ಅದರಂತೆ ಟ್ವಿಂಕಲ್ ಖನ್ನಾ ಹಾಸ್ಯಮಯ ಅಂಕಣದಲ್ಲಿ ಸಲ್ಮಾನ್ ಖಾನ್ ಮದುವೆ ಬಗ್ಗೆ ಬರೆದಿದ್ದಾರೆ.

ಬಾಲಿವುಡ್‌ನ ಮೋಸ್ಟ್‌ ಎಲಿಜಿಬಲ್‌ ಬ್ಯಾಚುಲರ್‌ ಸಲ್ಮಾನ್‌ ಖಾನ್‌ಗೆ ಅಕ್ಷಯ್‌ ಪತ್ನಿ ಟ್ವಿಂಕಲ್‌ ಖನ್ನಾ ಕಿಚಾಯಿಸಿದ್ದಾರೆ. ಪ್ರತಿಷ್ಠಿತ ಪತ್ರಿಕೆಯೊಂದು ಟ್ವಿಂಕಲ್‌ ಖನ್ನಾರಿಗೆ ವರ್ಷಾಂತ್ಯಕ್ಕೆ ಹಾಸ್ಯಮಯ ಅಂಕಣವೊಂದನ್ನು ಬರೆಯುವಂತೆ ಕೇಳಿತ್ತು. ಅದರಂತೆ ಟ್ವಿಂಕಲ್ ಖನ್ನಾ ಹಾಸ್ಯಮಯ ಅಂಕಣದಲ್ಲಿ ಸಲ್ಮಾನ್ ಖಾನ್ ಮದುವೆ ಬಗ್ಗೆ ಬರೆದಿದ್ದಾರೆ. ಭಾರತದಲ್ಲಿಯೇ ವಯಸ್ಸಾದ ಹಾಗೂ ಈಗಲೂ ಬ್ರಹ್ಮಚಾರಿಯಾಗಿರೋ ವರನಿಗೆ ವಧು ಬೇಕಾಗಿದ್ದಾಳೆ. ಮಾಂಸಹಾರಿ, ಡ್ಯಾಷಿಂಗ್‌, ಯಶಸ್ವಿ ಮತ್ತು ಕಟ್ಟುಮಸ್ತಾದ ಖಾಂದಾನಿ ಹುಡುಗನಾಗಿದ್ದಾನೆ. ಈ ವರ, ವಧು ಯಾವುದೇ ಜಾತಿ ಆಗಿರಬಹುದು. ಸಂಪರ್ಕಿಸಿ Sultan@Bhaijaan.com'ಈ ರೀತಿ ತಮ್ಮ ಅಂಕಣದಲ್ಲಿ ಟ್ವಿಂಕಲ್ ಖನ್ನಾ ಬರೆದಿದ್ದಾರೆ.