಬಾಲಿವುಡ್‌ನ ಬಿಗ್‌ಬಿ, ಅಮಿತಾಬ್ ಬಚ್ಚನ್ ಒಂದೇ ಸಮನೆ ಪ್ರಸಿದ್ಧಿಯ ಏಣಿ ಹತ್ತುತ್ತಾ ಮೇಲೆ ಬಂದವರು. ಈ ನಡುವಲ್ಲೂ ಅವರು ಸಾಕಷ್ಟು ಸೋಲು, ನಿರಾಶೆಗಳನ್ನು ಹೊತ್ತು ಸಾಗಿದರು ಎಂದು ಎಲ್ಲರಿಗೂ ಗೊತ್ತಿದೆ. ಏಳು-ಬೀಳುಗಳ ಯಾನದಲ್ಲಿ ಯಾವುದಕ್ಕೂ ಹೆದರದೆ ಸಾಗಿ ಬಂದ ಈ ಪ್ರತಿ‘ೆಗೆ ಇಂದು 75ರ ಸಂಭ್ರಮ. ಇದರ ಆಚರಣೆಗೆ ಇಡೀ ಬಾಲಿವುಡ್ ಸಜ್ಜಾಗಿದೆ. ಈ ಸಡಗರದ ನಡುವಲ್ಲೇ ನಾವು ಅಮಿತಾಬ್ ಬಗ್ಗೆ ಗೊತ್ತಿರದ ಕೆಲವು ಸಂಗತಿಗಳ ಕಡೆಗೆ ಬೆಳಕು ಚೆಲ್ಲುತ್ತಿದ್ದೇವೆ.

1. 75ನೇ ವಯಸ್ಸಿನಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುತ್ತಿರುವ ಏಕೈಕ ನಟ. ಈಗಲೂ ಅವರ ಚಿತ್ರದಲ್ಲಿ ಅವರೇ ಹೀರೋ.

2 ಒಮ್ಮೆ ಅಮಿತಾಬ್ ಬಚ್ಚನ್ ಅವರನ್ನು ಯಾರೋ ಕೇಳಿದರಂತೆ ‘ನಿಮಗೆ ಬಾಲಿವುಡ್‌'ನಲ್ಲಿ ನಟಿಸುವ ಅವಕಾಶ ಸಿಗದೇ ಇದ್ದರೆ ಏನಾಗುತ್ತಿದ್ದಿರಿ’ ಎಂದು. ಅದಕ್ಕೆ ಅವರೇನೆಂದರು ಗೊತ್ತೇ ‘ನಾನು ಮುಂಬೈಗೆ ಬರುವಾಗಲೇ ಡ್ರೈವಿಂಗ್ ಲೈಸೆನ್ಸ್ ಜೇಬಲ್ಲಿ ಇಟ್ಟುಕೊಂಡು ಬಂದಿದ್ದೆ. ಒಂದು ವೇಳೆ ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಗದೇ ಇದ್ದಿದ್ದರೆ ಟ್ಯಾಕ್ಸಿ ಡ್ರೈವರ್ ಆಗಿರುತ್ತಿದ್ದೆ’ ಎಂದಿದ್ದರು.

3. ಅಮಿತಾಬ್ ಬಚ್ಚನ್ ಭಾರತೀಯ ಚಿತ್ರರಂಗದ ತಾರೆ. ಅವರು ಕನ್ನಡದಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೃತಧಾರೆ’ ಚಿತ್ರದಲ್ಲಿ ನಟಿಸಿದ್ದಾರೆ. ಇದು ಹೆಚ್ಚಿನವರೆಲ್ಲರಿಗೂ ಗೊತ್ತು. ಆದರೆ ಅವರು ಆ ಚಿತ್ರದಲ್ಲಿ ನಟಿಸಿದ್ದಕ್ಕಾಗಿ ಪಡೆದ ಸಂಭಾವನೆ ಎಷ್ಟು ಗೊತ್ತೆ? ಕೇವಲ ಒಂದು ರುಪಾಯಿ.

