10. ಸೋನಂ ಕಪೂರ್: 15 ಮಿಲಿಯನ್ ಡಾಲರ್ 

ಬಾಲಿವುಡ್‌ನ 'ನಾಯಕ್' ಎಂದೇ ಖ್ಯಾತಿ ಪಡೆದ ಅನಿಲ್ ಕಪೂರ್ ಮಗಳು ಸೋನಂ ಕಪೂರ್ ಬಾಲಿವುಡ್‌ನ ಶ್ರೀಮಂತ ನಟಿಯರ ಪಟ್ಟಿಯಲ್ಲಿ 10 ಸ್ಥಾನದಲ್ಲಿದ್ದಾರೆ. ಎಲ್ಲಾ ಪಾತ್ರಳನ್ನು ಸಲೀಸಾಗಿ ನಿಭಾಯಿಸುವ ಸೋನಂ ಕಪೂರ್ ಬರೋಬ್ಬರಿ 15 ಮಿಲಿಯನ್ ಡಾಲರ್ ಆಸ್ತಿಯ ಒಡತಿಯಂತೆ. ಈ ನಟಿ 'ನೀರ್ಜಾ' ಸಿನಿಮಾದ ಪಾತ್ರದ ಮೂಲಕ ಜನರ ಮನೆ ಮಾತಾಗಿದ್ದಾರೆ.

09. ಕಾಜೋಲ್ ದೇವಗನ್: 16 ಮಿಲಿಯನ್ ಡಾಲರ್

ಡಿಡಿಎಲ್‌ಜೆ’, ’ಕಭೀ ಖುಷಿ ಕಭೀ ಗಮ್’, ’ಫನಾ’ ಮೊದಲಾದ ಸಿನಿಮಾಗಳ ಮೂಲಕ ಅಭಿಮಾನಿಗಳ ಹೃದಯ ಗೆದ್ದ ಕಾಜೋಲ್ ’ಕುಚ್ ಕುಚ್ ಹೋತಾ ಹೈ’ ಸಿನಿಮಾದಲ್ಲಿ ಹಠಮಾರಿ ಹುಡುಗಿಯಾಗಿ ಕಾಣಿಸಿಕೊಳ್ಳುವ ಮೂಲಕ ಅಂಜಲಿ ಎಂದೇ ಫೆಮಸ್ ಆದವರು,. ಅಂತಾರಾಷ್ಟ್ರೀಯ ಮಟ್ಟದಲ್ಲೂ ಫೇಮಸ್ ಆಗಿರುವ ಕಾಜೋಲ್ ಈ ಪಟ್ಟಿಯಲ್ಲಿ 9ನೇ ಸ್ಥನ ಅಲಂಕರಿಸಿದ್ದಾರೆ. ಇವರ ಒಟ್ಟು ಆಸ್ತಿ 16 ಮಿಲಿಯನ್ ಬೆಲೆಬಾಳುತ್ತದೆಯಂತೆ.

08. ಅಮೃತಾ ರಾವ್: 20.5 ಮಿಲಿಯನ್ ಡಾಲರ್

20.5 ಮಿಲಿಯನ್ ಡಾಲರ್ ಮೌಲ್ಯದ ಆಸ್ತಿ ಹೊಂದಿರುವ ಅಮೃತಾ ರಾವ್ ಬಾಲಿವುಡ್‌ನ ಶ್ರೀಮಂತ ನಟಿಯರ ಪಟ್ಟಿಯಲ್ಲಿ 8ನೇ ಸ್ಥಾನ ಅಲಂಕರಿಸಿದ್ದಾರೆ. ’ವೆಲ್ ಕಂ ಟು ಸಜ್ಜನ್‌ಪುರ್’, ’ವಿಕ್ಟರಿ’, ’ಅವರಾಪನ್’ ಸಿನಿಮಾಗಳಲ್ಲಿ ನಟಿಸಿರುವ ಅಮೃತಾ ’ವಿವಾಹ್’ ಸಿನಿಮದಲ್ಲಿ ಮ,ಅಡಿದ ಅದ್ಭುತ ನಟನೆಯ ಮೂಲಕ ಯುವಕರ ಮನ ಗೆದ್ದಿದ್ದಳು. 

