Asianet Suvarna News Asianet Suvarna News

ಮತ್ತೆ ಬಣ್ಣ ಹಚ್ಚಿದ ಉಮಾಶ್ರೀ ; ಹೌಸ್‌ಫುಲ್ ಪ್ರದರ್ಶನ

ನಷ್ಟದಲ್ಲಿದ್ದ ನಾಟಕ ಕಂಪನಿಯ ಕೈ ಹಿಡಿದ ನಟಿ ಉಮಾಶ್ರೀ | ನಾಟಕದಲ್ಲಿ ಅಭಿನಯಿಸುವ ಮೂಲಕ ಸಹಾಯ ಹಸ್ತ | ಚಾಮುಂಡಿ ಪಾತ್ರದ ರೌದ್ರನಟನೆಗೆ ಪ್ರೇಕ್ಷಕರಿಂದ ಶಿಳ್ಳೆ ಚಪ್ಪಾಳೆಗಳ ಸುರಿಮಳೆ

Umashree plays a mythological drama in Dodballapura
Author
Bengaluru, First Published Dec 26, 2018, 12:39 PM IST

ದೊಡ್ಡಬಳ್ಳಾಪುರ (ಡಿ. 26): ರಾಜಕೀಯದಲ್ಲಿ ಬ್ಯುಸಿಯಾಗಿದ್ದ ಖ್ಯಾತ ಪೋಷಕ ನಟಿ ಉಮಾಶ್ರೀ ಬಹುಕಾಲದ ನಂತರ ಬಣ್ಣ ಹಚ್ಚಿದ್ದಾರೆ.

ಪೌರಾಣಿಕ ನಾಟಕದಲ್ಲಿ ಉಮಾಶ್ರೀ ಬಣ್ಣ ಹಚ್ಚಿದರು. ಮಹಿಷಾಸುರ ಮರ್ಧಿನಿ ಪೌರಾಣಿಕ ನಾಟಕದಲ್ಲಿ ಚಾಮುಂಡಿಯ ಪಾತ್ರದಲ್ಲಿ ನಟಿಸಿದ ಉಮಾಶ್ರೀ ತಮ್ಮ ರೌದ್ರನಟನೆ ಮೂಲಕ  ಪೇಕ್ಷಕರನ್ನ ಮಂತ್ರಮುಗ್ದರನ್ನಾಗಿಸಿದರು. ಚಾಮುಂಡಿ ಅವತಾರದಲ್ಲಿ ಉಮಾಶ್ರೀಯನ್ನ ಕಣ್ತುಂಬಿಕೊಂಡ ಪ್ರೇಕ್ಷಕರು ಚಪ್ಪಾಳೆ ತಟ್ಟಿ ಖುಷಿ ಪಟ್ಟರು. 

ನಷ್ಟದಲ್ಲಿ ನಡೆಯುತ್ತಿದ್ದ ನಾಟಕ ಕಂಪನಿಗೆ ನೆರವಾಗುವ ಕಾರಣಕ್ಕೆ  ಪೌರಾಣಿಕ ನಾಟಕದಲ್ಲಿ ಅಭಿನಯಿಸಿದರು. ಉಮಾಶ್ರೀ ನಾಟಕದಲ್ಲಿ ಅಭಿನಯಿಸುವ ವಿಷಯ ತಿಳಿಯುತ್ತಲೇ ನಾಟಕ  ಹೌಸ್ ಫುಲ್ ಪ್ರದರ್ಶನ ಕಂಡಿತು . ನಷ್ಟದಲ್ಲಿ ನಡೆಯುತ್ತಿದ್ದ ನಾಟಕ ಕಂಪೆನಿಯ ಕಲೆಕ್ಷನ್ ಕೂಡಾ ಜೋರಾಗಿತ್ತು.  ಇದರ ಜೊತೆಗೆ ದೊಡ್ಡಬಳ್ಳಾಪುರ ನಗರದ ಕನ್ನಡಪರ ಸಂಘಟನೆಗಳು ಮತ್ತು ಕಲಾಭಿಮಾನಿಗಳ  ನೆರವಿನ ಮಹಾಪೂರವೇ ಹರಿಯಿತು. 