4 ಇನ್ನು ಇದೇ ‘ಅಮೃತಧಾರೆ’ ಚಿತ್ರಕ್ಕೆ ಅವರು ನೀಡದ ಸಹಕಾರದ ಬಗ್ಗೆ ಕೇಳಿದರೆ ಅವರ ಮೇಲಿನ ಅಭಿಮಾನ ಇಮ್ಮಡಿಗೊಳ್ಳುತ್ತದೆ. ಅದೇನಪ್ಪಾ ಎಂದರೆ, ಅಂದು ಅಮಿತಾಬ್ ಬಹು ಬೇಡಿಕೆ ಹೊಂದಿದ್ದ ಬಾಲಿವುಡ್‌'ನ ಬಿಗ್ ಸ್ಟಾರ್. ಅವರ ಡೇಟ್ ಸಿಗುವುದೇ ಕಷ್ಟ. ಇಂತಹ ವೇಳೆಯಲ್ಲಿ ಅವರು ಕನ್ನಡದ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದೇ ಹೆಚ್ಚು. ಅದರಲ್ಲಿಯೂ ನಿರ್ದೇಶಕರು ಮತ್ತು ನಿರ್ಮಾಪಕರಿಗೆ ಅವರು ಹೇಳಿದ್ದಾದರೂ ಏನು ಎಂದರೆ ‘ನಾನು ದೊಡ್ಡ ಸ್ಟಾರ್ ಎಂದುಕೊಂಡು ಅವಸರದಲ್ಲಿ ಶೂಟಿಂಗ್ ಮುಗಿಸಿ, ಆಮೇಲೆ ಗೊಂದಲ ಮಾಡಿಕೊಳ್ಳಬೇಡಿ. ನೀವು ಆರಾಮಾಗಿ ಶೂಟಿಂಗ್ ಮಾಡಿ. ನಿಮ್ಮ ಎಲ್ಲಾ ರೀತಿಯ ಕೆಲಸಗಳು ಫೈನಲ್ ಆದ ಮೇಲೆಯೇ ನಾನಿಲ್ಲಿಂದ ಹೊರಡುತ್ತೇನೆ’ ಎಂದಿದ್ದರು. ಅಂದರೆ ಹಿಂದಿಯೇತರ ಚಿತ್ರ, ಅದೂ ಚಿಕ್ಕ ಪಾತ್ರವಾದರೂ ಪರಿಪೂರ್ಣತೆಗಾಗಿ ತೋರಿದ ಬದ್ಧತೆ ಎಲ್ಲರಿಗೂ ಇಷ್ಟವಾಗುವಂತದ್ದು.

5 ಇನ್ನು ಅಮಿತಾಬ್ ಬಚ್ಚನ್ ಎತ್ತರದ ಆಳು. ಗೊಗ್ಗರು ಧ್ವನಿ. ಇದೇ ಕಾರಣಕ್ಕೆ ಅವರನ್ನು ಚಿತ್ರರಂಗದಿಂದ ತಿರಸ್ಕರಿಸುವ ತಂತ್ರವೂ ನಡೆದಿತ್ತಂದೆ. ಆದರೆ ಮುಂದೆ ಇದನ್ನೆ ತಮ್ಮ ಶಕ್ತಿಯಾಗಿ ಬಳಸಿಕೊಂಡು ಅಮಿತಾಬ್ ಮೇಲೆ ಬಂದರು. ಇದೇ ರೀತಿಯ ತಿರಸ್ಕಾರವನ್ನು ಸುದೀಪ್ ಕೂಡ ಅನುಭವಿಸಿದ್ದರು. ನಂತರ ಅವರು ‘ಬಚ್ಚನ್’ ಎನ್ನುವ ಸಿನಿಮಾದಲ್ಲಿ ನಟಿಸಿದ್ದು ಈ ಸಾಮ್ಯತೆಯ ಹಿನ್ನೆಲೆಯಲ್ಲಿ ವಿಶೇಷವಾದದ್ದು.

6 ಅಮಿತಾಬ್‌'ಗೆ ಇಂದು 75 ವರ್ಷ. ಅವರು ಸಿನಿಮಾ ರಂಗಕ್ಕೆ ಬಂದು ಐದು ದಶಕಗಳು ಉರುಳಿವೆ. ಇಲ್ಲಿಯವರೆವಿಗೂ ಅವರು ಸಭ್ಯತೆಯ ಎಲ್ಲೆ ಮೀರಿಲ್ಲ. ತುಳಿಯಲು ಮುಂದಾದವರ ನಡುವೆಯೇ ನಿಂತು ಹೆಸರಾಗಿದ್ದಾರೆ