07. ಅನುಷ್ಕಾ ಶರ್ಮಾ: 25 ಮಿಲಿಯನ್ ಡಾಲರ್

ಟೀಂ ಇಂಡಿಯಾದ ಕ್ಯಾಪ್ಟನ್‌ ಕೊಹ್ಲಿಯ ಮಡದಿ ಅನುಷ್ಕಾ ಶರ್ಮಾ ಈ ಪಟ್ಟಿಯಲ್ಲಿ ಏಳನೇ ಸ್ಥಾನ ಪಡೆದಿದ್ದಾರೆ. ಮಾಡೆಲ್ ಆಗಿ ತನ್ನ ವೃತ್ತಿ ಜೀವನ ಆರಂಭಿಸಿದ ಈಕೆ ಸದ್ಯ ಬಾಲಿವುಡ್‌ನ ಪ್ರಖ್ಯಾತ ನಾಯಕಿಯರಲ್ಲಿ ಒಬ್ಬಳು. ಇತ್ತೀಚೆಗೆ ನಿರ್ಮಾಪಕಿಯಾಗಿಯೂ ಕಾರ್ಯ ನಿರ್ವಹಿಸುತ್ತಿರುವ ಅನುಷ್ಕಾ 25 ಮಿಲಿಯನ್ ಡಾಲರ್ ಆಸ್ತಿಯ ಒಡತಿ. ಸದಾ ಸಿನಿಮಾಗಳಲ್ಲಿ ಬ್ಯೂಸಿಯಾಗಿರುವ ಈ ಬೆಡಗಿ ಶ್ರೀಮಂತರ ನಟಿಯರ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದರಲ್ಲಿ ಅಚ್ಚರಿಯಿಲ್ಲ.

06. ವಿದ್ಯಾ ಬಾಲನ್: 25 ಮಿಲಿಯನ್ ಡಾಲರ್

ಕಿರುತೆರೆಯಲ್ಲಿ 'ಹಮ್ ಪಾಂಚ್' ಶೋ ಮೂಲಕ ಯುವಕರ ಹೃದಯ ಗೆದ್ದ ನಟಿ ವಿದ್ಯಾ ಬಾಲನ್, ತನ್ನ ವೃತ್ತಿ ಆರಂಭಿಸಿದ್ದೇ ಅಲ್ಲಿಂದ. ಇದಾದ ಬಳಿಕ ಹಲವಾರು ಸಿನಿಮಾಗಳಲ್ಲಿ ಈ ನಟಿ ನಟಿಸಿದ್ದಳಾದರೂ ಅಷ್ಟೊಂದು ಹೆಸರು ಮಾಡಿರಲಿಲ್ಲ. ಹೀಗಿರುವಾಗ ವಿದ್ಯಾ ಸಿನಿಮಾ ಜರ್ನಿಗೆ ಬಹುದೊಡ್ಡ ತಿರುವು ನೀಡಿದ್ದು ’ಡರ್ಟಿ ಪಿಕ್ಷರ್', ಇದಾದ ಬಳಿಕ ಈ ನಟಿಗೆ ಅವಕಾಶಗಳು ಕಡಿಮೆಯಾಗಲೇ ಇಲ್ಲ. ಸದ್ಯ ಈ ನಟಿ ಶ್ರೀಮಂತ ಬಾಲಿವುಡ್ ನಟಿಯರ ಪಟ್ಟಿಯಲ್ಲಿ 6 ನೇ ಸ್ಥಾನ ಪಡೆದಿದ್ದು, ಈಕೆ ಬರೋಬ್ಬರಿ 25 ಮಿಲಿಯನ್ ಡಾಲರ್ ಅಸ್ತಿ ಹೊಂದಿದ್ದಾಳೆ.