ಚಿತ್ರದುರ್ಗ ಮೂಲದ ಕುಮಾರಸ್ವಾಮಿ ಮಾಲೀಕತ್ವದ ಕುಮಾರೇಶ್ವರ ನಾಟಕ ಕಂಪನಿ ದೊಡ್ಡಬಳ್ಳಾಪುರ ನಗರದ ಕೋರ್ಟ್ ಬಳಿ ಟೆಂಟ್ ಹಾಕಿ ನಾಟಕ ಪ್ರದರ್ಶನ ನಡೆಸುತ್ತದೆ.  ಮೂರು ತಿಂಗಳಿಂದ ಪ್ರತಿದಿನ ಎರಡು ಪ್ರದರ್ಶನ ನಡೆಯುತ್ತಿತ್ತು.  ಅದರೆ ನಾಟಕ ನೋಡಲು ಜನ ಮಾತ್ರ ಬರಲಿಲ್ಲ. ಪ್ರತಿ ಪ್ರದರ್ಶನದಲ್ಲಿ ಬೆರಳೆಣಿಕೆಯ ಜನ ಮಾತ್ರ ನಾಟಕ ನೋಡಲು ಬರುತ್ತಿದ್ದರು. 

ಪ್ರತಿ ಪ್ರದರ್ಶನಕ್ಕೆ 10  ಸಾವಿರ ಹಣ ಖರ್ಚಾಗುತ್ತಿತ್ತು. ಅದರೆ ಪ್ರತಿ ಪ್ರದರ್ಶನದಲ್ಲಿ 2 ಸಾವಿರ ಹಣ ಮಾತ್ರ ಕಲೆಕ್ಷನ್ ಆಗುತ್ತಿತ್ತು. ಇದರಿಂದ 4 ಲಕ್ಷ ಹಣ ನಷ್ಟ ಉಂಟಾಗಿತ್ತು ಕುಮಾರಸ್ವಾಮಿಯವರಿಗೆ. ಕುಮಾರಸ್ವಾಮಿಯವರ ಕಷ್ಟವನ್ನು ನೋಡಿ ಮಹಿಷಾಸುರ ಮರ್ಧಿನಿ ನಾಟಕದಲ್ಲಿ ಚಾಮುಂಡಿ ಪಾತ್ರದಲ್ಲಿ ನಟಿಸುವುದಾಗಿ ಹೇಳಿದರು. 

ಇನ್ನೂ ಉಮಾಶ್ರೀಯಾರು ಚಾಮುಂಡಿ ಪಾತ್ರದಲ್ಲಿ ಅಭಿನಯಿಸುತ್ತಿರುವ ವಿಷಯ ಕೇಳಿ ನಾಟಕ ಪ್ರದರ್ಶನಕ್ಕೆ ಜನಸಾಗರವೇ ಹರಿದು ಬಂದಿತ್ತು. ಮಹಿಷಾಸುರ ಮತ್ತು ಚಾಮುಂಡಿ ನಡುವಿನ ಡೈಲಾಗ್ ಗಳು ಪೇಕ್ಷಕರನ್ನು ಮನಸೊರೆಗೊಂಡಿತು. ಉಮಾಶ್ರೀಯವರ ರೌದ್ರನಟನೆಗೆ ಪ್ರೇಕ್ಷಕರಿಂದ ಶಿಳ್ಳೆ ಚಪ್ಪಾಳೆಗಳ ಸುರಿಮಳೆಯಾಯಿತು. ಉಮಾಶ್ರೀಯವರ ನಟನೆ ನಾಟಕ ಕಂಪನಿಯ ಕಲೆಕ್ಷನ್ ಜೋರು ಮಾಡಿತು. 

ಮಹಿಷಾಸುರ ಮರ್ಧಿನಿ ನಾಟಕ ಇಲ್ಲಿದೆ ನೋಡಿ 

"

Follow Us:
Download App:
  • android
  • ios