ಇದೇ ತಿಂಗಳು 19ನೇ ತಾರೀಖು ಲಂಡನ್ನ ಪಾರ್ಲಿಮೆಂಟ್ ಸಂಸ್ಥೆ ಪ್ರತಿಷ್ಠಿತ ಗ್ಲೋಬಲ್ ಡೈವರ್ಸಿಟಿ ಅವಾರ್ಡ್ ನೀಡಲು ಮುಂದಾಗಿದೆ.
ಸ್ಯಾಂಡಲ್ವುಡ್ನಲ್ಲಿ ಹಲವಾರು ಚಿತ್ರಗಳಿಂದ ಜನರ ಮನಗೆದ್ದಿರುವ ದರ್ಶನ್ಗೆ ಈಗ ಲಂಡನ್ ಸಂಸ್ಥೆಯೊಂದು ಪ್ರಶಸ್ತಿಗೆ ಆಯ್ಕೆ ಮಾಡಿದೆ. ಇದೇ ತಿಂಗಳು 19ನೇ ತಾರೀಖು ಲಂಡನ್ನ ಪಾರ್ಲಿಮೆಂಟ್ ಸಂಸ್ಥೆ ಪ್ರತಿಷ್ಠಿತ ಗ್ಲೋಬಲ್ ಡೈವರ್ಸಿಟಿ ಅವಾರ್ಡ್ ನೀಡಲು ಮುಂದಾಗಿದೆ. ಈ ಪ್ರಶಸ್ತಿಯನ್ನ ಪಡೆದ ದಕ್ಷಿಣ ಚಿತ್ರರಂಗದ ಮೊದಲ ನಟ ಎಂಬ ಹೆಗ್ಗಳಿಕೆ ದರ್ಶನ್ ಪಾತ್ರವಾಗಲಿದ್ದಾರೆ. ದರ್ಶನ್ ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