05. ಪ್ರೀತಿ ಜಿಂಟಾ: 30 ಮಿಲಿಯನ್ ಡಾಲರ್

ಗುಳಿಗೆನ್ನೆಯಿಂದಲೇ ಹುಡುಗರ ಮನಗೆದ್ದಿದ್ದ ಸುಂದರಿ ಪ್ರೀತಿ ಜಿಂಟಾ, ಸದ್ಯ 30 ಮಿಲಿಯನ್ ಡಾಲರ್ ಆಸ್ತಿಯ ಒಡತಿ. ಈ ಮೂಲಕ ಬಾಲಿವುಡ್‌ನ ಶ್ರೀಮಂತ ನಟಿಯರ ಪಟ್ಟಿಯಲ್ಲಿ 5 ನೇ ಸ್ಥಾನ ಪಡೆದಿದ್ದಾರೆ. ’ವೀರ್ ಜಾರಾ’, ’ಕಲ್ ಹೋ ನಾ ಹೋ’ ಸಿನಿಮಾಗಳಲ್ಲಿ ಮರೆಯಲು ಸಾಧ್ಯವೇ ಇಲ್ಲ ಎಂಬಂತಹ ನಟನೆ ಮಾಡಿದ್ದ ಪ್ರೀತಿ, ಪ್ರಸ್ತುತ ಬಾಲಿವುಡ್‌ನಿಂದ ದೂರ ಉಳಿದಿರುವುದು ಮಾತ್ರ ನಿಜಕ್ಕೂ ಬೇಸರದ ವಿಚಾರ.

04. ಐಶ್ವರ್ಯಾ ರೈ: 35 ಮಿಲಿಯನ್ ಡಾಲರ್

1994ರಲ್ಲಿ ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡ ನೀಲಿಗಣ್ಣಿನ ಸುಂದರಿ ಐಶ್ವರ್ಯಾ ರೈ ಕನ್ನಡತಿ ಎಂಬುವುದು ಮತ್ತಷ್ಟು ಹೆಮ್ಮೆಯ ವಿಚಾರ. ’ಇರುವರ್’ ಸಿನಿಮಾ ಮೂಲಕ ತನ್ನ ಸಿನಿ ಜರ್ನಿ ಆರಂಭಿಸಿದ ಐಶ್ವರ್ಯಾ ರೈ ’ಔರ್ ಪ್ಯಾರ್ ಹೋಗಯಾ’, ’ಧೂಂ 2’, ’ಹಮ್ ದಿಲ್ ದೇ ಚುಕೆ ಸನಂ’, ’ದೇವದಾಸ್’ ಸಿನಿಮಾಗಳಿಂಂದ ಅಸಂಖ್ಯಾತ ಅಭಿಮಾನಿಗಳನ್ನು ಪಡೆದರವರು. ಸದ್ಯ ಬಾಲಿವುಡ್‌ನ ಬಚ್ಚನ್ ಫ್ಯಾಮಿಲಿ ಸೊಸೆಯಾಗಿರುವ ಐಶ್ವರ್ಯಾ ಬರೋಬ್ಬರಿ 35 ಮಿಲಿಯನ್ ಡಾಲರ್ ಆಸ್ತಿಯ ಒಡತಿ. ಈ ಮೂಲಕ ಈ ಪಟ್ಟಿಯಲ್ಲಿ ಮಂಗಳೂರಿನ ಬೆಡಗಿ 4ನೇ ಸ್ಥಾನ ಪಡೆದಿದ್ದಾರೆ.

03. ಮಾಧುರಿ ದೀಕ್ಷಿತ್: 35 ಮಿಲಿಯನ್ ಡಾಲರ್

ಮಾಧುರಿ ದೀಕ್ಷಿತ್ ಬಾಲಿವುಡ್‌ನ ಎವರ್‌ಗ್ರೀನ್ ತಾರೆ. ತನ್ನ ಡಾನ್ಸ್ ಹಾಗೂ ನಗುಮುಖದಿಂದಲೇ ಹುಚ್ಚೆಬ್ಬಿಸುವ ಈ ಸುಂದರಿ 35 ಮಿಲಿಯಬನ್ ಡಾಲರ್ ಒಡತಿ. ಮಾಧುರಿ ಬಾಲಿವುಡ್‌ನಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟಿಯಲ್ಲಿ ಒಬ್ಬರು. 

02. ಪ್ರಿಯಾಂಕಾ ಚೋಪ್ರಾ: 40 ಮಿಲಿಯನ್ ಡಾಲರ್

ವಿಶ್ವ ವಿಖ್ಯಾತ ನಟಿ ಹಾಗೂ 2000ನೇ ಇಸವಿಯಲ್ಲಿ ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡ ಬೆಡಗಿ ಬಾಲಿವುಡ್‌ನ ಶ್ರೀಮಂತ ನಟಿಯರ ಪಟ್ಟಿಯಲ್ಲಿ 2 ನೇ ಸ್ಥಾನದಲ್ಲಿದ್ದಾರೆ. 40 ಮಿಲಿಯನ್ ಡಾಲರ್ ಮೌಲ್ಯದ ಆಸ್ತಿ ಹೊಂದಿರುವ ಈಕೆ ಸದ್ಯ ಹಾಲಿವುಡ್ ಸಿನಿಮಾಗಳಲ್ಲೂ ನಟನೆ ಮಾಡುತ್ತಿದ್ದಾರೆ. ಆರಂಭದಲ್ಲಿ ಕೇವಲ ಭಾರತದಲ್ಲಷ್ಟೇ ಪ್ರಸಿದ್ಧಿ ಪಡೆದಿದ್ದ ಪಿಗ್ಗ ಕ್ವಾಂಟಿಕೋ ಶೋನಲ್ಲಿ ಭಾಗವಹಿಸಿದ ಬಳಿಕ ಟೆಲಿವಿಷನ್ ಕ್ಷೇತ್ರದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯಾದರು.

01. ದೀಪಿಕಾ ಪಡುಕೋಣೆ: 45 ಮಿಲಿಯನ್ ಡಾಲರ್

45 ಮಿಲಿಯನ್ ಡಾಲರ್ ಆಸ್ತಿ ಹೊಂದಿರುವ ದೀಪಿಕಾ ಪಡುಕೋಣೆ ಶ್ರೀಮಂತ ಬಾಲಿವುಡ್ ನಟಿಯರ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿದ್ದಾರೆ. ಹಲವಾರು ಸಿನಿಮಾಗಳಲ್ಲಿ ನಟಿಸಿದ್ದರೂ ಫೇಮಸ್ ಆಗದ ದೀಪಿಕಾ ಅದೃಷ್ಟ ಬದಲಾಯಿಸಿದ್ದು ’ಓಂ ಶಾಂತಿ ಓಂ’ ಸಿನಿಮಾ. ಇದಾದ ಬಳಿಕ ಆಕೆಯನ್ನು ಮೀರಿಸಲು ಯಾರಿಂದಲೂ ಸಾಧ್ಯವಾಗಲಿಲ್ಲ. ಮೂಲತಃ ಕರ್ನಾಟಕದವಳಾದ ದೀಪಿಕಾ ’ಚೆನ್ನೈ ಎಕ್ಸ್‌ಪ್ರೆಸ್’ ಸಿನಿಮಾ ಮೂಲಕ ದಕ್ಷಿಣ ಭಾರತೀಯರ ಮನವನ್ನೂ ಗೆದ್ದಿದ್ದರು. ’XXX’ ಸಿನಿಮಾದ ಮೂಲಕ ಹಾಲಿವುಡ್‌ನಲ್ಲೂ ತನ್ನ ಛಾಪು ಮೂಡಿಸಿದ ದೀಪಿಕಾ ಶೀಘ್ರದಲ್ಲೇ ಮಿಸಸ್ ದೀಪಿಕಾ ರಣ್ವೀರ್ ಸಿಂಗ್ ಆಗಲಿದ್ದಾರೆ.